ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ; ಬೋನಿಗೆ ಬಿತ್ತು ಆತಂಕ ಮೂಡಿಸಿದ್ದ ಚಿರತೆ

|
Google Oneindia Kannada News

ಧಾರವಾಡ, ಸೆಪ್ಟೆಂಬರ್ 26: ಧಾರವಾಡದಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಕವಲಗೇರಿಯಲ್ಲಿ ಚಿರತೆ ಸೆರೆಯನ್ನು ಸೆರೆ ಹಿಡಿಯಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.

ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಶನಿವಾರ ತಡ ರಾತ್ರಿ ಚಿರತೆ ಸಿಕ್ಕಿ ಬಿದಿದೆ. ಭಾನುವಾರ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧಾರವಾಡ; ತೋಟದಿಂದ ಚಿರತೆ ಪರಾರಿ, ಸೆರೆ ಸಿಕ್ಕಿದೆ ಎಂಬ ಸುದ್ದಿ ವೈರಲ್ಧಾರವಾಡ; ತೋಟದಿಂದ ಚಿರತೆ ಪರಾರಿ, ಸೆರೆ ಸಿಕ್ಕಿದೆ ಎಂಬ ಸುದ್ದಿ ವೈರಲ್

ಧಾರವಾಡ ತಾಲೂಕಿನ ಕವಲಗೇರಿ ಗ್ರಾಮ ವ್ಯಾಪ್ತಿಯ ಕಬ್ಬಿನ ಗದ್ದೆಗಳಲ್ಲಿ ಚಿರತೆ ವಾಸವಾಗಿತ್ತು. ಗ್ರಾಮದ ರೈತರು ಸಾಕಷ್ಟು ಪ್ರಮಾಣದಲ್ಲಿ ಕಬ್ಬು ಬೆಳೆದಿದ್ದು, ಅದು ಎತ್ತರವಾಗಿ, ದಟ್ಟವಾಗಿ ಬೆಳೆದಿದ್ದರಿಂದ ಚಿರತೆ ಅಡಗಿಕೊಳ್ಳಲು ಸಹಾಯಕವಾಗಿತ್ತು.

ಹುಬ್ಬಳ್ಳಿ; ಚಿರತೆ ಪ್ರತ್ಯಕ್ಷ, ವಾಕಿಂಗ್, ಆಫ್‌ಲೈನ್ ಕ್ಲಾಸ್ ರದ್ದು ಹುಬ್ಬಳ್ಳಿ; ಚಿರತೆ ಪ್ರತ್ಯಕ್ಷ, ವಾಕಿಂಗ್, ಆಫ್‌ಲೈನ್ ಕ್ಲಾಸ್ ರದ್ದು

ಅರಣ್ಯ ಇಲಾಖೆಯ ಡಿಎಫ್‌ಓ ನೇತೃತ್ವದಲ್ಲಿ ಸುಮಾರು 60ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಚಿರತೆ ಕಾರ್ಯಾಚರಣೆಯನ್ನು ನಿರಂತರವಾಗಿ ಮತ್ತು ತೀವ್ರವಾಗಿ ಮಾಡುತ್ತಿದ್ದರು. ಕವಲಗೇರಿ ಗ್ರಾಮದ ಕಬ್ಬಿನಗದ್ದೆಗಳ ನಡುವೆ ಹಾಗೂ ಸುತ್ತಲೂ ಸುಮಾರು 6ಕ್ಕೂ ಹೆಚ್ಚು ಬೋನುಗಳನ್ನು ಇಡಲಾಗಿತ್ತು.

ಕರ್ನಾಟಕದಲ್ಲಿ ಮತ್ತೊಂದು ಹುಲಿ ಸಂರಕ್ಷಿತ ಪ್ರದೇಶ; ಘೋಷಣೆ ಬಾಕಿ ಕರ್ನಾಟಕದಲ್ಲಿ ಮತ್ತೊಂದು ಹುಲಿ ಸಂರಕ್ಷಿತ ಪ್ರದೇಶ; ಘೋಷಣೆ ಬಾಕಿ

ಸೋಮವಾರ ಹುಬ್ಬಳ್ಳಿಯ ರಾಜನಗರ, ನೃಪತುಂಗ ಬೆಟ್ಟದ ಪ್ರದೇಶದಲ್ಲಿಯೂ ಚಿರತೆ ಪತ್ತೆಯಾಗಿತ್ತು. ಆದರೆ ಈಗ ಸೆರೆ ಸಿಕ್ಕಿರುವ ಚಿರತೆ ಬೆಟ್ಟದಲ್ಲಿ ಕಂಡಿದ್ದೆ ಅಥವ ಬೇರೆಯದ್ದೆ ಎಂಬುದು ಇನ್ನೂ ಖಚಿತವಾಗಿಲ್ಲ.

ಬೋನಿನಲ್ಲಿ ಬಂಧಿಯಾದ ಚಿರತೆ

ಬೋನಿನಲ್ಲಿ ಬಂಧಿಯಾದ ಚಿರತೆ

ಶನಿವಾರ ತಡರಾತ್ರಿ ಅಥವ ಭಾನುವಾರ ಮುಂಜಾನೆ ಚಿರತೆ ಬೋನಿನಲ್ಲಿರುವ ಮೌಂಸ ತಿನ್ನಲು ಬಂದು ಸಿಕ್ಕಿ ಹಾಕಿ ಕೊಂಡಿದೆ. ಚಿರತೆ ಸುರಕ್ಷಿತವಾಗಿ ಸೆರೆ ಸಿಕ್ಕಿದೆ. ಚಿರತೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದ ಡಿಎಫ್‌ಓ ಯಶಪಾಲ ನೇತೃತ್ವದ ಎಲ್ಲ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಭಿನಂದಿಸಿದ್ದಾರೆ.

ಗುರುವಾರ ಕವಲಗೇರಿಯಲ್ಲಿ ಚಿರತೆ ಪತ್ತೆಯಾಗಿತ್ತು. ಅದನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಆದರೆ ದಟ್ಟವಾಗಿ ಬೆಳೆದಿದ್ದ ಕಬ್ಬಿನ ಬೆಳೆಯ ನಡುವೆ ಓಡಿ ಅದು ಪರಾರಿಯಾಗಿತ್ತು. ಚಿರತೆ ಅದೇ ಪ್ರದೇಶದಲ್ಲಿ ಇರುವುದು ಖಚಿಪಡಿಸಿಕೊಂಡು ಶುಕ್ರವಾರದಿಂದ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು.

ವಿವಿಧ ಇಲಾಖೆಗಳ ಸಹಕಾರ

ವಿವಿಧ ಇಲಾಖೆಗಳ ಸಹಕಾರ

ಕಂದಾಯ ಇಲಾಖೆ, ಗ್ರಾಮ ಪಂಚಾಯತಿ, ಆರೋಗ್ಯ ಇಲಾಖೆ ಹೀಗೆ ವಿವಿಧ ಇಲಾಖೆಗಳ ಸಹಕಾರದಿಂದ ಚಿರತೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಅರಣ್ಯ ಇಲಾಖೆಯೊಂದಿಗೆ ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಬಿ., ತಹಶೀಲ್ದಾರ್ ಸಂತೋಷ ಬಿರಾದಾರ ನೇತೃತ್ವದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ, ಜಿಲ್ಲಾ ಪಂಚಾಯತ ಸಿಇಓ ಡಾ‌. ಸುಶೀಲಾ ಬಿ. ಮಾರ್ಗದರ್ಶನದಲ್ಲಿ ಕನಕೂರ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಕವಲಗೇರಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿನ ಜನರು ಸಹ ಕಾರ್ಯಾಚರಣೆಗೆ ಸಹಕಾರ ನೀಡಿದ್ದಾರೆ.

ಡಿಎನ್‌ಎ ಪರೀಕ್ಷೆಗಾಗಿ ಹೈದರಾಬಾದ್‌ಗೆ

ಡಿಎನ್‌ಎ ಪರೀಕ್ಷೆಗಾಗಿ ಹೈದರಾಬಾದ್‌ಗೆ

ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿ ನೃಪತುಂಗ ಬೆಟ್ಟ ಹಾಗೂ ಸುತ್ತಲಿನ ಪ್ರದೇಶದಲ್ಲಿ ಚಿರತೆ ಇರುವುದು ಪತ್ತೆಯಾಗಿತ್ತು. ಈಗ ಆ ಪ್ರದೇಶದಲ್ಲಿ ಯಾವುದೇ ಪುರಾವೆ, ಗುರುತುಗಳು ಕಂಡುಬಂದಿಲ್ಲ. ಅರಣ್ಯ ಇಲಾಖೆಯ ಒಂದು ತಂಡ ನೃಪತುಂಗ ಬೆಟ್ಟ, ರಾಜನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಪ್ರತಿದಿನ ನಿರಂತರವಾಗಿ ಚಿರತೆಗಾಗಿ ಕಾರ್ಯಾಚರಣೆ ಮಾಡುತ್ತಿದೆ.

ಹುಬ್ಬಳ್ಳಿ ನೃಪತುಂಗಬೆಟ್ಟ ಹಾಗೂ ಕವಲಗೇರಿ ಗ್ರಾಮದ ಕಬ್ಬಿನಗದ್ದೆಯಲ್ಲಿ ಸಿಕ್ಕಿರುವ ಚಿರತೆ ಮಲವನ್ನು ಸಂಗ್ರಹ ಮಾಡಲಾಗಿದೆ. ಎರಡು ಒಂದೇ ಚಿರತೆಯದ್ದಾ ಅಥವಾ ಬೇರೆ ಬೇರೆ ಚಿರತೆಯದ್ದಾ? ಎಂಬುವದನ್ನು ಗುರುತಿಸಲು ಡಿಎನ್ಎ ಪರೀಕ್ಷೆಗಾಗಿ ಈಗಾಗಲೇ ಹೈದ್ರಾಬಾದ್ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಜಿಲ್ಲಾಡಳಿತ, ಅರಣ್ಯ ಇಲಾಖೆ ಈ ವರದಿ ಬರುವ ನಿರೀಕ್ಷೆಯಲ್ಲಿದೆ.

ಅಲ್ಲಿವರೆಗೂ ಸಾರ್ವಜನಿಕರು ಜಾಗೃತಿಯಿಂದ ಇದ್ದು, ಜಿಲ್ಲಾಡಳಿತ, ಅರಣ್ಯ ಇಲಾಖೆ, ಮಹಾನಗರಪಾಲಿಕೆ ನೀಡುವ ಸಲಹೆ,ಸೂಚನೆಗಳನ್ಬು ಪಾಲಿಸುವ ಮೂಲಕ ಚಿರತೆ ಕಾರ್ಯಾಚರಣೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ ಮತ್ತು ಪ್ರಯೋಗಾಲಯದ ವರದಿ ಬರುವವರೆಗೆ ಹುಬ್ಬಳ್ಳಿ ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಕಾರ್ಯಾಚರಣೆ ಮುಂದುವರಿಯಲಿದೆ.

Recommended Video

ಪಾಕಿಸ್ತಾನ್ ಪ್ರಧಾನಿ ಗೆ ಮುಜುಗರ | Imran Khan | Oneindia Kannada
ಮರಳಿ ಕಾಡಿಗೆ ವಾಪಸ್ ಆಗಲಿಗೆ ಚಿರತೆ

ಮರಳಿ ಕಾಡಿಗೆ ವಾಪಸ್ ಆಗಲಿಗೆ ಚಿರತೆ

ಕವಲಗೇರಿ ಗ್ರಾಮದ ಕಬ್ಬಿನಗದ್ದೆಯಲ್ಲಿ ಬೋನಿಗೆ ಬಿದ್ದಿರುವ ಚಿರತೆ ಆರೋಗ್ಯವಾಗಿದೆ. ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾನುವಾರ ರಾತ್ರಿ ಸುರಕ್ಷಿತವಾಗಿ ಮರಳಿ ಕಾಡಿಗೆ ಬಿಡುತ್ತಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.

English summary
Forest department officials successfully catch the leopard at Dharwad taluk Kavalageri village. Leopard found near village and surrounding ares two days back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X