ಮಹಿಳಾ ದೌರ್ಜನ್ಯ ವಿರುದ್ದ ದನಿಯಾದ ವಾಮಾ ಬಲ್ದೋಟ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜನವರಿ,12: ದಿನಂಪ್ರತಿ ವರದಿಯಾಗುತ್ತಿರುವ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಅಪಹರಣ ಇಂತಹ ಸುದ್ದಿಗಳನ್ನು ಕೇಳಿದ ಪೋಷಕರಿಗೆ ಹೆಣ್ಣುಮಕ್ಕಳು ಮನೆ ಸೇರುವವರೆಗೂ ಸಮಾಧಾನವೇ ಇರೋದಿಲ್ಲ. ಕೊಂಚ ತಡವಾದರೂ ಸಾಕು ಆಕೆಗೆ ಹತ್ತಾರು ಫೋನ್ ಕರೆಗಳು. ಕ್ಷಣ ಕ್ಷಣಕ್ಕೂ ಅಸುರಕ್ಷತಾ ಭಾವ ಪ್ರತಿಯೊಬ್ಬ ಹೆಣ್ಣುಮಕ್ಕಳಲ್ಲಿ ಕಾಡುತ್ತಿರುತ್ತದೆ.

ಪೋಷಕರ ಅಸಮಾಧಾನ, ಮಹಿಳೆಯರ ಅಸುರಕ್ಷತೆ ಈ ಎಲ್ಲಾ ಅಂಶಗಳನ್ನು ಮನಗಂಡ ಹೊಸಪೇಟೆ ಮೂಲದ ಬಲ್ದೋಟ ಸಮೂಹವು ಮಹಿಳೆಯರು ಸ್ವತಃ ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? ಇನ್ನಿತರ ಅಂಶಗಳನ್ನು ಕಲಿಸುವ ಜೊತೆಯಲ್ಲಿ ಅತ್ಯಾಚಾರ ಮತ್ತು ಮಹಿಳಾ ಶೋಷಣೆ ವಿರೋಧ ಜಾಗೃತಿ ಕಾರ್ಯಾಗಾರವನ್ನು ನಗರದ ಎಲ್ಲ ಶಾಲಾ-ಕಾಲೇಜುಗಳಲ್ಲಿ 2 ದಿನಗಳ ಕಾಲ ಹಮ್ಮಿಕೊಂಡಿದೆ.

ಬಲ್ದೋಟ ಸಮೂಹವು ಪ್ರತಿ ಶಾಲೆಯಲ್ಲಿ ಈ ಕಾರ್ಯಾಗಾರವನ್ನು ಎರಡು ಗಂಟೆಗಳ ಕಾಲ ಹಮ್ಮಿಕೊಂಡಿದೆ. ಈ ವರ್ಷದಲ್ಲಿ ದೇಶದ ಪ್ರತಿ ಜಿಲ್ಲೆಯ ಕನಿಷ್ಠ 20 ಶಾಲೆ ಮತ್ತು ಕಾಲೇಜುಗಳಲ್ಲಿ ಆಯೋಜಿಸಲು ಗುರಿ ಹೊಂದಲಾಗಿದೆ. ಮೊದಲ ಹಂತವಾಗಿ ದೇಶದ 100 ಜಿಲ್ಲೆಗಳ 1000 ಶಾಲಾ ಮತ್ತು ಕಾಲೇಜುಗಳನ್ನು ಆಯ್ದುಕೊಳ್ಳಲಾಗಿದೆ.[ಶಬರಿಮಲೆಗೆ ಮಹಿಳೆ ಪ್ರವೇಶ ನಿಷಿದ್ಧ ಏಕೆ? ಸುಪ್ರೀಂ ಪ್ರಶ್ನೆ]

ಬನ್ನಿ ಬಲ್ದೋಟ ಸಮೂಹದ ರೂವಾರಿ ಯಾರು?, ಮಕ್ಕಳಿಗೆ ಏನೆಲ್ಲಾ ಹೇಳಿಕೊಡುತ್ತಾರೆ? ಯಾವ ರೀತಿಯಲ್ಲಿ ಅವರಿಗೆ ತರಬೇತಿ ನೀಡಲಾಗುತ್ತದೆ ಎಂದು ಕೆಳಗಿನ ಸ್ಲೈಡ್ ಗಳ ಮೂಲಕ ನೋಡಿಕೊಂಡು ಬರೋಣ. ನಿಮ್ಮ ಮಕ್ಕಳ ಶಾಲೆಯಲ್ಲಿ ಈ ರೀತಿಯ ಕಾರ್ಯಾಗಾರ ಇದ್ದಲ್ಲಿ ಕಳುಹಿಸಿಕೊಡಿ.

ಬಲ್ದೋಟ ಸಮೂಹದ ರೂವಾರಿ ಯಾರು?

ಬಲ್ದೋಟ ಸಮೂಹದ ರೂವಾರಿ ಯಾರು?

ಕುಮಾರಿ ವಾಮಾ ಬಲ್ದೋಟ ಈ ಕಾರ್ಯಾಗಾರದ ರೂವಾರಿಯಾಗಿದ್ದಾರೆ. ಇವರು ಎಂಎಸ್ಪಿಎಲ್ ಸಂಸ್ಥೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ನರೇಂದ್ರಕುಮಾರ್ ಎ. ಬಲ್ದೋಟ ಇವರ ಮೊಮ್ಮಗಳು. ಈ ಮೊದಲು ಯು.ಸಿ.ಸಿ.ಎ. (ಅನ್ಆರ್ಮಡ್ ಕಮಾಂಡೋ ಕೊಂಬಾಟ್ ಅಕಾಡೆಮಿ) ಮುಂಬೈ ನಲ್ಲಿ ತರಬೇತಿ ಪಡೆದ ಇವರು, ಡೇರ್ (ಡಿಫೆನ್ಸ್ ರೇಪ್ ಅಂಡ್ ಈವ್ ಟೀಸಿಂಗ್) ಎನ್ನುವ ಯೋಜನೆ ರೂಪಿಸಿದ್ದಾರೆ. ಪ್ರಸ್ತುತ, ಇದನ್ನು ಬಲ್ದೋಟ ಸಮೂಹದ ಸಾಮಾಜಿಕ ಹೊಣೆಗಾರಿಕೆ ವಿಭಾಗದಲ್ಲಿ ಅಳವಡಿಸಿದ್ದು, ಇದರಲ್ಲಿ 4 ಜನ ಪರಿಣೀತ ತರಬೇತಿದಾರರು ಇದ್ದಾರೆ.

ಈ ಕಾರ್ಯಾಗಾರ ಆಯೋಜಿಸಲು ಸ್ಪೂರ್ತಿ ಏನು?

ಈ ಕಾರ್ಯಾಗಾರ ಆಯೋಜಿಸಲು ಸ್ಪೂರ್ತಿ ಏನು?

ಮಹಿಳೆಯರ ಮೇಲೆ ಆಗುವ ಅತಿಹೆಚ್ಚಿನ ದೌರ್ಜನ್ಯಗಳೇ ಇಂತಹ ಕಾರ್ಯಾಗಾರ ಪ್ರಾರಂಭಿಸಲು ಇವರಿಗೆ ಪ್ರೇರಣೆ ನೀಡಿವೆ. ಶೋಷಣೆ, ದೌರ್ಜನ್ಯ ತಡೆಗಟ್ಟಲು ಇವರು ಪಣತೊಟ್ಟಿದ್ದಾರೆ.

ಕಾರ್ಯಾಗಾರದಲ್ಲಿ ಏನು ಹೇಳಿಕೊಡಲಾಗುತ್ತದೆ?

ಕಾರ್ಯಾಗಾರದಲ್ಲಿ ಏನು ಹೇಳಿಕೊಡಲಾಗುತ್ತದೆ?

ಕಾರ್ಯಾಗಾರದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಬಗ್ಗೆ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಹುಡುಗಿಯರಲ್ಲಿ ಕಾನೂನಾತ್ಮಕ ಜಾಗೃತಿ ಮೂಡಿಸಲಾಗುತ್ತದೆ. ದೌರ್ಜನ್ಯಗಳಿಂದ ರಕ್ಷಣಾತ್ಮಕವಾಗಿ ಹೇಗೆ ಹುಡುಗಿಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕೆಂಬ ಬಗ್ಗೆ ಪ್ರಾಯೋಗಿಕವಾಗಿ ಮತ್ತು ಅಧ್ಯಯನದ ಮೂಲಕ ತಿಳಿಸಿಕೊಡಲಾಗುವುದು.

ಹೀಗಿದೆ ಇವರ ತರಬೇತಿಯ ಝಲಕ್

ಹೀಗಿದೆ ಇವರ ತರಬೇತಿಯ ಝಲಕ್

ಹುಡುಗಿಯರಿಗೆ ರಕ್ಷಣಾತ್ಮಕವಾಗಿ ಹೇಗಿರಬೇಕು, ಯಾವ ರೀತಿ ಸಿದ್ಧಗೊಳ್ಳಬೇಕು, ತಪ್ಪಿಸಿಕೊಳ್ಳುವ ಕ್ರಮವೇನು, ತಿರಸ್ಕರಿಸುವ ಮತ್ತು ಸ್ವಯಂ ರಕ್ಷಣೆ ಪಡೆಯುವ ವಿಧಾನಗಳು ಯಾವುವು ಎನ್ನುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಅಪಾಯ ಒದಗಿ ಬಂದಂತಹ ಸಂದರ್ಭದಲ್ಲಿ ಇಂತಹ ತರಬೇತಿಗಳು ಪ್ರಯೋಜನಕ್ಕೆ ಬರುತ್ತವೆ. ದಾಳಿಕೋರನನ್ನು ಹೊಡೆಯುವ, ಕೊರಳುಪಟ್ಟಿ ಹಿಡಿದೆಳೆಯುವ ಮತ್ತು ಹಿಂದಕ್ಕೆ ಉರುಳುವ ಅನೇಕ ತಂತ್ರಗಾರಿಕೆ ಇದರಲ್ಲಿರುತ್ತದೆ. ಕಾರ್ಯಾಗಾರದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿನಿಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಲ್ಲದೆ, ಇತರೆ ಮಹಿಳೆಯರನ್ನು ರಕ್ಷಿಸುವುದಾಗಿ ಪ್ರಮಾಣ ಸ್ವೀಕರಿಸುವರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Baldota group will organize 2 days training programme in every High school, PUC College Hubballi. This group give a lecture about of Safety measurement of Women. Vaama Baldota is the main chief of the Baldota group, Hubballi.
Please Wait while comments are loading...