ಯೋಗೇಶಗೌಡ ಕೊಲೆ ಪ್ರಕರಣ : ಮತ್ತೊಬ್ಬ ಆರೋಪಿ ಬಂಧನ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜೂನ್. 20: ಧಾರವಾಡ ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಮತ್ತೊಬ್ಬ ಆರೋಪಿ ಮಹಾಬಳೇಶ್ವರ ಅಲಿಯಾಸ್ ಮುದುಕಯ್ಯ ಎಂಬಾತನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತ ಮಹಾಬಳೇಶ್ವರ ಮೃತ ಯೋಗೇಶಗೌಡನ ಗ್ರಾಮದವನೇ ಆಗಿದ್ದಾನೆ. ಒಂದು ಕಾಲದಲ್ಲಿ ಯೋಗೇಶಗೌಡನ ಪರಮಾತ್ಮನಾಗಿದ್ದ ಮಹಾಬಳೇಶ್ವರ ಈ ಕೊಲೆಯಲ್ಲಿ ಭಾಗಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಯೊಗೇಶ ಗೌಡ ಕೊಲೆಗೆ ಸಂಬಂಧಿಸಿ ಬಂಧಿಸಿದವರ ಸಂಖ್ಯೆ 6 ಕ್ಕೆ ಏರಿದಂತೆ ಆಗಿದೆ.[ಧಾರವಾಡ : ಯೋಗೇಶ ಗೌಡ ಕೊಲೆ, ಐವರ ಬಂಧನ]

hubballi

ಬಂಧಿತರ ಎಲ್ಲ ಆರು ಜನರನ್ನು ಜು.4 ರವರೆಗೆ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಇದಕ್ಕೂ ಮುನ್ನ ಹತ್ಯೆಗೆ ಸಂಬಂಧಿಸಿ ಬಸವರಾಜ ಮುತ್ತಗಿ (37), ವಿಕ್ರಂ ಬಳ್ಳಾರಿ (26), ವಿನಾಯಕ ಕಟಗಿ (34), ಕೀರ್ತಿಕುಮಾರ ಕುರಹಟ್ಟಿ (25), ಸಂದೀಪ್ ಅಲಿಯಾಸ್‌ ಸ್ಯಾಂಡಿ ಸವದತ್ತಿ (28) ಎಂಬುವವರನ್ನು ಶುಕ್ರವಾರ ಬಂಧಿಸಲಾಗಿತ್ತು.[ಧಾರವಾಡದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯನ ಹತ್ಯೆ]

ಜೂನ್ 15ರ ಮುಂಜಾನೆ ಯೋಗೇಶ್ ಗೌಡ ಅವರನ್ನು ಅವರ ಜಿಮ್ ನಲ್ಲಿಯೇ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಇದಾದ ಮೇಲೆ ಹುಬ್ಬಳ್ಳಿಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hubballi-Dharwad police have arrested one more accused regarding Dharwad zilla panchayat BJP member Yogesh Gowda murder case. Yogesh Gowda murdered on June 15, 2016 morning.
Please Wait while comments are loading...