ವೈದ್ಯೆಯಂತೆ ಬಂದು ಮಗು ಕದ್ದೊಯ್ದ ಮಹಿಳೆ ಪೊಲೀಸರ ವಶ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜನವರಿ, 27: ಇತ್ತೀಚೆಗಷ್ಟೇ ಯುವಕನೋರ್ವನಿಗೆ ತಪ್ಪು ಚಿಕಿತ್ಸೆ ನೀಡಿ ಇಲ್ಲದ ವಿವಾದಕ್ಕೆ ಗುರಿಯಾಗಿದ್ದ ನಗರದ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆ ಇದೀಗ ಮಗು ಅಪಹರಣ ವಿಷಯದಲ್ಲಿ ಮತ್ತಷ್ಟು ಸುದ್ದಿಯಾಗಿದೆ. ಜನರ ದೃಷ್ಟಿ ತನ್ನತ್ತ ನೆಡುವಂತೆ ಮಾಡಿದೆ.

ಕಳೆದೆರಡು ದಿನಗಳ ಹಿಂದೆ ಕಿಮ್ಸ್ ನಲ್ಲಿ ಮಹಿಳೆಯೋರ್ವಳ ಹೆಣ್ಣು ಮಗುವನ್ನು ವೈದ್ಯೆಯಂತೆ ಬಂದ ಮಹಿಳೆ ಅಪಹರಿಸಿದ್ದು, ಕೇವಲ ಒಂದು ದಿನದೊಳಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಈ ಸಂಬಂಧ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಹೆತ್ತವರ ಪ್ರೀತಿ ಕಳೆದುಕೊಂಡು ನಲುಗುತ್ತಿರುವ ಮಕ್ಕಳು]

Hubballi

ಘಟನೆಯ ವಿವರ:

ಕಿಮ್ಸ್ ಆಸ್ಪತ್ರೆಯಲ್ಲಿ ಅನಿತಾ ಎಂಬಾಕೆ ಹೆಣ್ಣು ಮಗುವಿಗೆ ಜನ್ಮನೀಡಿ 11 ದಿನವಾಗಿತ್ತು. ಈಕೆ ಮೂಲತಃ ಹಾವೇರಿ ಜಿಲ್ಲೆಯ ಮೋಟೆಬೆನ್ನೂರು ಗ್ರಾಮದವಳು. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಮೂಲದ ಸುರೇಖಾ ಕಾವಾಡಿ ವೈದ್ಯೆಯಂತೆ ನಟಿಸಿ ಮಗು ಕದ್ದೊಯ್ದ ಮಹಿಳೆ. ಧಾರವಾಡದ ಲಕ್ಷ್ಮೀಸಿಂಗನಕೇರಿ ಬಳಿಯ ವಡ್ಡರ ಓಣಿಯಲ್ಲಿ ವಾಸವಿದ್ದ ಈಕೆಗೆ ಈ ಹಿಂದೆ ಎರಡು ಬಾರಿ ಗರ್ಭಪಾತವಾಗಿತ್ತು.

Hubballi

ವಿವಾಹಿತೆಯಾದ ಈಕೆ ಮಕ್ಕಳಾಗಲಿಲ್ಲ ಎಂಬ ಕೊರಗಿನಲ್ಲಿಯೇ ಜೀವನ ಸಾಗಿಸುತ್ತಿದ್ದು, ಖಿನ್ನತೆಗೆ ಒಳಗಾಗಿದ್ದಳು. ಕಿಮ್ಸ್ ಆಸ್ಪತ್ರೆಗೆ ಬಂದ ಈಕೆ ತಂದೆ ತಾಯಿ ವಿಶ್ವಾಸಗಳಿಸಿಕೊಂಡ ಈಕೆ ಮಗುವಿಗೆ ಚುಚ್ಚುಮದ್ದು ಕೊಡಿಸುವ ನೆಪದಲ್ಲಿ ಮಗುವನ್ನು ಅಪಹರಿಸಿದ್ದಳು.[ಈ ಬಾರಿ 25 ಮಕ್ಕಳಿಗೆ ಶೌರ್ಯ ಪ್ರಶಸ್ತಿ ಪುರಸ್ಕಾರ]

ಈ ಸುದ್ದಿ ಎಲ್ಲ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಈಕೆಯ ಬಳಿಯಿದ್ದ ಮಗುವಿನ ವಿಷಯವನ್ನು ಸ್ಥಳೀಯರು ಪೊಲೀಸರಿಗೆ ದೂರವಾಣಿ ಮೂಲಕ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಮಗುವನ್ನು ತಂದೆ-ತಾಯಿಗೆ ಹಸ್ತಾಂತರಿಸಿ ಮಹಿಳೆಯನ್ನು ಬಂಧಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A women Surekha Kaavaadi kidnapped 11 months girl baby in KIMS hospital Hubballi, on Tuesday, January 26th. Anitha is the mother of 11 month baby. She is live in Haveri district.
Please Wait while comments are loading...