ಜೂನ್‌ನಲ್ಲಿ ಧಾರವಾಡ ಐಐಟಿ ಕಾರ್ಯಾರಂಭ ಮಾಡಲಿದೆ

Posted By:
Subscribe to Oneindia Kannada

ಧಾರವಾಡ, ಮೇ 07 : ಧಾರವಾಡದಲ್ಲಿ ಸ್ಥಾಪನೆಯಾಗಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಈ ವರ್ಷದ ಜೂನ್ ತಿಂಗಳಿನಲ್ಲಿ ಕಾರ್ಯಾರಂಭ ಮಾಡಲಿದೆ. ಮೂರು ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಪ್ರತಿ ಕೋರ್ಸ್‌ನಲ್ಲಿ 40 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ.

ಮುಂಬೈ ಐಐಟಿ ತಜ್ಞರ ತಂಡ ಶುಕ್ರವಾರ ಧಾರವಾಡಕ್ಕೆ ಭೇಟಿ ನೀಡಿ ಐಐಟಿ ಆರಂಭಿಸುವ ಕುರಿತು ಪರಿಶೀಲನೆ ನಡೆಸಿತು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮತ್ತು ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ಅವರ ಜೊತೆ ಮಾತುಕತೆ ನಡೆಸಿತು. [ಐಐಟಿ ಕೋರ್ಸ್ ಶುಲ್ಕ 2 ಲಕ್ಷ ರು ತನಕ ಏರಿಕೆ!]

dharwad iit

ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಕಟ್ಟಡದಲ್ಲಿ ಐಐಟಿ ಕ್ಯಾಂಪಸ್ ತಾತ್ಕಾಲಿಕವಾಗಿ ಸ್ಥಾಪನೆಯಾಗಲಿದೆ. ಜೂನ್ 5ರಂದು ಐಐಟಿ ಉದ್ಘಾಟನೆಯಾಗಲಿದ್ದು, ಕಂಪ್ಯೂಟರ್ ಸೈನ್ಸ್, ಮೆಕಾನಿಕಲ್ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಕೋರ್ಸ್‌ಗಳ ತರಗತಿಗಳು ಜುಲೈನಲ್ಲಿ ಆರಂಭವಾಗಲಿದೆ. [ಈಗ ಅಧಿಕೃತ, ಧಾರವಾಡದಲ್ಲಿಯೇ ಐಐಟಿ ಸ್ಥಾಪನೆ]

ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಗೆ ಕಟ್ಟಡವನ್ನು ತೆರವುಗೊಳಿಸಲು ನೋಟಿಸ್ ಜಾರಿ ಮಾಡಲಾಗಿದೆ. ವಾಲ್ಮಿಯಲ್ಲಿ ತಾತ್ಕಾಲಿಕ ಕ್ಯಾಂಪಸ್ ನಿರ್ಮಾಣ ಮಾಡಲು 3.05 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಒಂದು ತಿಂಗಳಿನಲ್ಲಿ ಎಲ್ಲಾ ಕೆಲಸ ಪೂರ್ಣಗೊಳ್ಳುವುದೇ ಕಾದು ನೋಡಬೇಕು. [ಐಐಟಿ ಮೈಸೂರಿನ ಕೈ ತಪ್ಪಲು ಏನು ಕಾರಣ? ಪ್ರತಾಪ ಉತ್ತರ]

'ವಾಲ್ಮಿ ಕಟ್ಟಡದ ಮೊದಲನೆ ಮಹಡಿಯನ್ನು ಐಐಟಿಗಾಗಿ ಬಳಸಿಕೊಳ್ಳಲಾಗುತ್ತದೆ. ಅಗತ್ಯ ಮೂಲ ಸೌಲಭ್ಯಗಳನ್ನು ಸಿದ್ಧಪಡಿಸಲು 45 ದಿನಗಳ ಕಾಲಾವಕಾಶ ಸಾಕಾಗುತ್ತದೆ. ಪ್ರಯೋಗಾಲಯ ಮತ್ತು ತರಗತಿ ಕೋಣೆಗಳನ್ನು ಸಿದ್ಧಪಡಿಸಲಾಗಿದೆ' ಎಂದು ಐಐಟಿಯ ನೋಡೆಲ್ ಅಧಿಕಾರಿ ಮತ್ತು ಧಾರವಾಡ ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Good news for Dharwad. Academic activities of the Indian Institute of Technology Dharwad will commence on the Water and Land Management Institute (WALMI) from June 2016. Classes for first year will commence from July.
Please Wait while comments are loading...