60ರ ವೃದ್ಧನಿಂದ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ

Posted By: Gururaj
Subscribe to Oneindia Kannada

ಧಾರವಾಡ, ಸೆಪ್ಟೆಂಬರ್ 10 : 6 ವರ್ಷದ ಬಾಲಕಿ ಮೇಲೆ ಮುದುಕನೊಬ್ಬ ಅತ್ಯಾಚಾರ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ. 60 ವರ್ಷದ ಮುದುಕನನ್ನು ಕಂಬಕ್ಕೆ ಕಟ್ಟಿಹಾಕಿ ಗ್ರಾಮಸ್ಥರು ಧರ್ಮದೇಟು ಕೊಟ್ಟು, ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಂಗಯ್ಯ ಓಸನೂರಮಠ (60) ಎಂಬ ಆರೋಪಿ ಪಕ್ಕದ ಮನೆಯ ಆರು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಪಕ್ಕದ ಮನೆಯ ಮಗು ಆಟವಾಡಲು ಬಂದಿತ್ತು. ಆಗ ನೀತ ಕೃತ್ಯ ಎಸಗಿದ್ದಾನೆ.

ಬೆಳಗಾವಿ: ಹಸುಳೆಯನ್ನು ರೇಪ್ ಮಾಡಿ ಜೀವಂತ ಸಮಾಧಿ ಮಾಡಲೆತ್ನಿಸಿದ ಕಾಮುಕ

Dharwad : Mob beats 60 year old man for sexually assaulting minor

ಇಂದು ಬೆಳಗ್ಗೆ ವಿಷಯ ತಿಳಿದ ಗ್ರಾಮಸ್ಥರು ಸಂಗಯ್ಯನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅತ್ಯಾಚಾರ ಸಂತ್ರಸ್ತೆ ಗರ್ಭಪಾತಕ್ಕೆ ಅನುಮತಿ ನೀಡದ ಕರ್ನಾಟಕ ಹೈಕೋರ್ಟ್

ಗ್ರಾಮಸ್ಥರು ಸಂಗಯ್ಯ ಓಸನೂರಮಠನನ್ನು ಮನೆಯಿಂದ ಹೊರಗೆ ಎಳೆದು ತಂದು ಕಂಬಕ್ಕೆ ಕಟ್ಟಿ ಸರಿಯಾಗಿ ಥಳಿಸಿದ್ದಾರೆ. ನಂತರ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದರು.

ಫೋಸ್ಕೋ ಕಾಯ್ದೆಯಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಸರ್ಕಾರದ ಮಾಹಿತಿಯಂತೆ 2016ರಲ್ಲಿ ಕರ್ನಾಟಕದಲ್ಲಿ 1827 ಫೋಸ್ಕೋ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ಕೋಲಾರ : ಸರ್ಕಾರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 60-year-old man Sangayya was tied to a poll and beaten by residents of a village in Dharwad for allegedly sexually assaulting a minor on Sunday. The accused was later arrested by Kalagatagi police.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ