Get Updates
Get notified of breaking news, exclusive insights, and must-see stories!

Dharwad Lok Sabha Constituency: ಧಾರವಾಡ ಲೋಕಸಭಾ ಕ್ಷೇತ್ರದ ಪರಿಚಯ-ಮಾಹಿತಿ, ವಿವರ

ಧಾರವಾಡ, ಮಾರ್ಚ್‌, 18: ಪೇಡಾನಗರಿ ಅಂತಲೇ ಪ್ರಸಿದ್ಧಿ ಆಗಿರುವ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಈಗಾಗಲೇ ಬಿಜೆಪಿಯಿಂದ ಪ್ರಹ್ಲಾದ್‌ ಜೋಶಿಗೆ ಟಿಕೆಟ್‌ ಘೋಷಣೆ ಮಾಡಿದ್ದು, ಕಾಂಗ್ರೆಸ್‌ ಇವರ ವಿರುದ್ಧ ಯಾರನ್ನು ಕಣಕ್ಕಿಳಿಸಲಿದೆ ಎನ್ನುವ ವಿಚಾರ ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಈ ಕ್ಷೇತ್ರದ ವಿಶೇಷತೆ ಹಾಗೂ ರಾಜಕೀಯದ ಇತಿಹಾಸದ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಧಾರವಾಡ ಪೇಡಾ ದೇಶದೆಲ್ಲೆಡೆ ಪ್ರಸಿದ್ಧಿಯಾಗಿದೆ. ಈ ಧಾರವಾಡ ಪೇಡ 175 ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ಜಿಐ ಟ್ಯಾಗ್ ಅನ್ನು ಪಡೆದಿದೆ. ಧಾರವಾಡ ಪೇಡದಲ್ಲಿ ಬಳಸುವ ಹಾಲನ್ನು ಧಾರವಾಡದ ಎಮ್ಮೆಗಳಿಂದ ಸಂಗ್ರಹಿಸಲಾಗುತ್ತದೆ.

Dharwad Lok Sabha Elections 2024 Analysis Candidates List Results and Probable Winners

ಧಾರವಾಡ ಪೇಡವನ್ನು ಖರೀದಿಸಲು ಅತ್ತ್ಯುತ್ತಮ ಸ್ಥಳವೆಂದರೆ ಉತ್ತರ ಕರ್ನಾಟಕದ ಧಾರವಾಡ ನಗರ. ಧಾರವಾಡದಿಂದ ರೈಲು ಮತ್ತು ರಸ್ತೆಯ ಮೂಲಕ ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಿಗೆ ಉತ್ತಮ ಸಂಪರ್ಕವಿದೆ. ಇನ್ನು ಇಲ್ಲಿನ ಪೇಡ ಕರ್ನಾಟಕದ ಇತರ ಭಾಗಗಳಲ್ಲಿನ ಹಲವಾರು ಬೇಕರಿಗಳು ಮತ್ತು ಸಿಹಿ ತಿನಿಸು ಅಂಗಡಿಗಳಲ್ಲಿಯೂ ಸಿಗುತ್ತದೆ.

ಕ್ಷೇತ್ರದ ಇತಿಹಾಸ: ಧಾರವಾಡ ಲೋಕಸಭೆ ಕ್ಷೇತ್ರ ತನ್ನದೇ ಆದ ಇತಿಹಾಸ ಹೊಂದಿದೆ. ಡಾ.ಸರೋಜಿನಿ ಮಹಿಷ ಹಿಡಿದುಕೊಂಡು ಅನೇಕ ಘಟಾನುಘಟಿಗಳು ಲೋಕಸಭೆ ಚುನಾವಣೆಗೆ ಆಯ್ಕೆ ಆಗಿದ್ದವರು. ಈಗ ಇನ್ನು ಕಾಂಗ್ರೆಸ್ ಪಕ್ಷ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಡ ನಡೆಸಿದೆ. 2019ರ ಲೋಕಸಭೆ ಚುನಾವಣೆಯಲ್ಲಿ 5 ಲಕ್ಷ ಇದ್ದ ಲಿಂಗಾಯ ಮತದಾರರು ಇದೀಗ 2024 ಚುನಾವಣೆ ಹೊತ್ತಿಗೆ 6 ಲಕ್ಷ 20 ಸಾವಿರದವರೆಗೂ ಆಗಿದೆ.

ಇದು ಸಹಜವಾಗಿ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಮತದಾರರು ಈ ಬಾರಿ ದೊಡ್ಡಮಟ್ಟದಲ್ಲಿ ನಿರ್ಣಯಕರಾಗಲಿದ್ದಾರೆ ಎನ್ನುವ ಲೆಕ್ಕಾಚಾರಗಳು ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಮೂಡಿವೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಸ್ಥಾನದಲ್ಲಿ ಲಿಂಗಾಯತ ಮತದಾರರು ಇರುವ ಕಾರಣ, ಅಳೆದು ತೂಗಿ ಅಭ್ಯರ್ಥಿ ಫೈನಲ್ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಕಾಂಗ್ರೆಸ್ ಹೈಕಮಾಂಡ್ ಮುಂದಿದೆ.

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ವಿವರ: ಈ ಬಾರಿ ಯಾರಿಗೆ ಧಾರವಾಡ ಲೋಕಸಭಾ ಕ್ಷೇತ್ರದ ಕೈ ಸ್ಥಾನದ ಅದೃಷ್ಟದ ಟಿಕೆಟ್ ಎನ್ನುವುದೇ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕುತೂಹಲ ಮೂಡಿಸಿದೆ. ಹೀಗಾಗಿ ಲಿಂಗಾಯತ ಸಮುದಾಯದ ಪ್ರಭಾವಿ ಹಿರಿಯ ನಾಯಕರಾದ ಮೋಹನ ಲಿಂಬಿಕಾಯಿ, ಶಿವಲೀಲಾ ವಿನಯ್‌ ಕುಲಕರ್ಣಿ, ರಜತ್, ಕುರುಬ ಸಮುದಾಯದ ಕೋಟಾದಲ್ಲಿ ವಿನೋದ ಅಸೂಟಿ ಹಾಗೂ ಮಾಜಿ ಸಂಸದ ಡಿ.ಕೆ.ನಾಯ್ಕರ್ ಪುತ್ರ ಲೋಹಿತ ನಾಯ್ಕರ್ ಹೆಸರು ಹೈಕಮಾಂಡ್ ಅಂಗಳದಲ್ಲಿ ಉಳಿದಿವೆ.

ಇದರಲ್ಲಿ ಯಾರಿಗಾದರೂ ಒಬ್ಬರಿಗೆ ಬಹುತೇಕ ಟಿಕೇಟ್ ಫೈನಲ್ ಆಗಲಿದೆ. ಮೂರುಸಾವಿರ ಮಠದ ವಿವಾದ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ, ವಕೀಲಿಕೆ ಕುಟುಂಬ, ಎಲ್ಲಾ ಸಮುದಾಯದ ನಾಯಕ ಒಡನಾಡ ಹೊಂದಿರುವ ಮೋಹನ ಲಿಂಬಿಕಾಯಿ ಅವರು ಹೆಸರು ಇದೀಗ ಧಾರವಾಡ ಲೋಕಸಭಾ ಕ್ಷೇತ್ರದಾದ್ಯಂತ ಚರ್ಚೆಯ ವಿಷಯವಾಗಿದೆ.

ಬಹುತೇಕ ಮೋಹನ ಲಿಂಬಿಕಾಯಿ ಅವರ ಹೆಸರು ಫೈನಲ್ ಆಗಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿವೆ. ನಿರುದ್ಯೋಗ ಸಮಸ್ಯೆ, ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಮಾಣಿಕ ಪ್ರಯತ್ನ, ಮಹದಾಯಿ ಯೋಜನೆಯಿಂದ ಜನರಿಗೆ ಕುಡಿಯುವ ನೀರು ಒದಗಿಸುವ ಮೊದಲ ಆದ್ಯತೆ ಮೇರೆಗೆ ಕೆಲಸ ಮಾಡುವೆ ಎನ್ನುತ್ತಾರೆ ಮೋಹನ್ ಲಿಂಬಿಕಾಯಿ. ಅಂತಿಮ ರೇಸ್‌ನಲ್ಲಿ ಐವರ ಹೆಸರು ಇದೆ ಎನ್ನಲಾಗುತ್ತಿದೆ.

ಮೋಹನ್ ಲಿಂಬಿಕಾಯಿ ಹಿರಿಯ ರಾಜಕಾರಣಿಯಾಗಿದ್ದು, ಇವರ ಹೆಸರು ಧಾರವಾಡ ಲೋಕಸಭೆ ಚುನಾವಣೆ ಹೈಕಮಾಂಡ್‌ ಅಂಗಳದಲ್ಲಿ ಫೈನಲ್ ಲಿಸ್ಟ್‌ನಲ್ಲಿದ್ದು, ಇವರ ಜೋತೆಗೆ ಧಾರವಾಡ ಜಿಲ್ಲೆಯ ಉಳಿದ ನಾಯಕರುಗಳಾದ ನಿಗಮ ಮಂಡಳಿ ಅಧ್ಯಕ್ಷರಾಗಿರುವ ಯುವ ನಾಯಕ ವಿನೋದ್‌ ಅಸೂಟಿ ಹೆಸರು ಹೋಗಿದೆ ಎನ್ನಲಾಗುತ್ತಿದೆ.

ಜೊತೆಗೆ ಮಾಜಿ ಸಚಿವ ಹಾಗೂ ಪ್ರಭಾವಿ ಲಿಂಗಾಯತ ಸಮಾಜದ ನಾಯಕ ಹಾಗೂ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರು ಆಗಿರುವ ವಿನಯ ಕುಲಕರ್ಣಿ ಅವರ ಪತ್ನಿಯಾಗಿರುವ ಶಿವಲೀಲಾ ವಿನಯ್‌ ಕುಲಕರ್ಣಿ ಹೆಸರು ಫೈನಲ್ ರೇಸ್‌ನಲ್ಲಿದೆ. ಮಾಜಿ ಸಂಸದ ಡಿ.ಕೆ.ನಾಯ್ಕರ್ ಪುತ್ರ ಲೋಹಿತ್ ನಾಯ್ಕರ್, ರಜತ ಉಳಾಗಡ್ಡಿಮಠ ಹೆಸರು ಕೂಡ ಅಂತಿಮ ಹಂತದ ರೇಸ್‌ನಲ್ಲಿದೆ .

ಒಳಪಂಗಡಗಳಿಗೆ ಮೀಸಲಾತಿ ಹಾಗೂ ಲಿಂಗಾಯತ ಸಮಾಜದ ಎಲ್ಲಾ ನಾಯಕರನ್ನು ಒಟ್ಟುಗೂಡಿಸಿಕೊಂಡು ಹೋಗುವ ಕೆಲಸ ಮಾಡುವೆ. ನನ್ನನ್ನು ಗುರುತಿಸಿರುವ ಹೈಕಮಾಂಡ್‌ನ ಎಲ್ಲಾ ನಾಯಕರಿಗೂ ನಾನು ಅಭಿನಂದನೆ ಸಲ್ಲಿಸುವೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಮೋಹನ ಲಿಂಬಿಕಾಯಿ ಹೇಳಿದರು.

ನಾನು ಯುವಕನಾಗಿದ್ದು, ನನ್ನ ಹೆಸರು ಲೋಕಸಭಾ ಟಿಕೆಟ್ ಆಕಾಂಕ್ಷಿಯಲ್ಲಿರುವುದು ನನಗೂ ಹೆಮ್ಮೆ ತಂದಿದೆ. ಹೈಕಮಾಂಡ್ ಟಿಕೆಟ್ ಕೊಟ್ಟಿದ್ದೇ ಆದಲ್ಲಿ, ಚುನಾಯಿತನಾದ ಮೇಲೆ ಪ್ರಾಮಾಣಿಕವಾಗಿ ನಿರುದ್ಯೋಗ ಸಮಸ್ಯೆ, ಮಹದಾಯಿ ನೀರು ಜನರಿಗೆ ಸಿಗುವಂತೆ ಮಾಡುವೆ. ಎಲ್ಲಾ ಜನರ ವಿಶ್ವಾಸಕ್ಕೆ ಅನುಗುಣವಾಗಿ ಕೆಲಸ ಮಾಡಿ ತೋರಿಸುವೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಟಿಕೆಟ್ ಆಕಾಂಕ್ಷಿ ವಿನೋದ್‌ ಅಸೂಟಿ ಹೇಳುತ್ತಾರೆ.

ಈಗಾಗಲೇ ಕಾಂಗ್ರೆಸ್‌ನಿಂದ ಹಲವು ಆಕಾಂಕ್ಷಿಗಳ ಹೆಸರುಗಳು ಕೇಳಿಬರುತ್ತಿವೆ. ಅದರಲ್ಲಿ ಕೆಲವರು ಆಕಾಂಕ್ಷಿ ಅಲ್ಲದಿದ್ದರೂ ಹೈಕಮಾಂಡ್ ಮತ್ತು ಪಕ್ಷದ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತೇವೆ ಅನ್ನುತ್ತಿದ್ದಾರೆ. ಇನ್ನು ಕೆಲವರು ಟಿಕೆಟ್‌ಗಾಗಿ ಭಾರೀ ಕಸರತ್ತು ನಡೆಸುತ್ತಿದ್ದಾರೆ.

ಧಾರವಾಡ ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಟಿಕೆಟ್ ಆಕಾಂಕ್ಷಿ ಅಲ್ಲದಿದ್ದರೂ, ಇವರ ಅನೇಕ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವುದರಿಂದ ಅವರಿಗೆ ಅವರಿಗೇ ಟಿಕೆಟ್ ಫಿಕ್ಸ್‌ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ ಅವರಿಗೆ ಟಿಕೆಟ್ ನೀಡಿದರೆ ಈ ಬಾರಿಯ ಚುನಾವಣೆಯಲ್ಲಿ ಭಾರೀ ಪೈಪೋಟಿ ಎದುರಾಗುತ್ತದೆ.

ಇನ್ನು ಕರ್ನಾಟಕ ಲೋಕಸಭಾ ಚುನಾವಣೆಯ ಎಲ್ಲ ಕ್ಷೇತ್ರಗಳ ಪೈಕಿ ಧಾರವಾಡ ಕ್ಷೇತ್ರವು ಹೆಚ್ಚು ಗಮನ ಸೆಳೆದಿತ್ತು. ಹಲವು ಸಭೆಗಳ ಬಳಿಕ ಬಿಜೆಪಿಯು ಬಿಡುಗಡೆಗೊಳಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕರ್ನಾಟಕದ ವಿವಿಧ ಕ್ಷೇತ್ರಗಳಿಗೆ ಟಿಕೆಟ್ ಅಂತಿಮಗೊಳಿಸಿದ್ದಾರೆ. ಇದರಲ್ಲಿ ಧಾರವಾಡದ ಟಿಕೆಟ್ ಅನ್ನು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಘೋಷಣೆ ಮಾಡಲಾಗಿದೆ.

ಜೋಶಿಗೆ ಬಿಜೆಪಿ ಟಿಕೆಟ್‌: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಭಾರಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮತ್ತೆ ಟಿಕೆಟ್ ಸಿಕ್ಕಿದೆ. ಇದೇ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಟಿಕೆಟ್ ಬಯಸಿದ್ದರು. ಆದರೆ ಅವರಿಗೆ ಬಿಜೆಪಿಯ ನಿರ್ಧಾರ ಆಘಾತ ನೀಡಿದ್ದು, ಅವರಿಗೆ ಇದೀಗ ಬೆಳಗಾವಿಯಿಂದ ಟಕೆಟ್‌ ನೀಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಮತ್ತೊಂದೆಡೆ ಇಲ್ಲೂ ಕೂಡ ಶೆಟ್ಟರ್‌ಗೆ ಟಿಕೆಟ್‌ ಕೈತಪ್ಪುವ ಭೀತಿ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ಜಗದೀಶ್ ಶೆಟ್ಟರ್ ಅವರು ಧಾರವಾಡದ ಜೊತೆ ಹಾವೇರಿ ಮತ್ತು ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಆದರೆ ಪಟ್ಟಿಯಲ್ಲಿ ಹಾವೇರಿ ಕ್ಷೇತ್ರದಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಲಾಗಿದ್ದು, ಇಲ್ಲೂ ಕೂಡ ಶೆಟ್ಟರ್‌ಗೆ ನಿರಾಸೆ ಆದಂತಾಗಿದೆ.

ಇನ್ನು ಬಿಜೆಪಿ ವಿಧಾನಸಭಾ ಟಿಕೆಟ್ ಸಿಗದ ಹಿನ್ನೆಲೆ ಪಕ್ಷ ತೊರೆದು ಕಾಂಗ್ರೆಸ್‌ಗೆ ಬಂದಿದ್ದ ಶೆಟ್ಟರ್ ಮತ್ತೆ ಮರಳಿ ಬಿಜೆಪಿ ಗೂಡಿಗೆ ಸೇರಿದ್ದರು. ಆಗಿನಿಂದ ಅವರಿಗೆ ಧಾರವಾಡದ ಟಿಕೆಟ್ ಸಿಗಲಿದೆ ಎಂದು ಹೇಳಲಾಗುತ್ತಿತ್ತು. ಅವರ ಸಹೋದರ ಪ್ರದೀಪ್ ಶೆಟ್ಟರ್ ಸಹ ಧಾರವಾಡ ಟಿಕೆಟ್ ನೀಡಿದರೆ ಸೂಕ್ತ ಎಂದು ತಿಳಿಸಿದ್ದರು. ಇದೀಗ ಶೆಟ್ಟರ್ ಸಹೋದರರ ಲೆಕ್ಕಾಚಾರವೆಲ್ಲ ತಲೆಕೆಳಗಾದಂತಿದೆ.

ಪ್ರಹ್ಲಾದ್ ಜೋಶಿ ಅವರು ಧಾರವಾಡ ಕ್ಷೇತ್ರದಲ್ಲಿ 2009ರಿಂದಲೂ ಗೆಲುವು ಸಾಧಿಸಿಕೊಂಡು ಬಂದವರಾಗಿದ್ದಾರೆ. ಕೇಂದ್ರ ಸಚಿವರು ಆಗಿರುವ ಅರುವ ತಮ್ಮ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸನ್ನು ಹೊಂದಿದವರಾಗಿದ್ದಾರೆ. ಬಿಜೆಪಿ ವರಿಷ್ಠರ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಇತ್ತ ಶೆಟ್ಟರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದರು. ಆದ್ದರಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಉದ್ದೇಶದಿಂದ ಪ್ರಹ್ಲಾದ್ ಜೋಶಿಯವರಿಗೆ ಧಾರವಾಡ ಟಿಕೆಟ್ ಘೋಷಣೆ ಮಾಡಲಾಗಿದೆ.

ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಪ್ರಬಲ ಅಭ್ಯರ್ಥಿಗಳ ಹುಡುಕಾಟದಲ್ಲಿ ಕಾಂಗ್ರೆಸ್ ಕಾರ್ಯನಿರತವಾಗಿದೆ. ಆದ್ದರಿಂದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ 5ನೇ ಬಾರಿ ಪ್ರಲ್ಹಾದ್ ಜೋಶಿ ಅವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬ ಕುತೂಹಲ ಕ್ಷೇತ್ರದ ಜನತೆಯಲ್ಲಿ ಹುಟ್ಟಿದೆ.

ಒಟ್ಟಿನಲ್ಲಿ ಟಿಕೆಟ್ ಪಡೆದು ವಿಜಯದ ಮಾಲೆಯನ್ನು ಯಾವ ಪಕ್ಷದ ಅಭ್ಯರ್ಥಿ ಧರಿಸಿ ಧಾರವಾಡದ ಪೇಡಾದ ರುಚಿ ನೋಡುತ್ತಾರೆ ಎನ್ನುವುದು ಸಧ್ಯಕ್ಕೆ ಮೂಡಿರುವ ಬಹುದೊಡ್ಡ ಕುತೂಹಲವಾಗಿದೆ.

ಧಾರವಾಡ ಕರ್ನಾಟಕ ಲೋಕಸಭಾ ಕ್ಷೇತ್ರವು ಭಾರತದ ರಾಜಕಾರಣದಲ್ಲಿ ಹೆಸರುವಾಸಿಯಾದ ರಾಜಕೀಯ ಶಕ್ತಿ ಕೇಂದ್ರವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ, ಇದು ತೀವ್ರ ಪೈಪೋಟಿಯ ಕದನಕ್ಕೆ ಸಾಕ್ಷಿಯಾಯಿತು. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ 2,05,072 ಮತಗಳ ಗೆಲುವಿನ ಅಂತರದಿಂದ ಗೆಲುವು ಸಾಧಿಸಿದ್ದರು. 6,84,837 ಮತಗಳನ್ನು ಗಳಿಸಿದ ಅವರು 4,79,765 ಮತಗಳನ್ನು ಪಡೆದ ಐಎನ್‌ಸಿಯ ವಿನಯ್‌ ಕುಲಕರ್ಣಿ ಅವರನ್ನು ಪ್ರಹ್ಲಾದ್ ಜೋಶಿ ಸೋಲಿಸಿದ್ದರು.

ಧಾರವಾಡ ವೈವಿಧ್ಯಮಯ ಜನಸಮೂದಾಯವನ್ನು ಪ್ರತಿಬಿಂಬಿಸುತ್ತದೆ ಮತ್ತು ಕರ್ನಾಟಕದ ನಿರ್ಣಾಯಕ ಕ್ಷೇತ್ರವಾಗಿ ಉಳಿದಿದೆ. ಈ ಕ್ಷೇತ್ರದಲ್ಲಿ 2019ರಲ್ಲಿ 70.06 ಮತದಾನವಾಗಿದೆ. ಇದೀಗ 2024ರಲ್ಲಿ ಮತದಾರರು ತಮ್ಮ ಮತದ ಶಕ್ತಿಯನ್ನು ತೋರಿಸಲು ಇನ್ನಷ್ಟು ಉತ್ಸುಕರಾಗಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರದ 2024 ಅಭ್ಯರ್ಥಿಗಳ ಪಟ್ಟಿಗೆ ಸಂಬಂಧಿಸಿದಂತೆ ಬಿಜೆಪಿಯಿಂದ ಪ್ರಹ್ಲಾದ್ ಜೋಶಿ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+