• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿ-ಧಾರವಾಡದಲ್ಲಿ ಆಟೋ ಪ್ರಯಾಣದರ ಏರಿಕೆ

|

ಧಾರವಾಡ, ನವೆಂಬರ್ 02 : ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಆಟೋ ರಿಕ್ಷಾಗಳ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಆಟೋರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘದ ದರ ಪರಿಷ್ಕರಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು.

ಧಾರವಾಡ ಜಿಲ್ಲಾಧಿಕಾರಿ ಎಂ.ದೀಪಾ ಅವರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆಯಿತು. ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಆಟೋರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ದರ ಪರಿಷ್ಕರಿಸುವಂತೆ ಮನವಿ ಮಾಡಿದರು.

ಬಿಎಂಟಿಸಿ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಪ್ರತ್ಯೇಕ ಸಾರಿಗೆ ನಿಗಮ

ಪೆಟ್ರೋಲ್ ಮತ್ತು ಎಲ್‌ಪಿಜಿ ದರಗಳಲ್ಲಿ ಏರಿಕೆಯಾಗಿದೆ. ಆದ್ದರಿಂದ, ಆಟೋರಿಕ್ಷಾಗಳ ದರ ಕಾಲಕಾಲಕ್ಕೆ ಪರಿಷ್ಕರಣೆಯಾಗಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಹಿಂದಿನ ದರಗಳ ಕುರಿತು ವಿವರವಾದ ಚರ್ಚೆ ನಡೆಯಿತು.

ಹುಬ್ಬಳ್ಳಿ-ಧಾರವಾಡ ನಡುವೆ ಬಿಆರ್‌ಟಿಎಸ್ ಬಸ್ ಸಂಚಾರ ಆರಂಭ

ಪ್ರಸ್ತುತ ಇರುವ ಪೆಟ್ರೋಲ್ ದರ, ಎಲ್.ಪಿ.ಜಿ ಇಂಧನಗಳ ಬೆಲೆ ಏರಿಕೆ, ಬಿಡಿಭಾಗಗಳ ಬೆಲೆ ಏರಿಕೆ ಹಾಗೂ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ಪರಿಗಣಿಸಿ ಜನವರಿ 1 ರಿಂದ ಜಾರಿಗೆ ಬರುವಂತೆ ಆಟೋ ರಿಕ್ಷಾಗಳ ದರವನ್ನು ಹೆಚ್ಚಳ ಮಾಡಲಾಯಿತು.

ಬೆಂಗಳೂರು ಮೌಂಟ್ ಕಾರ್ಮೆಲ್ ವಿದ್ಯಾರ್ಥಿ ಈಗ ಧಾರವಾಡ ಡಿಸಿ

ಪ್ರಯಾಣದರ ಎಷ್ಟು ಹೆಚ್ಚಾಗಿದೆ?

ಪ್ರಯಾಣದರ ಎಷ್ಟು ಹೆಚ್ಚಾಗಿದೆ?

ಈ ಹಿಂದೆ ಕನಿಷ್ಠ ಬಾಡಿಗೆ ದರ ಮೊದಲ 1.6 ಕಿ.ಮೀಗೆ 23 ರೂ. ಇತ್ತು. ಪರಿಷ್ಕೃತ ದರದ ಅನ್ವಯ 28 ರೂ.ಗಳಿಗೆ ಏರಿಕೆ ಮಾಡಲಾಗಿದೆ. 28 ರೂ. ನಂತರ ಪ್ರತಿ ಕಿ.ಮೀ. 1ಕ್ಕೆ ಹಿಂದಿನ ದರ ರೂ.13 ರೂ. ಇತ್ತು. ಪರಿಷ್ಕೃತ ದರದ ಅನ್ವಯ 15 ರೂ. ಆಗಿದೆ. ಕಾಯುವ ಹಿಂದಿನ ದರ ಮೊದಲ 15 ನಿಮಿಷ ಉಚಿತ ನಂತರದ 15 ನಿಮಿಷಕ್ಕೆ 5 ರೂ. ಮಾಡಲಾಗಿದೆ.

ಲಗೇಜ್ ದರಗಳು ಹೆಚ್ಚಳ

ಲಗೇಜ್ ದರಗಳು ಹೆಚ್ಚಳ

ಆಟೋ ಪ್ರಯಾಣ ದರ ಮಾತ್ರವಲ್ಲ ಲಗೇಜ್‌ಗಳ ದರವನ್ನು ಹೆಚ್ಚಳ ಮಾಡಲಾಗಿದೆ. ವೈಯಕ್ತಿಕ ಲಗೇಜ್ 20 ಕೆ.ಜಿಯವರೆಗೆ ಉಚಿತ ನಂತರದ 20 ಕೆ.ಜಿ. ಅಥವಾ ಹೆಚ್ಚಿನದಕ್ಕೆ 20 ರೂ. ದರ ನಿಗದಿ ಮಾಡಲಾಗಿದೆ.

ನಿಗದಿಪಡಿಸಿರುವ ದರಗಳನ್ವಯ ಬಾಡಿಗೆಯನ್ನು ಪಡೆಯತಕ್ಕದ್ದು. ನಿಗದಿತ ದರಗಳನ್ವಯ ಬಾಡಿಗೆಯನ್ನು ಪಡೆಯದೇ ಇರುವ ಆಟೋರಿಕ್ಷಾ ಚಾಲಕರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಪಾರ್ಕಿಂಗ್ ಜಾಗವಿಲ್ಲ

ಪಾರ್ಕಿಂಗ್ ಜಾಗವಿಲ್ಲ

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಆಟೋರಿಕ್ಷಾಗಳ ಸಂಚಾರ ಅಧಿಕವಾಗಿದ್ದು, ಆಟೋರಿಕ್ಷಾ ಪಾರ್ಕಿಂಗ್‌ಗೆ ಸ್ಥಳಾವಕಾಶ ಇಲ್ಲವಾಗಿದೆ. ಅನಧಿಕೃತ ಆಟೋರಿಕ್ಷಾಗಳ ಸಂಚಾರವನ್ನು ನಿರ್ಬಂಧಿಸುವ ಸಲುವಾಗಿ ಹೊಸ ಆಟೋಗಳಿಗೆ ಪರವಾನಿಗೆ ನೀಡುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.

ಆದರೆ, ಸರ್ಕಾರದ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ವಿತರಿಸಲಾಗುವ ಆಟೋರಿಕ್ಷಾಗಳು ಹಾಗೂ ಬ್ಯಾಟರಿ ಚಾಲಿತ ಗ್ರೀನ್ ಆಟೋರಿಕ್ಷಾಗಳಿಗೆ ವಿನಾಯಿತಿ ನೀಡಲಾಗಿದೆ.

2019ರಿಂದ ಅನ್ವಯ

2019ರಿಂದ ಅನ್ವಯ

ಜಿಲ್ಲಾಡಳಿತ ಆಟೋಗರ ಪ್ರಯಾಣ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ. ಆದರೆ, ನೂತನ ದರ 2019ರ ಜನವರಿ 1ರಿಂದ ಜಾರಿಗೆ ಬರಲಿದೆ. ಆಟೋ ಚಾಲಕರು ದರದ ಬಗ್ಗೆ ಗೊಂದಲಗಳು ಇದ್ದರೆ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ, ಧಾರವಾಡ ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

English summary
Dharwad district administration has hiked the auto fares in Hubballi and Dharwad city. Revised fares will come to effect from January 1, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X