ಮಹದಾಯಿ ಹೋರಾಟಗಾರರ ಮೇಲೆ ಕೇಸು, ಮಾತು ತಪ್ಪಿದ ಸರ್ಕಾರ

Posted By:
Subscribe to Oneindia Kannada

ಧಾರವಾಡ, ಫೆಬ್ರವರಿ 15: ಮಹದಾಯಿ ಹೋರಾಟಗಾರರ ಮೇಲೆ ಹಾಕಿರುವ ಕೇಸುಗಳನ್ನು ವಾಪಾಸ್ ಪಡೆಯುವುದಾಗಿ ಭರವಸೆ ನೀಡಿದ್ದ ರಾಜ್ಯ ಸರ್ಕಾರ ಈಗ ಮಾತು ತಪ್ಪಿ ಹೊಸ ಕೇಸೊಂದನ್ನು ದಾಖಲಿಸಿದೆ.

ಸರ್ಕಾರಿ ಆಸ್ತಿ ಪಾಸ್ತಿ ಹಾನಿ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರ ಮೇಲೆ ನವಲುಗುಂದ ನ್ಯಾಯಾಲಯದಲ್ಲಿ ಸ್ಥಳೀಯ ಆಡಳಿತದಿಂದ ಕೇಸು ದಾಖಲಾಗಿದೆ.

ಪ್ರಕರಣ ಸಂಬಂಧ ನವಲಗುಂದ ಜೆಎಂಎಫ್‌ಸಿ ನ್ಯಾಯಾಲಯದಿಂದ ಮಹದಾಯಿ ಹೋರಾಟದ ಮುಂಚೂಣಿಯಲ್ಲಿರುವ ಲೋಕನಾಥ್ ಹೆಬಸೂರ ಸೇರಿದಂತೆ 13 ಮಂದಿಗೆ ಸಮನ್ಸ್‌ ಜಾರಿಯಾಗಿದೆ.

Government registerd case against Mahadayi activists

ಫೆ.17 ರಂದು 13 ಜನರೂ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Government registers another case against Mahadayi activists for damaging the public property. Navalagunda JMFC court has issued summons to 13 mahadayi activists and ordered to attend court on February 17 without fail.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X