ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊನ್ನಾವರದ ಕುಂಭಮೇಳದಲ್ಲಿ ಸಂಸ್ಕೃತಿ ಅನಾವರಣ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್, 18: ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಕುಂಭಮೇಳದ ಸಂಭ್ರಮ ಮನೆ ಮಾಡಿದೆ. ನೃತ್ಯ, ಗಾಯನ, ಸಾಂಸ್ಕೃತಿಕ ಕಲೆಗಳ ಅನಾವರಣವಾಗುತ್ತಿದೆ.

ಸಂಸ್ಕೃತಿ ಕುಂಭ ಶರಾವತಿ ಕುಂಭ ಕಾರ್ಯಕ್ರಮಕ್ಕೆ ಹಿಮಾಚಲ ಪ್ರದೇಶದಿಂದಲೂ ನೃತ್ಯ ತಂಡಗಳು ಆಗಮಿಸಿವೆ. ತಂಡದ ನೇತೃತ್ವವನ್ನು ದಿಲ್ಲಿ ವಿಶ್ವ ವಿದ್ಯಾಲಯದ ಜಿಯೋಗ್ರಫಿ ವಿಭಾಗದಲ್ಲಿ ಪಿ.ಎಚ್.ಡಿ. ಮಾಡುತ್ತಿರುವ ಕು. ನೀತು ಗೊಸ್ವಾಮಿ ವಹಿಸಿದ್ದು, ಹಿರಿಯ ಗಿಡಮೂಲಿಕೆ ತಜ್ಞ, ಮೋತಿಲಾಲ್, ಪಾರಂಪರಿಕ ನೇಕಾರ ರಾಜಕುಮಾರ, ಶಾಮ್ ಠಾಕೂರ ಭಾಗವಹಿಸಿದ್ದಾರೆ.[ನೆಲ, ಜಲ, ಸಂಸ್ಕೃತಿ ಉಳಿವಿಗೆ ಹೊನ್ನಾವರದಲ್ಲಿ ಕುಂಭಮೇಳ]

honnavar

ವಿಶ್ವ ಮಕ್ಕಳ ಮುಕ್ತ ಚುಟುಕು ಸಮ್ಮೇಳನ
ಸಂಸ್ಕೃತಿ ಕುಂಭ ಮಲೆನಾಡ ಉತ್ಸವದಲ್ಲಿ ರವಿವಾರ ನಡೆದ ವಿಶ್ವ ಮಕ್ಕಳ ಮುಕ್ತ ಚುಟುಕು ಕಲರವ ಗಮನಸೆಳೆಯಿತು. ದಾಂಡೇಲಿ- ಜೊಯಿಡಾದ ಪ್ರೌಢಶಾಲಾ ವಿದ್ಯಾರ್ಥಿನಿ ಅಫ್ಸಾನ್ ಜಾಫರ್ ಸಾದಿಕ್ ಶೇಖ್ ಉದ್ಘಾಟಿಸಿ, ಭಗವದ್ಗೀತೆಯ 4ನೇ ಅಧ್ಯಾಯದ 16 ನೇ ಶ್ಲೋಕವಾದ "ಕಿಂ ಕರ್ಮ ಕಿಮಕರ್ಮೇತಿ... ಯನ್ನು ಹಾಡಿ ಪ್ರೇಕ್ಷಕರ ಮನಗೆದ್ದರು.

ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ತಾವು ರಚಿಸಿದ ಚುಟುಕು, ಕವನವನ್ನು ಪ್ರಸ್ತುತಪಡಿಸಿದರು. ಮೇಘಾಲಯದ ಮೂರು ವಿದ್ಯಾರ್ಥಿನಿಯರಾದ ಟ್ರಿಸಿಫುಲ್, ವಿಮಿಭಾ ಮತ್ತು ಶೆಸಿ ನೆಟ್ಲಿಪ್ ಅಪ್ಪಟ ಕನ್ನಡದಲ್ಲಿ ಮಾತನಾಡಿ, ತಮ್ಮ ಅನುಭವ ಹಂಚಿಕೊಂಡರು. ಜೆ.ಎಸ್ .ನಿನಾದ, ಪೂರ್ಣಿಮಾ ಅಲೇಖಾ, ಚಂದನಾ ಎಲ್. ಹೆಗಡೆ, ಸಂತನ್ ಸಿಲ್ವಿಯಾ ಸೋಝಾ, ಶ್ರೀಪ್ರಿಯಾ ಆರ್. ಹೆಗಡೆ, ರಿದೈಯಾ, ಸ್ವಾತಿ ಭಟ್ ಕವನ ಪ್ರಸ್ತುತಪಡಿಸಿದರು. [ಜೀವ ಜಲ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ]

ಹಿರಿಯ ಸಾಹಿತಿ ಶಾರದಾ ಭಟ್ ಮಾತನಾಡಿ, ಬಾಲ್ಯದಲ್ಲೇ ಮಕ್ಕಳಲ್ಲಿ ಉತ್ತಮ ಭಾವನೆ ತುಂಬಿ ವಿಶ್ವಮಾನವತೆಯನ್ನು ಪ್ರೀತಿಸುವಂತೆ ಮಾಡುವ ಹೊಣೆ ಪಾಲಕರಲ್ಲಿ ಇದೆ. ಈ ಕಾರ್ಯ ಮನೆಯಿಂದ ಆರಂಭವಾಗಬೇಕು ಎಂದರು.

ಸಂಘಟಕ ಕವಿ ಮಾಸ್ಕೇರಿ ಎಂ.ಕೆ ನಾಯಕ ಮಾತನಾಡಿ, ಮಕ್ಕಳಲ್ಲಿ ವಿಷ ಭಾವನೆ ಕಳೆದು ವಿಶ್ವವನ್ನು ಪ್ರೀತಿಸುವ ವ್ಯಕ್ತಿತ್ವ ಅರಳಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.

ಮುಖ್ಯ ಅತಿಥಿ ವರದಿಗಾರ ವಿಠ್ಠಲದಾಸ ಕಾಮತ್ ಮಾತನಾಡಿ, ಯುವ ಶಕ್ತಿಯೇ ದೇಶಕ್ಕೆ ದೊಡ್ಡ ಆಸ್ತಿಯಾಗಿದ್ದು, ಮಕ್ಕಳಲ್ಲಿ ಸಾಹಿತ್ಯ, ಸಂಸ್ಸೃತಿಯ ಬಗ್ಗೆ ಪ್ರೀತಿ ಹುಟ್ಟಿಸುವ ಕಾರ್ಯ ಆಗಬೇಕು ಎಂದರು. ಪ್ರಸಿದ್ಧ ಕವಿ ರಾಧಾಕೃಷ್ಣ ಕೇರಳ ಉಪಸ್ಥಿತರಿದ್ದರು. ಶ್ವೇತಾ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.[ಶಿರಸಿ ಜಾತ್ರೆ ಚಿತ್ರಗಳನ್ನು ನೋಡಿಕೊಂಡು ಬನ್ನಿ]

ಕುಂಬಾರರು ರಿಕ್ತರಲ್ಲ ಸಂಸ್ಕೃತಿ ಮೂಲಜರು
ಕುಂಬಾರರು ರಿಕ್ತರಲ್ಲ ಶಕ್ತರು. ನಮ್ಮ ಭಾರತೀಯ ಸಂಸ್ಕೃತಿ ವಿಕಸನದ ಮೂಲಜರು. ಅವರ ಸ್ಥಾನ ಬ್ರಹ್ಮನದು. ಈ ಬ್ರಹ್ಮಾಂಡದ ಸೃಷ್ಠಿಕರ್ತ ಬ್ರಹ್ಮನಂತೆ ಅವರು ನಾಗರಿಕತೆಯ ಮೂಲವಾದ ಕುಂಭದ ಸೃಷ್ಠಿಕರ್ತರು. ಕುಂಭ ಖಾಲಿಯಿರುವಾಗ ಬೆಲೆಯಿಲ್ಲ, ಪೂರ್ಣ ಕುಂಭವಾದಾಗ ಬೆಲೆ. ಇಂತಹ ಗೌರವದ ಸ್ಥಾನ ಕುಂಬರರಿಗೆ ಸಿಗಬೆಕಾಗಿದೆ ಎಂದು ಶ್ರೀ ಮಾರುತಿ ಗುರೂಜಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುಂಬಾರರ ಮಹಾ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ ಚೌಡಶೆಟ್ಟಿ ಮಾತನಾಡಿ, ಭಾರತೀಯ ಕಾಲಮಾನದಲ್ಲಿ ಬರುವ ಶಕಪುರುಷ ಶಾಲಿವಾಹನ ಹಾಗೂ ಸರ್ವಜ್ಞನಂತಹ ಮಹಾಮೇಧಾವಿಗಳ ಪರಂಪರೆಯವರು ನಾವು. ಇಂದು ಕುಂಬಾರರ ಪರಂಪರೆ ನಶಿಸುತಿದ್ದು ರಾಜ್ಯದಲ್ಲಿ ಶೇ. 1-2ರಷ್ಟು ಮಾತ್ರ ಕುಂಬಾರಿಕೆಯಲ್ಲಿ ತೊಡಗಿದ್ದು, ಕುಂಬಾರರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಅಗತ್ಯ ಇದೆ ಎಂದು ಹೇಳಿದರು.

ಡಾ. ಅಣ್ಣಯ್ಯ ಕುಲಾಲ್ ಮಾತನಾಡಿ ನಾಗರಿಕತೆ ಬೆಳೆಸುವಲ್ಲಿ ಮಹತ್ತರ ಕೊಡುಗೆಯಿತ್ತ ಸಮುದಾಯ ಕುಂಬಾರರದು. ಕುಂಭದಿಂದಲೆ ಎಲ್ಲ. ಎಲ್ಲಾ ದೇವತಾ ಕಾರ್ಯದಲ್ಲಿ ಕುಂಬಾರರಿಗೆ ಮನ್ನಣೆ ಇದೆ. ನಮ್ಮ ಸಮಸ್ಯೆಗಳ ಬಗ್ಗೆ ಒಗ್ಗಟ್ಟಾಗಿ ಸರ್ಕಾರದ ಗಮನ ಸೆಳೆಯಬೇಕಿದೆ ಎಂದು ಹೇಳಿದರು.

ಕುಮಟದ ಅರ್ಚಕ ಗಣಪಯ್ಯ ತಿಮ್ಮಪ್ಪ ಗುನಗ, ಎರಡೂ ಕಣ್ಣುಗಳನ್ನು ಕಳೆದುಕೊಂಡರೂ ಕುಂಬಾರಿಕೆಯನ್ನು ಮುಂದುವರೆಸಿರುವ ರಾಮಚಂದ್ರ ಗುನಗ, ಚಿತ್ರ ನಿರ್ದೇಶಕ ವೆಂಕಟೇಶ, ಚಿತ್ರ ನಟ ವಿದ್ಯಾಭರಣ ಅವರನ್ನು ಗುರೂಜಿಯವರು ಸನ್ಮಾನಿಸಿದರು. ದತ್ತಾತ್ರೇಯ ಗುನಗಾ ಉದ್ಘಾಟಿಸಿದರು. ಗಣಪತಿ ಕೃಷ್ಣ ಗುನಗ, ಅರುಣ ಕೃಷ್ಣ ಗುನಗ ಉಪಸ್ಥಿತರಿದ್ದರು. ಜಯರಾಮ ಗುನಗ ಸ್ವಾಗತಿಸಿದರು, ತುಳಸಿದಾಸ ಸುಬ್ರಾಯ ಗುನಗ ವಂದಿಸಿದರು.

English summary
Honnavar: The Holy place Bangaramakki Veeranjaneya Temple, Gersoppa witnessed national level Kumbhamela-2016 [Malenadu Utsava]. The Mela started with a religious note on 15th April, 2016. Here is the updates of Kumbhamela-2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X