• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಚಿವ ಪ್ರಲ್ಹಾದ ಜೋಶಿ ಪತ್ನಿ ಒಡೆತನದ ಫ್ಯಾಕ್ಟರಿಗೆ ಬೆಂಕಿ: 3 ಕೋಟಿ ರೂ. ಹೆಚ್ಚು ಹಾನಿ

|

ಬೆಂಗಳೂರು, ಅ. 27: ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಶೆರೆವಾಡ ಗ್ರಾಮದ ಬಳಿಯಿರುವ ವಿಭವ ಇಂಡಸ್ಟ್ರೀಯಲ್ಲಿ ಹೊತ್ತಿರುವ ಬೆಂಕಿ ಸುಮಾರು 10 ತಾಸಿಗೂ ಹೆಚ್ಚು ಕಾಲ ಉರಿದಿದ್ದು, ಸುಮಾರು 3 ಕೋಟಿಗೂ ಹೆಚ್ಚು ವಸ್ತುಗಳು ನಾಶವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ದಿವಂಗತ ಅನಂತಕುಮಾರ ಸಹೋದರ ನಂದಕುಮಾರ, ಅಚುತ್ ಲಿಮ್ಹೆ, ಉದಯ ಬಾಡಕರ ಹಾಗೂ ಸಂಸದ ಹಾಗೂ ಕೇಂದ್ರದ ಸಚಿವ ಪ್ರಲ್ಹಾದ ಜೋಶಿ ಅವರ ಪತ್ನಿ ಸೇರಿ ಒಟ್ಟು ನಾಲ್ಕು ಮಾಲೀಕರ ಒಡೆತನದಲ್ಲಿರುವ ಪ್ಯಾಕ್ಟರಿಗೆ ಸರಿಸುಮಾರು ನಿನ್ನೆ ಇಳಿಸಂಜೆ ನಾಲ್ಕು ಗಂಟೆಗೆ ಬೆಂಕಿ ತಗುಲಿತ್ತು. ವಿಭವ ಇಂಡಸ್ಟ್ರೀ 555 ಮಂಕಿ ಬ್ರಾಂಡ್ ಕಸಬರಿಗೆ ಎಂದು ಪ್ರಸಿದ್ಧವಾಗಿದೆ.

ಮೊದಲು ಕಚ್ಚಾವಸ್ತುಗಳಿಗೆ ತಗುಲಿದ ಬೆಂಕಿ, ನಂತರ ಅಂದಾಜು 10 ಸಾವಿರ ಚದರ ಅಡಿಯಲ್ಲಿ ನಂತರ ಧಗಧಗನೆ ಉರಿಯಲಾರಂಭಿಸಿತು. ಬೆಂಕಿ ತಗುಲಿದ್ದು ಮೊದಲೇ ಗೊತ್ತಾಗದೇ ಇದ್ದಿದ್ದರಿಂದ ಕೆಲವೇ ಸಮಯದಲ್ಲಿ ಪ್ಯಾಕ್ಟರಿಯಲ್ಲಿ ಪೂರ್ತಿಯಾಗಿ ವ್ಯಾಪಿಸಿದೆ.

   ಕಾಂಗ್ರೆಸ್ ನಲ್ಲಿ ಗೊಂದಲ ! | DK Shivkumar | RR Nagar By Election | Oneindia Kannada

   ಅಗ್ನಿಶಾಮಕ ದಳ ಹಾಗೂ ಪೊಲೀಸರು ಬೆಂಕಿ ನಂದಿಸುವ ಕಾರ್ಯದಲ್ಲಿ ಮುಳುಗಿದ್ದರೂ ಸುಮಾರು 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದಾಗ ಬೆಂಕಿ ತಹಬದಿಗೆ ಬಂದಿದೆ. ಯಾವೊಬ್ಬ ನೌಕರರಿಗೂ ಯಾವುದೇ ತೊಂದರೆ ಆಗಿಲ್ಲ. ಬೆಂಕಿ ತಗುಲುವ ಕೆಲವೇ ಸಮಯದ ಹಿಂದ ಅನೇಕರು ಇದೇ ಪ್ಯಾಕ್ಟರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಬೆಂಕಿಯ ಕೆನ್ನಾಲೆ ಬಹಳ ದೂರದವರೆಗೂ ಹಬ್ಬಿದ್ದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

   English summary
   The Vibhav industry at the Sheravada village of Hubli Taluk in Dharwad district has been on fire for over 10 hours and more than 3 crore rs items have been destroyed. Know more,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X