ಹುಬ್ಬಳ್ಳಿ: ಜರ್ಮನ್ ಸಹಯೋಗದಲ್ಲಿ ಇನ್‌ಕಾಮೆಕ್ಸ್-2016

Written By:
Subscribe to Oneindia Kannada

ಹುಬ್ಬಳ್ಳಿ, ಮೇ. 30: ನಗರದಲ್ಲಿ ಜೂನ್ 1 ರಂದು ಇನ್ ಕಾಮೆಕ್ಸ್-2016 ಪ್ರದರ್ಶನದ ಪೂರ್ವ ಸಿದ್ಧತೆ ಉದ್ಘಾಟನೆ ನಡೆಯಲಿದೆ ಎಂದು ಇನ್ ಕಾಮೆಕ್ಸ್ ಸಮಿತಿ ಅಧ್ಯಕ್ಷ ಎಂ.ವಿ.ಕರಮರಿ ತಳಿಸಿದರು.

ಅವರು ಸೋಮವಾರ ಸಂಜೆ ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮತ್ತು ಜರ್ಮನ್ ದೇಶದ ವಾಣಿಜ್ಯ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.[ಒನ್‌ಇಂಡಿಯಾ ಫಲಶ್ರುತಿ: ಹುಬ್ಬಳ್ಳಿಯಲ್ಲಿ ಪೈಪ್‌ಲೈನ್ ದುರಸ್ತಿ]

hubballi


ಬಿವಿಬಿ ಕಾಲೇಜಿನ ಬಯೋಟೆಕ್ನಾಲಜಿ ಸಭಾಂಗಣದಲ್ಲಿ ಬೆಳಗ್ಗೆ 10-30ಕ್ಕೆ ಜರ್ಮನ್ ಜಾನ್ ರೋಢೆ ಕಾರ್ಯಕ್ರಮ ಉದ್ಘಾಟಿಸುವರು. ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ ಮತ್ತು ಭಾರತ-ಜರ್ಮನ್ ಜಂಟಿ ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಹುಬರ್ಟ್ ರೀಯಲಾರ್ಡ್ ಆಗಮಿಸಲಿದ್ದಾರೆ ಎಂದು ತಿಳಿಸಿದರು.[ಉತ್ತರಾಖಂಡ ಮೇಘಸ್ಪೋಟದಲ್ಲಿ ಸಿಲುಕಿದ್ದ ಕನ್ನಡಿಗರು ಪಾರು]

ಜಿಲ್ಲಾಧಿಕಾರಿ ರಾಜೇಂದ್ರ ಚೋಳಿನ್, ಕೆಎಲ್ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಅಶೋಕ ಶೆಟ್ಟರ್, ನಿರ್ದೇಶಕ ಶಂಕರಣ್ಣ ಮುನವಳ್ಳಿ ಭಾಗವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅಂದಾನಪ್ಪ ಸಜ್ಜನರ, ಮಹೇಂದ್ರ ಸಿಂಘಿ,ರಮೇಶ ಪಾಟೀಲ, ಸಿದ್ಧೇಶ್ವರ ಕಮ್ಮಾರ ಮತ್ತಿತರರು ಉಪಸ್ಥಿತರಿದ್ದರು.

ಏನಿದು ಇನಕಾಮೆಕ್ಸ್-2016 ?
ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು 1928 ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಈ ಸಂಸ್ಥೆಯಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಸದಸ್ಯತ್ವ ಹೊಂದಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೋದ್ಯಮದ ಬೆಳವಣಿಗೆ ಸಂಸ್ಥೆಯು ಶ್ರಮಿಸುತ್ತಿದೆ. 15 ವರ್ಷಗಳಲ್ಲಿ 4 ಬಾರಿ ಇನಕಾಮೆಕ್ಸ್ ವಸ್ತು ಪ್ರದರ್ಶನವನ್ನು ಏರ್ಪಡಿಸುತ್ತ ಬಂದಿರುವ ಸಂಸ್ಥೆಯು ಈಗ ಐದನೇ ಬಾರಿ ಆಯೋಜಿಸಿದೆ.

ಪ್ರದರ್ಶನಗಳಲ್ಲಿ 400 ಮಳಿಗೆಗಳಿರಲಿವೆ. ಎಲ್ಲ ತರಹದ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಮಾಡಲಾಗುತ್ತದೆ. ಕೇಂದ್ರ ಸರಕಾರದ ಮೇಕ್ ಇನ್ ಇಂಡಿಯಾದ ಯೋಜನೆಯಂತೆ ವಸ್ತು ಪ್ರದರ್ಶನದಲ್ಲಿ ಹಲವಾರು ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಹೆಸರಾಂತ ಉತ್ಪನ್ನಗಳ ಮಳಿಗೆಗಳು ಈ ವಸ್ತು ಪ್ರದರ್ಶನದಲ್ಲಿ ಇರಲಿವೆ.

ಯಾವಾಗ ನಡೆಯುವುದು ಇನಕಾಮೆಕ್ಸ್-2016
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಎಂಎಸ್ಎಂಇ, ಎನ್ಕೆಎಸ್ಎಸ್ಐಎ, ಕೇಂದ್ರ,ರಾಜ್ಯ ಸರಕಾರದ ವಿವಿಧ ಸಂಸ್ಥೆಗಳು ಹಾಗೂ ಮೊದಲ ಬಾರಿಗೆ ಜರ್ಮನ್ ರಾಷ್ಟ್ರದ ಸಹಯೋಗದಲ್ಲಿ ಡಿ.2 ರಿಂದ 6 ರವರೆಗೆ ಐದು ದಿನಗಳ ಕಾಲ ಈ ಪ್ರದರ್ಶನ ನಡೆಯಲಿದೆ. ಪ್ರದರ್ಶನದೊಂದಿಗೆ ಉಪನ್ಯಾಸ, ಕಾರ್ಯಾಗಾರ ಮತ್ತು ವ್ಯವಹಾರ ಬೆಳವಣಿಗೆಗೆ ಸಹಕಾರಿಯಾಗುವ ಅನೇಕ ಕಾರ್ಯಕ್ರಮಗಳು ಕೂಡ ಜರುಗಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: Hubballi gearing up for 'Incomex-2016' industrial exhibition. In the initiative of Karnataka Chamber Of Commerce and Industry and German commerce department. Pre-exhibition starts on June 1.
Please Wait while comments are loading...