ಧಾರವಾಡದಲ್ಲಿ 40% ಬಿತ್ತನೆ: ಬಾಕಿ ಬಿತ್ತನೆಯಲ್ಲಿ ಯಾವ ಬೆಳೆಗೆ ರೈತರು ಆದ್ಯತೆ ನೀಡಲಿದ್ದಾರೆ?

ಹುಬ್ಬಳ್ಳಿ, ಜೂನ್ 08: ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಲ್ಲಿ ಆಗಾಗ ವ್ಯಾಪಕ ಮಳೆ ಆಗುವ ಮೂಲಕ ಮುಂಗಾರು ಹಂಗಾಮು ವ್ಯವಸಾಯಕ್ಕೆ ಸೂಕ್ತ ವಾತಾವರಣ ನಿರ್ಮಿಸಿದೆ. ಮುಂಗಾರು ಮಳೆ ಈ ಭಾಗದಲ್ಲಿ ಸಕ್ರಿಯವಾಗಿದೆ. ಶುಕ್ರವಾರವು ಭಾರಿ ಮಳೆ ಆಗಿದೆ. ಬರಗಾಲದಿಂದ ತೊಂದರೆ ಅನುಭವಿಸಿದ್ದ ರೈತರ ಮುಖದಲ್ಲಿ ಹುಮ್ಮಸ್ಸು ಮೂಡಿಸಿದೆ.

ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮತ್ತು ನಂತರ ಮುಂಗಾರು ಮಳೆ ಭರ್ಜರಿಯಾಗಿ ದಾಖಲಾಗಿದೆ. ಹೀಗಾಗಿ ಬಿತ್ತನೆಗೆ ಅತ್ಯಂತ ಸೂಕ್ತ ವಾತಾವರಣ ನಿರ್ಮಾಣವಾಗಿದೆ ಕಳೆದ ಮೂರು ವರ್ಷಗಳಿಂದ ಸರಿಯಾಗಿ ಮಳೆ ಇಲ್ಲದೇ ಬಿತ್ತನೆ, ವ್ಯವಸಾಯದಲ್ಲಿ ಮಂಕು ಕವಿದಂತಾಗಿತ್ತು. ರೈತರು ಸಹ ಆರ್ಥಿಕ ಸಂಕಷ್ಟ ಎದುರಿಸಿದ್ದರು.

Farmers Prepare for Sowing in Dharwad District Anticipating Heavy Crop Which Crops Will Predominate

ಪೂರ್ವ ಮುಂಗಾರು ಮಳೆ ಆಗಮನ ಬೆನ್ನಲ್ಲೆ ರೈತರು ಹೊಲಗಳನ್ನು ಹದಗೊಳಿಸಿದ್ದಾರೆ. ಕೃಷಿಕರು ಮೈಕೊಡವಿಕೊಂಡು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಈಗ ಬಿತ್ತನೆ ಚುರುಕು ಪಡೆದುಕೊಂಡಿದೆ. ಜಿಲ್ಲೆಯ ಪ್ರಮುಖ ಮುಂಗಾರು ಬೆಳೆಗಳಾದ ಹೆಸರು, ಸೋಯಾಬೀನ್, ಉದ್ದು, ಹತ್ತಿ, ಮೆಕ್ಕಜೋಳ, ಭತ್ತ, ಬಿತ್ತನೆ ಕಾರ್ಯ ಕಂಡು ಬರುತ್ತಿದೆ.

ಹೆಸರು, ಗೋವಿನ ಜೋಳ ಹೆಚ್ಚು ಬಿತ್ತನೆ ಸಾಧ್ಯತೆ

ಹುಬ್ಬಳ್ಳಿ, ಧಾರವಾಡ ತಾಲೂಕು ವ್ಯಾಪ್ತಿಯಲ್ಲಿ ರೈತರು ಹೆಸರು, ಸೋಯಾಬೀನ್ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದಾರೆ. ನವಲಗುಂದ, ಕಲಘಟಗಿ ಭಾಗದಲ್ಲಿ ಹತ್ತಿ, ಗೋವಿನ ಜೋಳಕ್ಕೆ ಬಿತ್ತನೆ ಈಗಾಗಲೆ ಮಾಡಿದ್ದಾರೆ. ಇನ್ನೂ ಒಂದಷ್ಟು ರೈತರು ಶೇಂಗಾ ಬಿತ್ತಿದ್ದಾರೆ. ಕಲಘಟಗಿ ಭಾಗದಲ್ಲಿ ಈ ವರ್ಷ ಹತ್ತಿ ಉತ್ಪಾದನೆ ಹೆಚ್ಚಾಗಲಿದೆ.

ಜೂನ್ ಮೊದಲ ವಾರ ಅಷ್ಟಾಗಿ ಮಳೆ ಬಾರದ್ದರಿಂದ ರೈತರು ಬಿತ್ತನೆಯನ್ನು ಮುಂದಿನ ವಾರದಿಂದ ಶುರು ಮಾಡಲಿದ್ದಾರೆ. ಈರುಳ್ಳಿ, ಮೆಣಸಿನಕಾಯಿ ಬಿತ್ತನೆಗೆ ರೈತರು ಸಜ್ಜುಗೊಂಡಿದ್ಧಾರೆ. ಒಂದಷ್ಟು ಜನರು ಮೇ ತಿಂಗಳ ಕೊನೇ ವಾರದಿಂದಲೇ ಬಿತ್ತನೆ ಆರಂಭಿಸಿದರು. ಹಾವೇರಿ ಭಾಗದಲ್ಲಿ ಮೆಕ್ಕೆಜೋಳ ಬಿತ್ತಿದವರಿಗೆ ಮಳೆ ಕೈ ಕೊಟ್ಟಿತ್ತು. ಇದರಿಂದ ಕೆಲವು ರೈತರಲ್ಲಿ ಆತಂಕ ಉಂಟಾಗಿತ್ತು.

Farmers Prepare for Sowing in Dharwad District Anticipating Heavy Crop Which Crops Will Predominate

ಶೇಕಡಾ 40ರಷ್ಟು ಬಿತ್ತನೆ ಪೂರ್ಣ

ಜೂನ್ ತಿಂಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಿದೆ. ಹಾಗಾಗಿ ರೈತರು ಖುಷಿಯಲ್ಲೇ ಬಿತ್ತನೆಗೆ ಚುರುಕು ನೀಡಿದ್ದಾರೆ. ಕೆಲವೆಡೆ ಮಳೆಯ ವಾತಾವರಣ, ನೋಡಿಕೊಂಡು ಬಿತ್ತನೆಗೆ ನಿರ್ಧರಿಸಲಿದ್ದಾರೆ. ಜಿಲ್ಲೆ ವ್ಯಾಪ್ತಿಯಲ್ಲಿ ಈಗಾಗಲೇ ಶೇಕಡಾ 40ರಷ್ಟು ಬಿತ್ತನೆ ಆಗಿದೆ. ಉಳಿದ ಕಡೆಗಳಲ್ಲಿ ಮುಂದಿನ ವಾರದ ಹೊತ್ತಿಗೆ ಬಿತ್ತನೆ ಪೂರ್ಣಗೊಳ್ಳಲಿದೆ.

ಮುಂಗಾರು ಹಂಗಾಮಿನ ಬಿತ್ತನೆ ಗುರಿ ಎಷ್ಟಿದೆ?

ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಈ ಭಾರಿ ಒಟ್ಟು 2,70,840 ಹೆಕ್ಟೇ‌ರ್ ಬಿತ್ತನೆ ಗುರಿ ಹೊಂದಲಾಗಿದೆ. ಈ ಭಾರಿ ಅಧಿಕ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಹೆಸರು ಬೆಳೆ ಹೆಚ್ಚಿನ ಬಿತ್ತನೆ ಆಗುವ ನಿರೀಕ್ಷೆಗಳು ಇವೆ. 67,150 ಹೆಕ್ಟೇರ್, ಹತ್ತಿ 59 ಸಾವಿರ ಹೆಕ್ಟೇರ್, ಗೋವಿನಜೋಳ 57,175 ಹೆ, ಸೋಯಾಬೀನ್ 33,100 ಹೆಕ್ಟೇರ್, ಶೇಂಗಾ 25 ಸಾವಿರ ಹೆಕ್ಟೇರ್, ಉದ್ದು 7,350 ಹೆಕ್ಟೇರ್ ಹಾಗೂ ಭತ್ತ 11,522 ಹೆಕ್ಟೇರ್ ಬಿತ್ತನೆ ಆಗುವ ನಿರೀಕ್ಷೆ ಇದೆ.

ಬಿತ್ತನೆ ಬೀಜ, ರಸಗೊಬ್ಬರಕ್ಕೆ ತೊಂದರೆ ಇಲ್ಲ

ಸದ್ಯ ಬಿತ್ತನೆ ಬೀಜಗಳಿಗೆ ,ರಸಗೊಬ್ಬರಕ್ಕೆ ಯಾವುದೇ ತೊಂದರೆ ಇಲ್ಲ. ಸಾಕಷ್ಟು ದಾಸ್ತಾನು ಇದ್ದು, ವಿತರಣಾ ಕೇಂದ್ರಗಳ ಮೂಲಕ ಹಂಚಿಕೆ ಮಾಡಲಾಗುತ್ತಿದೆ. 56,243 ಮೆಟ್ರಿಕ್ ಟನ್ ವಿವಿಧ ಗ್ರೇಡಿನ ರಸಗೊಬ್ಬರಗಳ ಅವಶ್ಯಕತೆ ಇದೆ. ಮೇ ಅಂತ್ಯದವರೆಗೆ 16,749 ಮೆಟ್ರಿಕ್ ಟನ್ ಗೊಬ್ಬರ ಬೇಡಿಕೆ ಇತ್ತು. ಈ ಪೈಕಿ ಯೂರಿಯಾ, ಡಿಎಪಿ, ಎಂಒಪಿ-, ಕಾಂಪ್ಲೆಕ್ಸ್-, ಎಸ್‌ಎಸ್‌ಪಿ ಸೇರಿ 14,321 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಲಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+