ಅಧಿಕಾರಿಗಳೇ ಬರ ಪರಿಹಾರ ಹಣ ಹಂಚಬಹುದು: ಬಾಕಿ ನೀಡದಿದ್ದರೆ ನ್ಯಾಯಂಗ ನಿಂದನೆ ಕೇಸ್: ಕಾಂಗ್ರೆಸ್ ಶಾಸಕ ಎಚ್ಚರಿಕೆ
ಬೆಂಗಳೂರು, ಏಪ್ರಿಲ್ 27: ಕೇಂದ್ರ ಸರ್ಕಾರದಿಂದ ಬರಗಾಲ ಪರಿಹಾರ ಹಣ ಬಿಡುಗಡೆ ಮಾಡಿದೆ. ಚುನಾವಣಾ ಆಯೋಗವೇ ಅನುದಾನ ಬಿಡುಗಡೆಗೆ ಅನುವು ಕೊಟ್ಟಿದೆ. ಹೀಗಾಗಿ ಅಧಿಕಾರಿಗಳೇ ಹಣ ನೀಡಬಹುದು ಎಂದು ಕಾಂಗ್ರೆಸ್ ಶಾಸಕರೊಬ್ಬರು ತಿಳಿಸಿದ್ದಾರೆ.
ಕರ್ನಾಟಕ ಬರ ಪರಿಹಾರ ನೀಡುವಂತೆ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ಕಾಂಗ್ರೆಸ್ ಮನವಿ ಮೇರೆಗೆ ಈಗ ರೂ.3454 ಕೋಟಿ ಕೊಟ್ಟಿದ್ದಾರೆ ಎಂದು ಧಾರವಾಡದಲ್ಲಿ ಕಾಂಗ್ರೆಸ್ ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದ್ದಾರೆ.

ಕಾಂಗ್ರೆಸ್ 18,172 ಕೋಟಿ ರೂ ಮನವಿ
ಬರಗಾಲ ಬಿದ್ದ ತಕ್ಷಣ ಕೇಂದ್ರ ಸರ್ಕಾರ ರಾಜ್ಯಗಳಿಗೆ ಪರಿಹಾರ ನೀಡುವುದು ರೂಢಿ. ಕೇಂದ್ರ ಬರ ಅಧ್ಯಯನ ತಂಡ ಬಂದು ಹೋದ ತಕ್ಷಣ ಪರಿಹಾರ ಬರಬೇಕಿತ್ತು. ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ನಾವು 18,172 ಕೋಟಿ ರೂಪಾಯಿ ನೀಡುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್‌ನ ಮನವಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮೂರೇ ದಿನದಲ್ಲಿ ರಿಲೀಸ್ ಮಾಡುವುದಾಗಿ ಭರವಸೆ ಕೊಟ್ಟರು ಆದರೆ ಬರಲಿಲ್ಲ. ಸದ್ಯ ನಾವು ಕೇಳಿದ್ದರ ಪೈಕಿ 3,454 ರೂಪಾಯಿ ಬಿಡುಗಡೆ ಮಾಡಿದ್ದಾರೆ. ಉಳಿದ ಪರಿಹಾರವನ್ನೂ ನೀಡಬೇಕು. ಈಗ ಕೊಟ್ಟಿರುವ ಪರಿಹಾರ ಹಣ ಸಾಲುವುದಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ನಡೆ ಸಮರ್ಥಿಸಿಕೊಂಡ ಶಾಸಕ
ಕುಡಿಯುವ ನೀರಿನ ಸಮಸ್ಯೆಗೂ ಸಾಕಷ್ಟು ಅನುದಾನ ಬೇಕಿದೆ. ಸುಪ್ರಿಂ ಕೋರ್ಟ್ ನಿರ್ದೇಶನದಿಂದ ಬರ ಪರಿಹಾರ ಎಲ್ಲವನ್ನು ಕೊಡಬೇಕಿದೆ. ಈ ರೀತಿ ಕೋರ್ಟ್ ಮೂಲಕ ಅನುದಾನ ತಂದಿದ್ದು ಒಂದು ಮೈಲಿಗಲ್ಲು ಎಂದು ಕಾಂಗ್ರೆಸ್ ನಡೆ ಸಮರ್ಥಿಸಿಕೊಂಡರು.
ಬಾಕಿ ನೀಡದಿದ್ದರೆ ನ್ಯಾಯಾಂಗ ನಿಂದನೆ ಕೇಸ್?
ಕರ್ನಾಟಕಕ್ಕೆ ಕೇಳಿದ ಎಲ್ಲ ಪರಿಹಾರ ನೀಡುವ ಮೂಲಕ ಕೋರ್ಟ್ ಆದೇಶ ಪಾಲಿಸಬೇಕು. ಇಲ್ಲದೇ ಹೋದಲ್ಲಿ ನಾವು ನ್ಯಾಯಾಂಗ ನಿಂದನೆ ಕೇಸ್ ಹಾಕುತ್ತೇವೆ. ಮತ್ತೆ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಶಾಸಕರು ಎಚ್ಚರಿಕೆ ನೀಡಿದರು.
ಒಟ್ಟು ಪರಿಹಾರದಲ್ಲಿ ಕೇವಲ ಶೇಕಡಾ 20ರಷ್ಟು ಅನುದಾನ ಮಾತ್ರ ಕೊಟ್ಟಿದ್ದಾರೆ. ಈಗಿನ ಹಣ ನೀಡಿದ್ದು ನೀಡಿದರೆ, ಊಟ ಬಿಟ್ಟು, ಉಪ್ಪಿನಕಾಯಿ ಕೊಟ್ಟಿದ್ದಾರೆ. ಇಡೀ ಊಟವನ್ನೆ ಕೊಡಬೇಕು ಎಂದು ತಿಳಿಸಿದರು.












Click it and Unblock the Notifications