ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶಕ್ಕೆ ಮಾದರಿಯಾದ ಧಾರವಾಡದ ಮುಗದ ರೈಲು ನಿಲ್ದಾಣ

|
Google Oneindia Kannada News

ಧಾರವಾಡ, ನವೆಂಬರ್ 22 : ಧಾರವಾಡದ ಮುಗದ ರೈಲ್ವೇ ನಿಲ್ದಾಣ ದೇಶಕ್ಕೆ ಮಾದರಿಯಾಗಿದೆ. ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಧಾರವಾಡ ಮತ್ತು ಅಳ್ನಾವರದ ನಡುವೆ ಇರುವ ಮುಗದ ಎಂಬ ಚಿಕ್ಕ ರೈಲ್ವೇ ನಿಲ್ದಾಣ ಈಗ ದೇಶದ ಗಮನ ಸೆಳೆಯುತ್ತಿದೆ. ನಿಲ್ದಾಣದ 10 ಕಿ.ಮೀ.ಉದ್ದ ರೈಲ್ವೇ ಹಳಿಗೆ ಕೆಂಪು ಮತ್ತು ಬಿಳಿಯ ಬಣ್ಣವನ್ನು ಬಳಿಯಲಾಗಿದೆ. ರೈಲ್ವೇ ನಿಲ್ದಾಣದ ಸ್ವಚ್ಛತೆಯಿಂದ ಕೂಡಿದೆ.

ಬೆಂಗಳೂರು-ಮೈಸೂರು ನಡುವೆ ರಾತ್ರಿ ರೈಲು ಸಂಚಾರಕ್ಕೆ ಬೇಡಿಕೆಬೆಂಗಳೂರು-ಮೈಸೂರು ನಡುವೆ ರಾತ್ರಿ ರೈಲು ಸಂಚಾರಕ್ಕೆ ಬೇಡಿಕೆ

ರೈಲ್ವೇ ನಿಲ್ದಾಣದ ಅಚ್ಚುಕಟ್ಟಾದ ಉದ್ಯಾನವನ್ನು ಹೊಂದಿದೆ. ನಿಲ್ದಾಣದ ಸುತ್ತಲೂ ಲಿಲ್ಲಿ, ರೋಸ್ ಹಾಗೂ ಕಾಕಡ ಹೂವಿನ ಗಿಡಗಳನ್ನು ನೋಡಬಹುದಾಗಿದೆ. ಎಲೆಕ್ಟ್ರಾನಿಕ್ ಗಡಿಯಾರ, ಎಲ್‌ಇಡಿ ಲೈಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.

ಭಾರತೀಯ ರೈಲುಗಳಲ್ಲಿ ಶೀಘ್ರವೇ ಇ ಶೌಚಾಲಯ ವ್ಯವಸ್ಥೆಭಾರತೀಯ ರೈಲುಗಳಲ್ಲಿ ಶೀಘ್ರವೇ ಇ ಶೌಚಾಲಯ ವ್ಯವಸ್ಥೆ

Dharwad Mugad railway station set a benchmark for other stations

ಅಚ್ಚುಕಟ್ಟಾಗಿ ನಿರ್ಮಾಣವಾಗಿರುವ ರೈಲ್ವೇ ನಿಲ್ದಾಣದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಪ್ರಯಾಣಿಕರಿಗೆ ಆಸನ ವ್ಯವಸ್ಥೆ, ಶೌಚಾಲಯ, ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ.

ಹಾಸನ : 10 ವರ್ಷದ ರೈಲ್ವೆ ಮೇಲ್ಸೇತುವೆ ಬೇಡಿಕೆ ಈಗ ಈಡೇರಿತುಹಾಸನ : 10 ವರ್ಷದ ರೈಲ್ವೆ ಮೇಲ್ಸೇತುವೆ ಬೇಡಿಕೆ ಈಗ ಈಡೇರಿತು

ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರು ರೈಲ್ವೇ ನಿಲ್ದಾಣದ ಕುರಿತ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ಚಿಕ್ಕ ನಿಲ್ದಾಣ ದೇಶದ ಇತರ ರೈಲು ನಿಲ್ದಾಣಗಳಿಗೆ ಮಾದರಿಯಾಗಿದೆ ಎಂದು ಹೇಳಿದ್ದಾರೆ.

English summary
Dharwad Mugad railway station model for other station of the country. 10 km of spick & span tracks that have been painted red & white, a charming garden has set a benchmark for other stations to follow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X