ಕುಡಿಯುವ ನೀರಿನ ಸಂಪರ್ಕ ಪಡೆಯುವುದು ಈಗ ಸರಳ
ಧಾರವಾಡ, ನವೆಂಬರ್ 27 : ಕರ್ನಾಟಕ ಸರ್ಕಾರ ಜಲ ಮಂಡಳಿಯಿಂದ ಗ್ರಾಹಕರು ಹೊಸ ನೀರಿನ ಸಂಪರ್ಕ ಪಡೆಯಲು ಜಲನಿಧಿ ತಂತ್ರಾಂಶದ ಮೂಲಕ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು ಎಂದು ಆದೇಶ ನೀಡಿದೆ.
ಹೊಸ ನೀರಿನ ಸಂಪರ್ಕ ಪಡೆಯಲು ಗ್ರಾಹಕರು ಕಚೇರಿಗೆ ಅಲೆದಾಟ ಮಾಡುವುದು ಇದರಿಂದ ತಪ್ಪಲಿದೆ. ಮನೆಯಲ್ಲಿಯೇ ಕುಳಿತುಕೊಂಡು ಆನ್‌ಲೈನ್ ಮೂಲಕ ಅರ್ಜಿ ಹಾಕಬಹುದು.
ಜನರು ಅರ್ಜಿ ಸಲ್ಲಿಸುವಾಗ ಹೆಸರು, ಪೂರ್ಣ ವಿಳಾಸ, ವಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ, ಬಳಕೆಯ ಉದ್ದೇಶ ಅಲ್ಲದೇ ಕಟ್ಟಡದ ಒಟ್ಟು ವಿಸ್ತೀರ್ಣ ಮುಂತಾದ ಮಾಹಿತಿ ನೀಡಬೇಕು.

ಪ್ರಸ್ತುತ ಸಾಲಿನ ಆಸ್ತಿ ತೆರಿಗೆ ತುಂಬಿದ ರಸೀದಿ ಪತ್ರ, ಅನುಮೋದಿತ ಕಟ್ಟಡದ ನೀಲಿ ನಕ್ಷೆ, ಕಟ್ಟಡದ ಮುಕ್ತಾಯ ಪ್ರಮಾಣ ಪತ್ರ, ಆಸ್ತಿ ಖರೀದಿ ಪತ್ರ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಚಾಲ್ತಿ ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಸಲ್ಲಿಸಬೇಕು.
ಹೊಸ ಸಂಪರ್ಕ ಪಡೆಯಲು ವೆಬ್ ಸೈಟ್ ವಿಳಾಸ. ಜನರು ಈ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
www.mrc.gov.in/jalanidhi/index.do
ಹೆಚ್ಚಿನ ಮಾಹಿತಿಗಾಗಿ 9449846008 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಕರ್ನಾಟಕ ಜಲಮಂಡಳಿ, ಹುಬ್ಬಳ್ಳಿ ಧಾರವಾಡ ನೀರು ಸರಬರಾಜು ನಿರ್ವಹಣಾ ಉಪ-ವಿಭಾಗದ ಸಹಾಯಕ ಕಾರ್ಯಪಾಲಕರು ತಿಳಿಸಿದ್ದಾರೆ.












Click it and Unblock the Notifications