ಹುಬ್ಬಳ್ಳಿ-ಧಾರವಾಡದಲ್ಲೇ ಬೀಡು ಬಿಟ್ಟಿರುವ ಮನೆಗಳ್ಳರು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, 25: ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಬೀಡು ಬಿಟ್ಟಿರುವ ಮನೆಗಳ್ಳರು ಸದ್ಯಕ್ಕೆ ಪೊಲೀಸರ ಬಲೆಗೆ ಬೀಳುವ ಲಕ್ಷಣ ಕಾಣುತ್ತಿಲ್ಲ. ಧಾರವಾಡದ ಕಮಲಾಪುರ ಓಣಿಯ ಮನೆಯೊಂದರಿಂದ 3.5 ಲಕ್ಷ ರೂ. ಮೌಲ್ಯದ 140 ಗ್ರಾಂ. ಚಿನ್ನದಾಭರಣ ಮತ್ತು 1 ಲಕ್ಷ ರೂ. ನಗದನ್ನು ಕಳ್ಳತನ ಮಾಡಿದ ಪ್ರಕರಣ ಗುರುವಾರ ಜರುಗಿದೆ.

ವಿರೇಶ ಕುಮಾರಸ್ವಾಮಿ ಬೆಳಗೇರಿಮಠ ಎಂಬುವರ ಮನೆ ಬಾಗಿಲ ಕೀಲಿಯನ್ನು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಕಳ್ಳತನವೆಸಗಿದ್ದಾರೆ. ಘಟನೆಯ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. [ಹುಬ್ಬಳ್ಳಿಯಲ್ಲಿ ಸಹೋದರರ ಮೇಲೆ ಹಲ್ಲೆ, ಒಬ್ಬನ ಕೊಲೆ]

gold

ಬ್ಯಾಗ್ ಕಳ್ಳತನ :
ಮುಂಬಯಿನ ಚಿನ್ನದ ವ್ಯಾಪಾರಿಯೊಬ್ಬರ ಬ್ಯಾಗ್ ಕಳ್ಳತನ ಮಾಡಿದ ಪ್ರಕರಣ ಗುರುವಾರ ಜರುಗಿದೆ. ಮುಂಬಯಿಯನ ಅವದೂತನಗರ ನಿವಾಸಿ ಪವನಕುಮಾರ ಮಿಶ್ರ್ರಿಮಲ್ ಬಂಬ ಎಂಬುವರು ತಮ್ಮ ಸಹೋದ್ಯೋಗಿ ರತನಲಾಲ್ ಗುರುಜರ ಇವರೊಂದಿಗೆ ಬಸ್ ನಲ್ಲಿ ಬರುವಾಗ ಬ್ಯಾಗ್ ಕಳ್ಳತನ ಮಾಡಲಾಗಿದೆ. [ಹುಬ್ಬಳ್ಳಿಗರೇ ನಿಮ್ಮನೆ ಬೀಗ ಗಟ್ಟಿ ಇದೆಯಾ ನೋಡ್ಕಳಿ!]

ಸಿಂಧನೂರನಿಂದ ಹುಬ್ಬಳ್ಳಿಗೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಬರುತ್ತಿರುವಾಗ ಬಂಗಾರದ ಆಭರಣ ಹಾಗೂ 3 ಲಕ್ಷ ರು. ಇದ್ದ ಬ್ಯಾಗ್ ದೋಚಲಾಗಿದೆ. ಪವನಕುಮಾರ ಆಭರಣ ಮತ್ತು ಹಣ ತುಂಬಿದ ಬ್ಯಾಗ್ ನ್ನು ತಮ್ಮ ತೊಡೆಯ ಮೇಲಿಟ್ಟುಕೊಂಡು ಮಲಗಿದಾಗ ಯಾರೋ ಮತ್ತು ಬರುವ ಔಷಧ ನೀಡಿ ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೂವರ ನಾಪತ್ತೆ :
ಹು-ಧಾ ಅವಳಿ ನಗರಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಒಬ್ಬ ಮಹಿಳೆ ಸೇರಿದಂತೆ ಮೂವರು ನಾಪತ್ತೆಯಾಗಿದ್ದಾರೆ.

ಧಾರವಾಡ ಶಕ್ತಿ ನಗರದ ಬಂಡೆಮ್ಮ ದೇವಸ್ಥಾನ ಬಳಿಯ ನಿವಾಸಿ ಪ್ರಭುಲಿಂಗ ಚಂದ್ರಶೇಖರ ಕಲ್ಮಠ (40) ಕಾಣೆಯಾದವರು. ಬೆಂಗಳೂರಿನಿಂದ ಎಬಾಜಾನ ಕಂಪನಿಯಿಂದ ಇಂಟರವ್ಯೂವ್ ಬಂದಿದೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವರು ಕಾಣೆಯಾಗಿದ್ದಾರೆ ಎಂದು ಜ್ಯೋತಿಲಕ್ಷ್ಮೀ ಕಲ್ಮಠ ದೂರು ನೀಡಿದ್ದಾರೆ.

ಹುಬ್ಬಳ್ಳಿಯ ವಿಶ್ವೇಶ್ವರನಗರ ನಿವಾಸಿ ಶೋಭಾ ಶೆಟ್ಟಿ (59) ಎಂಬುವರು ತಮ್ಮ ಮನೆಯಿಂದ ಕಾಣೆಯಾಗಿದ್ದಾರೆಂದು ರತ್ನಪಾಲ ಶೆಟ್ಟಿ ಎಂಬುವರು ದೂರು ನೀಡಿದ್ದಾರೆ. [ಎಚ್ಚರ, ಹುಬ್ಬಳ್ಳಿ ಬಿಟ್ಟು ಧಾರವಾಡಕ್ಕೆ ಬಂದ್ರು ಸರಗಳ್ಳರು!]

ಯಲ್ಲಾಪುರ ತಾಲೂಕಿನ ಗುಳ್ಳಾಪುರ ನಿವಾಸಿ ಬಾಬು ಫ್ರಾನ್ಸಸ್ ಫರ್ನಾಂಡಿಸ್ (24) ಆ. 20 ರ ರಾತ್ರಿ 10ರ ಸುಮಾರಿಗೆ ತಾವು ತೆಗೆದುಕೊಂಡು ಹೋದ ಲಾರಿಯನ್ನು ಹುಬ್ಬಳ್ಳಿ ಕಾರವಾರ ರೋಡ ಕೆಂಪಗೇರಿ ಹತ್ತಿರ ಇರುವ ಐಸ್ ಫ್ಯಾಕ್ಟರಿ ಹತ್ತಿರ ಬಿಟ್ಟು ಕಾಣೆಯಾಗಿದ್ದಾರೆ. ಈ ಬಗ್ಗೆ ಯಲ್ಲಾಪುರದ ಫ್ರಾನ್ಸಸ್ ಫರ್ನಾಂಡಿಸ್ ದೂರು ನೀಡಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ :
ಸಂಚಾರ ನಿಯಮ ಉಲ್ಲಂಘನೆ ಮಾಡಿದ 556 ಕೇಸಗಳನ್ನು ದಾಖಲಿಸಿ 71,800 ರು. ದಂಡ ವಸೂಲಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi: Dharwad Kamalapura Oni witnessed one more house robbery incident on August 25. Total worth of 1 lakh rupees and 140 gram gold jewellery has stolen.
Please Wait while comments are loading...