ಹುಬ್ಬಳ್ಳಿ ಪೊಲೀಸರ ಅಪಾಯಕಾರಿ ಹೆಲ್ಮೆಟ್ ಕಾರ್ಯಾಚರಣೆ!

By: ಶಂಭು ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಮೇ. 30: ನಗರದ ಗೋಕುಲ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ 10 30 ರಿಂದ ಆರಂಭವಾದ ಹೆಲ್ಮೆಟ್ ಕಾರ್ಯಾಚರಣೆ ಅಪಾಯಕಾರಿಯಾಗಿ ಪರಿಣಮಿಸಿದ್ದು ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ವಿಮಾನ ನಿಲ್ದಾಣದಿಂದ ಹೊಸೂರು ಕಡೆಗೆ ಹೋಗುವ ದ್ವಿಪಥ ರಸ್ತೆಯಲ್ಲಿ ನಿಂತುಕೊಂಡು ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಇಲ್ಲದೇ ಬರುತ್ತಿರುವ ಬೈಕ್ ಸವಾರರನ್ನು ತಡೆದು ದಂಡ ವಿಧಿಸುತ್ತಿದ್ದಾರೆ. ಇದನ್ನು ಅರಿತ ಹತ್ತಿರದ ರಾಮಲಿಂಗೇಶ್ವರ ಕ್ರಾಸ್ ನ ಬಳಿ ಇರುವ ಸಾರ್ವಜನಿಕರು ಮತ್ತು ಆಟೋ ಚಾಲಕರು ವೇಗವಾಗಿ ಹೊರಟ ಬೈಕ್ ಸವಾರರಿಗೆ ಹೆಲ್ಮೆಟ್ ಹಿಡಿಯುವ ಬಗ್ಗೆ ತಲೆ ಮುಟ್ಟಿಕೊಂಡು ಸನ್ನೆ ಮಾಡುತ್ತಿದ್ದರು. [ನಾವು ಕಾರಿನಲ್ಲಿ ಹೋದರೂ ಹೆಲ್ಮೆಟ್ ಹಾಕಬೇಕಾ?]

helmet

ಜೂನ್ 4 ರಂದು ರಾಜ್ಯಾದ್ಯಂತ ಪೊಲೀಸರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾಮೂಹಿಕ ರಜೆ ಹಾಕಿದ್ದಾರೆ. ಇವರ ರಜೆಯ ಪ್ರತಿಭಟನೆಗೆ ನಗರದ ಹಲವಾರು ಸಂಘ, ಸಂಸ್ಥೆಗಳು, ಸಾರ್ವಜನಿಕರು ಬೆಂಬಲ ಸೂಚಿಸಿದ್ದರು. ಆದರೆ ಪೊಲೀಸರ ಈ ಅಪಾಯಕಾರಿ ಕಾರ್ಯಾಚರಣೆಯಿಂದ ನಾವು ಪೊಲೀಸರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದೇ ತಪ್ಪಾಯಿತೇ ಎಂದು ಮರುಗುತ್ತಿದ್ದಾರೆ.

ಇದನ್ನು ಅರಿತು ಜಾಗೃತಗೊಂಡ ಬೈಕ್ ಸವಾರರು ಬಂದ ವೇಗದಲ್ಲೇ ವಾಹನವನ್ನು ಹಿಂದಿರುಗಿಸಿಕೊಂಡು ಹೋಗುವುದು ಸಾಮಾನ್ಯ ದೃಶ್ಯವಾಗಿದೆ. ಇದೆಷ್ಟು ಅಪಾಯಕಾರಿ ಹೊಸ ಬಸ್ ನಿಲ್ದಾಣ ಹತ್ತಿರದಲ್ಲಿಯೇ ಇದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿಗೆ ಸೇರುವ ಬೈಪಾಸ್ ನಿಂದ ಬರುವ ವಾಹನಗಳೂ ಕೂಡ ಒನ್ ವೇ ಆಗಿರುವ ಈ ರಸ್ತೆಯಲ್ಲೇ ಬರಬೇಕು. ಅಕಸ್ಮಾತ್ ವೇಗವಾಗಿ ಬಂದ ವಾಹನಗಳು ಹೆಲ್ಮೆಟ್ ಹಿಡಿಯುತ್ತಾರೆ ಎಂದು ಹೆದರಿಕೊಂಡು ವಾಪಸ್ ಬರುವ ವಾಹನಗಳಿಗೆ ಡಿಕ್ಕಿಯಾದರೇ ಮುಗೀತು ಕಥೆ[ಹೆಲ್ಮೆಟ್‌ ಹಾಕದ ಕಾರು ಮಾಲೀಕರಿಗೆ ನೋಟಿಸ್!]

ಈಗಾಗಲೇ ಇಂಥಹ ಹಲವಾರು ಘಟನೆಗಳು ಇಲ್ಲಿ ನಡೆಯುತ್ತಿದ್ದರೂ ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಹೆಂಡತಿ, ಮಕ್ಕಳೊಂದಿಗೆ ಕುಟುಂಬ ಸಮೇತ , ಕಾಲೇಜು ವಿದ್ಯಾರ್ಥಿಗಳು ಮುಂತಾದ ಬೈಕ್ ಸವಾರರು ಜೀವ ಪಣಕ್ಕಿಟ್ಟು ಹೆಲ್ಮೆಟ್ ಗೆ ಹಿಡಿಯುತ್ತಾರೆ ಎಂದು ವಾಹನ ತಿರುಗಿಸಿಕೊಂಡು ಬರುತ್ತಿದ್ದಾರೆ. ಏನಾದರೂ ಅನಾಹುತ ಆದರೆ ಯಾರು ಹೊಣೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಕಣ್ಣಿಗೆ ಕಾಣದ ಕಾರುಗಳು:
ಇನ್ನು ಹೆಲ್ಮೆಟ್ ಇಲ್ಲದೇ ವಾಹನ ಓಡಿಸುತ್ತಿರುವವರನ್ನು ಹಿಡಿದು ದಂಡ ವಿಧಿಸುವ ಕಾರ್ಯಾಚರಣೆಯನ್ನು ದಿಢೀರ್ ಆಗಿ ಟ್ರಾಫಿಕ್ ಪೊಲೀಸರು ಕೈಗೊಂಡಿದ್ದಾರೆ. ನಿನ್ನೆಯವರೆಗೂ ಎಲ್ಲಿಯೂ ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಹುಬ್ಬಳ್ಳಿ ಬೈಕ್ ಸವಾರರು ನಿರ್ಭೀಡೆಯಿಂದ ವಾಹನ ಚಲಾಯಿಸುತ್ತಿದ್ದರು. ಈಗ ಒಮ್ಮೆಲೆ ಕಾರ್ಯಾಚರಣೆ ಕೈಗೊಂಡಿರುವ ಟ್ರಾಫಿಕ್ ಪೊಲೀಸರು ಕೇವಲ ಬೈಕ್ ಸವಾರರನ್ನೇ ಯಾಕೆ ಗುರಿಯಾಗಿಸಿಕೊಂಡಿದ್ದಾರೆ ಎಂದು ಬೈಕ್ ಸವಾರರು ಪ್ರಶ್ನಿಸಿದ್ದಾರೆ.

ಬೈಕ್ ಹಿಡಿಯುವ ಪೊಲೀಸರು ತಮ್ಮ ಕಣ್ಣೇದುರಿಗೇನೆ ಐಷಾರಾಮಿ ಕಾರಿನಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ಸೀಟ್ ಬೆಲ್ಟ್ ಹಾಗದೇ ಹೋಗುವವರನ್ನು ನೋಡಿಯೂ ನೋಡದಂತೆ ಇರುತ್ತಾರೆ. ಈ ರಸ್ತೆಯಲ್ಲಿ ವೇಗಮಿತಿ ಅಳವಡಿಸಲಾಗಿದೆ. ಆದರೆ ವೇಗಮಿತಿ ಮೀರಿ ವಾಹನ ಚಲಾಯಿಸುವವರನ್ನು ಸುಮ್ಮನೇ ಬಿಡುತ್ತಿರುವ ಟ್ರಾಫಿಕ್ ಪೊಲೀಸರು ಕೇವಲ ಬೈಕ್ ಸವಾರರನ್ನೇ ಗುರಿಯಾಗಿಸಿದ್ದು ಸಾರ್ವಜನಿಕರಿಗೆ ಸಂಶಯ ಮೂಡಲಾರಂಭಿಸಿದೆ. [ಹೆಲ್ಮೆಟ್ ಕಡ್ಡಾಯ; ಸಿ.ಎಂ ಮನೆ ಮುಂದೆ ಯುವಕ-ಯುವತಿ ಮಾಡಿದ್ದೇನು?]

ಎಲ್ಲೆಡೆ ಕ್ಯಾಮರಾ:
ನಗರದ ಹಲವಾರು ವೃತ್ತಗಳಲ್ಲಿ ವಿಶೇಷ ವಿಡಿಯೋ ಕ್ಯಾಮರಾವನ್ನು ಹು-ಧಾ ಪೊಲೀಸ್ ಕಮೀಷನರೇಟ್ ನಿಂದ ಅಳವಡಿಸಲಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಹಾಕಿಸಿರುವ ಈ ಕ್ಯಾಮರಾಗಳ ಮೂಲಕವೇ ಈ ಹಿಂದೆ ಹೆಲ್ಮೆಟ್ ಇಲ್ಲದ ಸವಾರರ ಫೋಟೋ ತೆಗೆದು ಅವರ ವಿಳಾಸಕ್ಕೆ ದಂಡ ತುಂಬುವ ನೋಟಿಸ್ ಕಳಿಸಲಾಗುತ್ತಿತ್ತು. ಆದರೆ ಪೊಲೀಸರ ಈ ದಿಢೀರ್ ಕಾರ್ಯಾಚರಣೆ ವಿಡಿಯೋ ಕ್ಯಾಮರಾಗಳು ಸರಿಯಾಗಿ ಕೆಲಸ ಮಾಡುತ್ತಿವೆಯೋ ಇಲ್ಲ ಎಂದು ಸಂಶಯ ಮೂಡಲಾರಂಭಿಸಿದೆ.

ಯಾಕೆಂದರೆ ಕ್ಯಾಮರಾದಲ್ಲೇ ಫೋಟೋ ತೆಗೆದು ದಂಡ ತುಂಬಿಸಲು ನೋಟಿಸ್ ಕಳಿಸಬಹುದಾಗಿತ್ತು. ಆದರೆ ಅಪಾಯಕಾರಿಯಾಗಿ ಮುಖ್ಯರಸ್ತೆಯಲ್ಲಿ ನಿಂತುಕೊಂಡು ಬೈಕ್ ಸವಾರರ ಜೀವಕ್ಕೂ ಅಪಾಯ ಒಡ್ಡುವ ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hubballi: Hubballi police tracking without helmet bike riders on 30 May 2016. This operation turn to very dangerous.
Please Wait while comments are loading...