ಒನ್‌ಇಂಡಿಯಾ ಫಲಶ್ರುತಿ: ಹುಬ್ಬಳ್ಳಿಯಲ್ಲಿ ಪೈಪ್‌ಲೈನ್ ದುರಸ್ತಿ

By: ಶಂಭು ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಮೇ. 30: ಅಂತೂ ಇಂತು ಹುಬ್ಬಳ್ಳಿ ಜಲಮಂಡಳಿ ಎಚ್ಚೆತ್ತುಕೊಂಡಿದೆ. ಒನ್ ಇಂಡಿಯಾ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ನೀರು ತಡೆಗೆ ಕ್ರಮ ತೆಗೆದುಕೊಂಡಿದ್ದಾರೆ.

ಹುಬ್ಬಳ್ಳಿ ನಗರದ ಗೋಕುಲ ರಸ್ತೆಯಲ್ಲಿರುವ ತೋಳನಕೆರೆ ಪಕ್ಕದ ಅಕ್ಷಯ ಕಾಲೋನಿ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದಿದ್ದು, ಅಪಾರ ಪ್ರಮಾಣದ ನೀರು ಚರಂಡಿ ಸೇರುತ್ತಿತ್ತು. ಕುಡಿಯುವ ನೀರಿನ ಪೈಪ್ ಲೈನ್ ಇರುವ ಜಾಗದಲ್ಲಿ ವಿದ್ಯುತ್ ಕಂಬ ಹಾಕಲು ಬಂದ ಕಾರ್ಮಿಕರು, ಗುಂಡಿ ತೆಗೆಯುವಾಗಿ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿತ್ತು. ಇದನ್ನು ಒನ್ ಇಂಡಿಯಾ ಚಿತ್ರ ಸಮೇತ ವರದಿ ಮಾಡಿತ್ತು.[ಹುಬ್ಬಳ್ಳಿ : ಚರಂಡಿ ಸೇರುತ್ತಿರುವ ಕುಡಿಯುವ ನೀರು!]

water

ವರದಿ ಪರಿಣಾಮ ಚರಂಡಿಗೆ ಸೇರುತ್ತಿದ್ದ ನೀರನ್ನು ತಡೆ ಹಿಡಿಯಲಾಗಿದೆ. ನೀರು ಸೋರುತ್ತಿರುವ ಸ್ಥಳದಲ್ಲಿ ಈಗ ಕಾಮಗಾರಿ ನಡೆಯುತ್ತಿದ್ದು ಶೀಘ್ರದಲ್ಲಿ ಸಂಪೂರ್ಣವಾಗಿ ದುರಸ್ತಿ ಮಾಡಿ ನೀರು ಚರಂಡಿಗೆ ಸೇರದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಒನ್ಇಂಡಿಯಾ ವರದಿ ಫಲಶ್ರುತಿ : ವಿದ್ಯುತ್ ಕಂಬಕ್ಕೆ ಮುಕ್ತಿ]

ನೀರು ಸೋರಿಕೆಯಿಂದ ಅಕ್ಷಯ ಕಾಲನಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಲ್ಲಿಗಳಲ್ಲಿ ಕುಡಿಯುವ ನೀರು ಅತೀ ಕಡಿಮೆ ಪ್ರಮಾಣದಲ್ಲಿ ಬರುತ್ತಿತ್ತು. ಸಾರ್ವಜನಿಕರಿಗೆ ನೀರು ಅತೀ ಕಮ್ಮಿ ಪ್ರಮಾಣದಲ್ಲಿ ಬರುತ್ತಿರುವ ಕಾರಣ ತಿಳಿಯಲಾರದೇ ಕಂಗಾಲಾಗಿದ್ದರು. ಈಗ ನೀರಿನ ಪೈಪ್ ದುರಸ್ತಿಯಾಗಿದ್ದು ಸರಿಯಾದ ಪ್ರಮಾಣದಲ್ಲಿ ನೀರು ಬರುತ್ತಿದೆ ಎಂಬ ಪ್ರಶಂಸೆ ಒನ್ ಒಂಡಿಯಾ ವರದಿಗೆ ಜನರಿಂದ ಸಿಕ್ಕಿದೆ.

water

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Effect of Oneindia report : After the OneIndia Kannada report Hubballi water board officers took a step to control drinking water wastage. Damaged drinking water pipeline near Akshay colony was repaired by Hubballi water board.
Please Wait while comments are loading...