ಕರ್ನಾಟಕದಲ್ಲಿ ರಾಹುಲ್ ಗಾಂಧಿ ಕೊಟ್ಟ ಬೂಸ್ಟರ್ ಡೋಸ್ ಫೇಲ್ ಎಂದ ಸಚಿವ ಶ್ರೀರಾಮುಲು
ಧಾರವಾಡ ಅಕ್ಟೋಬರ್ 29: ಕರ್ನಾಟಕಕ್ಕೆ ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿ ಕೊಟ್ಟ ಬೂಸ್ಟರ್ ಡೋಸ್ ಫೇಲ್ ಆಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೋಡಿಸುವ ವಿಚಾರದಲ್ಲಿ ಇದ್ದರು. ಕದನಗಳು ಆರಂಭವಾಗಿದೆ, ಅದಕ್ಕೆ ಸಂಧಾನ ಮಾಡಲು ಹಲವು ನಾಯಕರು ಬರುತಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ಮೀಸಲಾತಿ ಕೊಟ್ಟ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಇದ್ದದ್ದು ಗೊಂದಲ, ಸ್ವಾರ್ಥ ರಾಜಕಾರಣ. ಸಿಎಂ ಕುರ್ಚಿವಾಗಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೋಡುತಿದ್ದಾರೆ. ನಮ್ಮ ಸರ್ಕಾರ ಮೀಸಲಾತಿ ಕೊಡುವ ಕೆಲಸ ಮಾಡಿದೆ. ನವೆಂಬರ್ 20ಕ್ಕೆ ಬೃಹತ್ ಸಮಾವೇಶ ಮಾಡುವ ಉದ್ದೇಶದಿಂದ ಆಹ್ವಾನ ಕೊಡಲು ನಾನು ಬಂದಿದ್ದೇನೆ. ನಾಲ್ಕು ದಶಕದ ಬೇಡಿಕೆ ನಮ್ಮ ಪ್ರಧಾನಿ ಹಾಗೂ ಸಿಎಂ ಈಡೇರಿಸಿದ್ದಾರೆ. ಅವರಿಗೆ ಕೃತಜ್ಞತೆ ಹೇಳಬೇಕು ಎಂದರು.
ಸಚಿವ ಸಂಪುಟ ವಿಸ್ತರಣೆಯಲ್ಲಿ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗುವ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಸಮುದಾಯಕ್ಕೆ ಪಕ್ಷ ಆದ್ಯತೆ ಕೊಡುತ್ತ ಬಂದಿದೆ. ಯಾರೇ ಮಂತ್ರಿ ಆಗಬೇಕು ಅಂದರೆ ಪಕ್ಷ ತೀರ್ಮಾನ ತಗೆದುಕೊಳ್ಳಬೇಕು. ಪಕ್ಷ ಏನು ತಿರ್ಮಾನ ತೆಗೆದುಕೊಳ್ಳುತ್ತೆ ಕಾದು ನೋಡಬೇಕಿದೆ. ನನಗೆ ಮೀಸಲಾತಿ ಸಿಕ್ಕಿದೆ. ನಮ್ಮ ಪಕ್ಷ ಮೀಸಲಾತಿ ಕೊಟ್ಟಿದೆ, ನನಗೆ ಮುಂದೆ ಏನು ಸಿಗಬೇಕು ಎಂದು ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಇನ್ನು ಕಾಂಗ್ರೆಸ್‌ನವರು ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣು ಇಟ್ಟು ಯಾತ್ರೆ ಮಾಡುತಿದ್ದಾರೆ. ಆ ಸಿಎಂ ಕುರ್ಚಿ ಖಾಲಿ ಇಲ್ಲಾ, ಈಗ ಸಿಎಂ ಬೊಮ್ಮಾಯಿ ಇದ್ದಾರೆ. ಮುಂದೆ ಕೂಡಾ ಅವರೇ ಸಿಎಂ ಇರುತ್ತಾರೆ, ಹೀಗಾಗಿ ಕಪಟ ರಾಜಕಾರಣ ಮಾಡಿದರೂ ಕೂಡಾ ಜನರು ಜಾಗೃತ ಇದ್ದಾರೆ. ಜನರಿಗೆ ಅರಿವು ಬಂದಿದೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಕಾಂಗ್ರೆಸ್ ನೆಲಸಮ ಆಗಲಿದೆ. ಜನರು ಅವರನ್ನು ಬೇರು ಸಮೇತ ಕಿತ್ತು ಹಾಕುತ್ತಾರೆ ಎಂದರು.












Click it and Unblock the Notifications