ಧಾರವಾಡ: ಹಿಂದೂಗಳು ಹೆಚ್ಚಿರುವ ಸ್ಥಳದಲ್ಲಿ ಪ್ರಾರ್ಥನಾ ಮಂದಿರ ಏಕೆ? ವಿರೋಧ

ಧಾರವಾಡ, ಮಾರ್ಚ್ 07: ವಿದ್ಯಾಕಾಶಿ ಧಾರವಾಡದಲ್ಲಿ ಕ್ರಿಶ್ಚೀಯನ್ ಧರ್ಮದ ಪ್ರಾರ್ಥನಾ ಮಂದಿರಕ್ಕಾಗಿ ಸರ್ಕಾರಿ ಸ್ವತನ್ನು ನೀಡಿದ್ದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಹಿಂದುಪರ ಕಾರ್ಯಕರ್ತರು ಪ್ರತಿಭಟನೆ ಮಾಡಿದ ಘಟನೆ ಗುರುವಾರ ನಡೆದಿದೆ.

ಕ್ರಿಶ್ಚಿಯನ್ ಧರ್ಮದ ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಧಾರವಾಡದ ಸತ್ತೂರಿನಲ್ಲಿ ಮಹಾನಗರ ಪಾಲಿಕೆ ಜಾಗ ನೀಡುವುದನ್ನು ಖಂಡಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Hindu Activists Oppose for Build of Christian Prayer Hall Protest in front of Corporation

ಕ್ರಿಶ್ಚಿಯನ್ ಸಮುದಾಯದ ಜನರೇ ಇಲ್ಲದ ಪ್ರದೇಶದಲ್ಲಿ ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಜಾಗ ನೀಡುವುದು ಸರಿಯಲ್ಲ. ಈ ಕುರಿತು ಮಹಾನಗರ ಪಾಲಿಕೆ ಗಂಭೀರವಾಗಿ ಪರಿಗಣಿಸಬೇಕು ಇಲ್ಲವೇ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ನಡೆಸಬೇಕಾಗುತ್ತದೆ ಎಂದು ಶ್ರೀ ರಾಮ ಸೇನೆ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ಹಿಂದೂಗಳು ಹೆಚ್ಚಿರುವ ಕಡೆ ಪ್ರಾರ್ಥನಾ ಮಂದಿರ ಏಕೆ?

ಧಾರವಾಡ ಸತ್ತೂರು ಬಡಾವಣೆ ಅತಿ ಹೆಚ್ಚು ಹಿಂದೂ ಜನರೇ ವಾಸಿಸುವ ಪ್ರದೇಶವಾಗಿದೆ. ಇಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಜಾಗ ನೀಡುವುದರಿಂದ ಹಿಂದೂಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಶ್ರೀ ರಾಮ ಸೇನೆ ಕಾರ್ಯಕರ್ತರು, ಸತ್ತೂರು ಬಡಾವಣೆ ಸ್ಥಳೀಯ ನಿವಾಸಿಗಳು ಇದ್ದರು.

Hindu Activists Oppose for Build of Christian Prayer Hall Protest in front of Corporation

ಹುಬ್ಬಳ್ಳಿಯಲ್ಲಿ ಅದ್ಧೂರಿ ಶಿವರಾತ್ರಿ; ಶಿವಸ್ಮರಣೆ

ಹುಬ್ಬಳ್ಳಿಯ ಜಿಮ್ ಖಾನ ಮೈದಾನದಲ್ಲಿ ದಿನವಿಡೀ ಶಿವಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಮಹಾಶಿವರಾತ್ರಿ ದಿನ ಶಂಕರನ ಆರಾಧಕರಿಗೆ ಅಯೋಧ್ಯೆ ಶ್ರೀರಾಮ ಮಂದಿರ ಮಾದರಿಯಲ್ಲಿ ಶ್ರೀ ರಾಮೇಶ್ವರ ಶಿವಲಿಂಗ ದರ್ಶನವನ್ನು ಹುಬ್ಬಳ್ಳಿ ಜನರು ಕಣ್ತುಂಬಿಕೊಳ್ಳಲಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿ ಅಂದು ಭೋಲೆ ಶಂಕರನನ್ನು ವಿಭಿನ್ನ ರೀತಿಯಲ್ಲಿ ಸ್ತುತಿಸಲು ಸಜ್ಜಾಗುತ್ತಿದೆ. ಹುಬ್ಬಳ್ಳಿ ದೇಶಪಾಂಡೆ ನಗರದ ಜಿಮ್ ಖಾನ ಮೈದಾನದಲ್ಲಿ ಗುರುವಾರ ಅದ್ಧೂರಿ ತಯಾರಿ ನಡೆದಿದೆ. ಹಿಂದುಗಳ ಪವಿತ್ರ ಕ್ಷೇತ್ರ ಅಯೋಧ್ಯಾ ಶ್ರೀರಾಮ ಮಂದಿರದ ಮಾದರಿಯಲ್ಲೇ ಶ್ರೀ ರಾಮೇಶ್ವರ ಶಿವಲಿಂಗ ಮಂಟಪ ಮತ್ತು ಬೃಹತ್ ಗಾತ್ರದ ಶಿವನ ಮೂರ್ತಿ, ಲಿಂಗು ಅತ್ಯಾಕರ್ಷಕವಾಗಿ ಭಕ್ತ ಗಣವನ್ನು ಸೆಳೆಯುವಂತಿದೆ.

ಮುರುಸಾವಿರ ಮಠ, ಸಿದ್ಧಾರೂಢ, ಮುರುಘರಾಜೇಂದ್ರರಂಥ ತಪೋ ಶಿವಯೋಗಿಗಳ, ಶಿವಶರಣರ ನಾಡಿನಲ್ಲಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿ ಹೊರಹೊಮ್ಮಲಿದೆ. ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಪುಟ್ಟರಾಜ ಗವಾಯಿ ಅವರಂಥ ಸಂಗೀತ ದಿಗ್ಗಜರ ನೆಲದಲ್ಲಿ ಮಹಾ ಶಿವರಾತ್ರಿಯಂದು ಶಿವ-ಸಂಗೀತ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ.

ಧಾರವಾಡದಲ್ಲಿ ಸೋಮೇಶ್ವರ ದರ್ಶನಕ್ಕೆ ಜನಸ್ತೋಮ ಸೃಷ್ಟಿಯಾಗಿದೆ. ಧಾರವಾಡ ಹೊರವಲಯದ ಲಕಮನಹಳ್ಳಿಯ ದೇವಸ್ಥಾನದಲ್ಲಿ ಜನರು ಶುಕ್ರವಾರ ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪುರಾಣದ ಐತಿಹಾಸಿಕ ಹಿನ್ನಲೆಯ ದೇವಸ್ಥಾನ ಇದಾಗಿದ್ದು, ಶಿವರಾತ್ರಿ ಇಲ್ಲಿಗೆ ಭಕ್ತರು ಆಗಮಿಸಿ ದೇವರನ್ನು ಸ್ಮರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+