Property Tax: ಆಸ್ತಿ ತೆರಿಗೆ ಮೇಲೆ ಶೇ 5%ರಷ್ಟು ರಿಯಾಯಿತಿ ಗುಡ್‌ನ್ಯೂಸ್: ಅಂತಿಮ ದಿನಾಂಕ ವಿವರ ಇಲ್ಲಿದೆ! ‌

Property Tax: ರಾಜ್ಯದ ಪ್ರಮುಖ ಮಹಾನಗರ ಪಾಲಿಕೆಯು ಆಸ್ತಿದಾರಿರಿಗೆ ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಈಗಾಗಲೇ ಕರ್ನಾಟಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಯ ಮೇಲೆ ಶೇ 5ರಷ್ಟು ಆಸ್ತಿ ತೆರಿಗೆ ರಿಯಾಯಿತಿ ಘೋಷಿಸಲಾಗಿದೆ. ಇದೀಗ ಮಹಾನಗರ ಪಾಲಿಕೆಯೊಂದು ಭರ್ಜರಿ ಗುಡ್‌ನ್ಯೂಸ್‌ ಕೊಟ್ಟಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳು ಮಾರ್ಚ್‌ 31ರ ಅಂತ್ಯಕ್ಕೆ ಆಸ್ತಿ ತೆರಿಗೆ ಪಾವತಿ ಅವಧಿ (2024 -2025) ಮುಗಿದಿದೆ. ಇದೀಗ ಈ ಪಾಲಿಕೆಯು ಮೇ 10ರ ವರೆಗೆ ಆಸ್ತಿ ತೆರಿಗೆ ಮೇಲೆ ಶೇ 5ರಷ್ಟು ರಿಯಾಯಿತಿ ಘೋಷಿಸಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಆಸ್ತಿದಾರರು ಹಾಗೂ ಆಸ್ತಿಗಳಿಗೆ ಸಂಬಂಧಿಸಿದಂತೆ ಸರ್ಕಾರವು ಕೆಲವೊಂದು ಪ್ರಮುಖ ಗುಡ್‌ನ್ಯೂಸ್‌ಗಳನ್ನು ನೀಡಿದೆ. ಇದೀಗ ಹಲವು ಮಹಾನಗರ ಪಾಲಿಕೆಗಳು ಆಸ್ತಿದಾರರಿಗೆ ಗುಡ್‌ನ್ಯೂಸ್‌ ನೀಡುತ್ತಿವೆ. ಅದೇ ರೀತಿ ಇದೀಗ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಸಹ ಆಸ್ತಿದಾರರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಈ ಭಾಗದಲ್ಲಿನ ಆಸ್ತಿದಾರರು ಆಸ್ತಿ ತೆರಿಗೆ ಪಾವತಿ ಮಾಡುವ ಅವಧಿಯನ್ನು ವಿಸ್ತರಿಸಿದೆ.

Good News 5 Discount on Property Tax Here are Final Date Details

ಈ ಸಂಬಂಧ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯು " ಹುಬ್ಬಳ್ಳಿ ಧಾರವಾಡ ಪಾಲಿಕೆ ವ್ಯಾಪ್ತಿಯ ಜನತೆ ತಮ್ಮ ಆಸ್ತಿ ತೆರಿಗೆಯನ್ನು ಮೇ 10 ರೊಳಗೆ ಪಾವತಿಸಿ, 5% ರಿಯಾಯತಿ ಪಡೆಯಬಹುದು. ನಿಗದಿತ ಸಮಯದೊಳಗೆ ತೆರಿಗೆ ಪಾವತಿಸಿ - ಅಭಿವೃದ್ಧಿಗೆ ಸಹಕರಿಸಿ!" ಎಂದು ಮನವಿ ಮಾಡಲಾಗಿದೆ.

ಆಸ್ತಿದಾರರು ಆಸ್ತಿ ತೆರಿಗೆ ಪಾವತಿ ಮಾಡುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಸಹ ಈಚೆಗೆ ಮಹತ್ವದ ಆದೇಶವೊಂದನ್ನು ಮಾಡಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ವಿವಿಧ ಮಹಾನಗರ ಪಾಲಿಕೆಗಳು ಮಾರ್ಚ್‌ 31ರ ಅಂತ್ಯಕ್ಕೆ ಆಸ್ತಿ ತೆರಿಗೆ ಪಾವತಿ ಮಾಡುವುದು ಮುಕ್ತಾವಾಗಿಸಿವೆ. ಆದರೆ ವಿಶೇಷವೆನ್ನುವಂತೆ ಕೆಲವೊಂದು ಪಾಲಿಕೆಗಳು ಮಾತ್ರ ಆಸ್ತಿದಾರರಿಗೆ ಗುಡ್‌ನ್ಯೂಸ್‌ ಕೊಟ್ಟಿವೆ. ಅದರಲ್ಲಿ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯು ಒಂದಾಗಿದೆ. ಇತಂಹ ಒಂದು ವಿಶೇಷ ರಿಯಾಯಿತಿಯನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸಹ ಕೊಟ್ಟಿಲ್ಲ. ಹೀಗಾಗಿ ಇದರ ಲಾಭವನ್ನು ಪಡೆದುಕೊಳ್ಳಿ.

Take a Poll

ಬೇಗ ಆಸ್ತಿ ತೆರಿಗೆ ಪಾವತಿ ಮಾಡಿ ಲಾಭ ಪಡೆಯಿರಿ: ಇನ್ನು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯು ಆಸ್ತಿದಾರರಿಗೆ ದೊಡ್ಡ ಗುಡ್‌ನ್ಯೂಸ್‌ ಕೊಟ್ಟಿದೆ. ಆದರೆ, ಅವಧಿ ಮುಗಿಯುವುದರ ಒಳಗಾಗಿ ಆಸ್ತಿ ತೆರಿಗೆ ಪಾವತಿ ಮಾಡಿ, ಆಸ್ತಿ ತೆರಿಗೆ ರಿಯಾಯಿತಿಯ ಲಾಭ ಪಡೆದುಕೊಳ್ಳಿ. ಮೇ10ರ ಒಳಗಾಗಿ ನೀವು ಆಸ್ತಿ ತೆರಿಗೆ ಪಾವತಿ ಮಾಡಿದರೆ, ನಿಮಗೆ ಆಸ್ತಿ ತೆರಿಗೆಯ ಮೇಲೆ ಶೇ 5ರಷ್ಟು ರಿಯಾಯಿತಿ ಸಿಗಲಿದೆ. ಕೊನೆಯ ಕ್ಷಣದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಿದೆ ಈಗಲೇ ಆಸ್ತಿ ತೆರಿಗೆ ಪಾವತಿ ಮಾಡಿ.

ಕೆಲವು ತಾಂತ್ರಿಕ ತೊಂದರೆ, ಡೇಟಾ ಅಳವಡಿಕೆಯ ಕಾರಣದಿಂದ ಏಪ್ರಿಲ್‌ 1ರಿಂದ ಆರಂಭವಾಗಬೇಕಿದ್ದ ಆಸ್ತಿ ತೆರಿಗೆ ಪಾವತಿ ಪ್ರಕ್ರಿಯೆಯನ್ನು ಏಪ್ರಿಲ್‌ 10ರಿಂದ ಪ್ರಾರಂಭಿಸಲಾಗಿದೆ. ಹತ್ತು ದಿನಗಳು ವಿಳಂಬವಾಗಿದ್ದರಿಂದ ಮೇ 10ರ ವೆರೆಗೂ ರಿಯಾಯಿತಿ ಸೌಕರ್ಯವನ್ನು ವಿಸ್ತರಿಸಲಾಗಿದೆ. ಮೇ 10ನೇ ತಾರೀಖಿನ ಒಳಗಾಗಿ ಆಸ್ತಿ ತೆರಿಗೆ ಪಾವತಿ ಮಾಡಿದರೆ, ಶೇ 5% ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದು ಎಂದು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ್‌ ಎಸ್‌ ಘಾಳಿ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+