ಹುಬ್ಬಳ್ಳಿ: ಕೈ ಕೊಟ್ಟ ಏರ್‌ಟೆಲ್ ನೆಟ್‌ವರ್ಕ್, ಪರದಾಡಿದ ಗ್ರಾಹಕ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜುಲೈ, 13: ನಗರದಲ್ಲಿ ಬುಧವಾರ ಏರ್ ಟೆಲ್ ನೆಟ್ ವರ್ಕ್ ಕೈಕೊಟ್ಟಿತ್ತು. ಎಂದಿನಂತೆ ಮಧ್ಯಾಹ್ನ ಊಟದ ಸಮಯದಲ್ಲಿ ಜನರು ತಮ್ಮ ತಮ್ಮವರಿಗೆ ಕರೆ ಮಾಡಲು ಮೊಬೈಲ್ ಕೈಯಲ್ಲಿ ಹಿಡಿದರೆ ನೆಟ್ ವರ್ಕ್ ಇಲ್ಲದೆ ಪರದಾಡಬೇಕಾಯಿತು.

ಮಧ್ಯಾಹ್ನ ಸುಮಾರು 1. 30 ರಿಂದ 2. 45 ರವರೆಗೂ ಏರ್ ಟೆಲ್ ಕಂಪನಿಯ ಮೊಬೈಲ್ ಗಳ ಸಿಗ್ನಲ್ ಸಿಗಲಿಲ್ಲ. ಇದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ರಸ್ತೆಯ ಮಧ್ಯೆಯೇ ಫೋನ್ ಗೆ ಏನಾಗಿದೆ ಎಂದು ಸಿಕ್ಕ ಸಿಕ್ಕವರಿಗೆ ಕೇಳುವಂತಾಗಿತ್ತು. ಕೆಲವರಂತೂ ನಿಮ್ಮ ಬಳಿ ಏರ್ ಟೆಲ್ ನಂಬರ್ ಇದೆಯಾ ಅದರ ನೆಟವರ್ಕ್ ಇದೆಯಾ ನೋಡಿ ಸ್ವಲ್ಪ ಎಂದು ಕೇಳಿಕೊಳ್ಳುತ್ತಿದ್ದರು.[4 ಸಾವಿರ ಕೋಟಿಗೆ ಏರ್‌ಟೆಲ್‌ನಿಂದ ವಿಡಿಯೋಕಾನ್ ಸ್ಪೆಕ್ಟ್ರಂ ಖರೀದಿ]

ಇನ್ನು ಆಸ್ಪತ್ರೆಯಲ್ಲಿನ ನರ್ಸ್ ಗಳು ರೋಗಿಗಳ ಬಗ್ಗೆ ಮಾಹಿತಿ ಕೇಳಲು ಡಾಕ್ಟರ್ ಗಳಿಗೆ ಕರೆ ಮಾಡಿದರೆ ಅವರದೂ ನಾಟ್ ರೀಚೇಬಲ್ ಆಗಿತ್ತು. ಇಡೀ ನಗರದಾದ್ಯಂತ ಈ ಸಮಸ್ಯೆ ಕಂಡುಬಂದಿತ್ತು. ಯಾವ ಕಾರಣಕ್ಕಾಗಿ ಈ ಸಮಸ್ಯೆಯಾಗಿದೆ ಎಂದು ಯಾರನ್ನು ಕೇಳಬೇಕು ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಗ್ರಾಹಕರ ದೂರು ಕೇಂದ್ರಗಳಿಗೆ ಕರೆ ಮಾಡಬೇಕೆಂದರೆ ನೆಟವರ್ಕ್ ಇದ್ದರೆ ತಾನೇ?

Hubballi: Customers suffers from Airtel network problem

ಇನ್ನು ಕೆಲ ಮಹಿಳಾ ಕಾಲೇಜುಗಳು ಬಿಡುವ ಸಮಯವಾಗಿದ್ದರಿಂದ ಪೋಷಕರು ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಕರೆ ಮಾಡಿದರೆ ಅವರ ನಂಬರ್ ಕೂಡ ನಾಟ್ ರೀಚೇಬಲ್ ಆಗಿತ್ತು. ಹೀಗಾಗಿ ಹಲವಾರು ಪಾಲಕರು ತಮ್ಮ ಮಕ್ಕಳ ಬಗ್ಗೆ ಆತಂಕಗೊಂಡು ಕಾಲೇಜಿಗೆ ಬಂದು ಕರೆದುಕೊಂಡು ಹೋಗುವಂತಾಯಿತು.[ತರಂಗಾಂತರ ಹಂಚಿಕೆ ನಂತರ ಮೊಬೈಲ್ ದರ ದುಪ್ಪಟ್ಟು?]

ಕೆಲ ಪೋಸ್ಟ್ ಪೇಯ್ಡ್ ಗ್ರಾಹಕರು ಯಾವಾಗಲೂ ಫೋನ್ ಮಾಡಲೆಂದು ಇರಲಿ ಎಂದು ಏರ್ ಟೆಲ್ ಆರಿಸಿಕೊಂಡಿದ್ದರು. ಆದರೆ ಇಂದಿನ ಈ ಸಮಸ್ಯೆಯಿಂದಾಗಿ ಏನಾಯ್ತು ಬಿಲ್ ತುಂಬಿದ್ದೇವಲ್ಲಾ ನಾವು ಯಾಕೇ ಹೀಗಾಗ್ತಿದೆ ಎಂದು ಗೊಂದಲ ವ್ಯಕ್ತಪಡಿಸುತ್ತಿದ್ದರು.[ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಫ್ರೀ ವೈಫೈ ಸೇವೆ]

ಕೆಲ ಬ್ಯಾಂಕ್ ಗಳಲ್ಲಿ ಮತ್ತು ಕೆಲ ಕಂಪನಿಗಳಲ್ಲಿ ಏರ್ ಟೆಲ್ ಕಂಪನಿಯ ನೆಟ್ ವರ್ಕ್ ಇರೋ ಡಾಟಾ ಪ್ಲಾನ್ ಅಂದರೆ ಇಂಟರ್ ನೆಟ್ ಸಂಪರ್ಕ ಪಡೆದುಕೊಂಡಿದ್ದರು. ಆದರೆ ಇಂದಿನ ಈ ಸಮಸ್ಯೆಯಿಂದ ಹಲವಾರು ಜನತೆ ತೊಂದರೆ ಅನುಭವಿಸಿದರು.

ಇದೇ ರೀತಿ ಮೊಬೈಲ್ ನಲ್ಲಿ ಇಂಟರನೆಟ್ ಸಂಪರ್ಕ ಪಡೆದುಕೊಂಡು ವಾಟ್ಸಪ್, ಟ್ವಿಟ್ಟರ್, ಫೇಸ್ ಬುಕ್ ಎಂದು ಸಮಯ ಹರಣ ಮಾಡುವವರಿಗೂ ಕೂಡ ನೆಟ್ ವರ್ಕ್ ತೊಂದರೆಯಿಂದ ಸಾಕಷ್ಟು ಬೇಸರಗೊಂಡರು. ಈ ಬಗ್ಗೆ ಏರ್ ಟೆಲ್ ಕಂಪನಿಯವರನ್ನು ಕೇಳಿದರೆ ತಾಂತ್ರಿಕ ತೊಂದರೆಯಿಂದ ಹೀಗಾಗಿದೆ. ಅದನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದು ಹೇಳಿ ಎಲ್ಲರನ್ನೂ ಸಾಗಹಾಕಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: Large number of customers suffers from Airtel network problem on 13 July, 2016. Afternoon 1.30 to 2.45 Aritel mobiles are not working in Huballi.
Please Wait while comments are loading...