ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಘಟಗಿ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ಹೋಲುವ ಹುಣಸೇಮರ

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ನವೆಂಬರ್ 26: ಕಲಘಟಗಿ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ಹೋಲುವ ಹುಣಸೇಮರ. ಸಾಮಾಜಿಕ ಜಾಲತಾಣದಲ್ಲಿ ವೈರಲ್ಆದ ಫೋಟೋ.

ಕರ್ನಾಟಕ ರಾಜ್ಯದ ನಕಾಶೆಯನ್ನು ಹೋಲುವ ಹುಣಸೆಮರವೊಂದು ಸದ್ಯೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿ ಸಂಚಲನ ಮೂಡಿಸಿದೆ.

ಈ ರೀತಿಯ ವಿಚಿತ್ರ ಹುಣಸೆ ಮರ ಎಲ್ಲಿದೆ ಎಂಬುದು ಇಷ್ಟು ದಿನ ಯಾರಿಗೂ ಗೊತ್ತಿರಲಿಲ್ಲ. ಎಲ್ಲರೂ ನಮ್ಮ ಊರು ಹತ್ತಿರ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳುತ್ತಿದ್ದರು. ಆದ್ರೆ ಈಗ ಈ ಕರ್ನಾಟಕ ಮ್ಯಾಪ್ ಹೋಲುವ ವಿಶಿಷ್ಟ ಮರ ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿದೆ ಎನ್ನಲಾಗುತ್ತಿದೆ.

A tamarind Tree looks like Map of Karnataka in Kalghatgi Taluk

ಹೀಗಾಗಿ ಮರದ ಬಗ್ಗೆ ಇರುವ ಸಾಕಷ್ಟು ಅನುಮಾನಗಳಿಗೆ ತೆರೆ ಬಿದಿದ್ದು, ಈಗ ಈ ಹುಣಸೆ ಮರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಣಸೆ ಮರದಲ್ಲಿ ಕರ್ನಾಟಕ ನಕಾಶೆ ಮೂಡಿದ್ದು, ನಮ್ಮ ಗ್ರಾಮಕ್ಕೊಂದು ಹೆಮ್ಮೆ ಎನ್ನುತ್ತಾರೆ ಗ್ರಾಮಸ್ಥರು.

ಇನ್ನು ಈ ಮರಕ್ಕೆ ಯಾರೂ ಕೂಡಾ ಯಾವುದೇ ರೀತಿಯ ಮಾರ್ಪಾಡು ಮಾಡಲಾಗಿಲ್ಲ. ಇದು ನಿಸರ್ಗದತ್ತವಾಗಿ ತನ್ನಷ್ಟಕ್ಕೆ ತಾನೆ ಬೆಳೆದಿರುವ ಈ ಹುಣಸೆ ಮರ, ಹೀಗಿರುವಾಗ ಕನ್ನಡಿಗರಿಗೊಂದು ಹೆಮ್ಮೆಯ ಪ್ರತೀಕವಾಗಿದೆ ಎಂದು ಹೇಳುತ್ತಿದ್ದಾರೆ ಗ್ರಾಮಸ್ಥರು.

English summary
A tamarind Tree looks like Map of Karnataka in Kalghatgi Taluk
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X