ಹುಬ್ಬಳ್ಳಿಯಲ್ಲಿ ಶಾಲಾ ಬಾಲಕಿ ಪ್ರಾಣ ತೆಗೆದ ಲಾರಿ ಚಾಲಕ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜನವರಿ, 21: ದಾರಿಯಲ್ಲಿ ಹೋಗುತ್ತಿದ್ದ ಶಾಲಾ ಬಾಲಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರ ಬಂಕಾಪುರ ಚೌಕ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ನಡೆದಿದೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಾಲಾ ಬಾಲಕಿಯೇ ಸ್ನೇಹಾ ಹೊನ್ನಪ್ಪ ಜಂಬಲದಿನ್ನಿ(8). ಈ ಅಪಘಾತದ ವಿರುದ್ದ ಪ್ರತಿಭಟನೆ ಆರಂಭಿಸಿದ ಜನತೆ ಲಾರಿಯನ್ನು ಸ್ಥಳದಲ್ಲಿಯೇ ಸುಟ್ಟು ಹಾಕಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.[1 ಬಾಟಲಿ ನೀರು ಖರೀದಿಸಿದ್ರೆ ಒಂದು ಲೀ. ಪೆಟ್ರೋಲ್ ಫ್ರೀ!]

Hubballi

ಲಾರಿ ಚಾಲಕ ಕಿವಿಗೆ ಈಯರ್ ಫೋನ್ ಹಾಕಿಕೊಂಡು ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸುತ್ತಿದ್ದನು. ಬಂಕಾಪುರ ಚೌಕ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಆತನ ನಿರ್ಲಕ್ಷದಿಂದ ಶಾಲಾ ಬಾಲಕಿ ಸಾವನ್ನಪ್ಪಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾನೆ.[ವೇಗಯುತ ದ್ವಿಚಕ್ರ ವಾಹನಗಳಿಗೆ ಬ್ರೇಕ್ ಹಾಕುತ್ತಾ ಸರ್ಕಾರ?]

ಸ್ನೇಹಾ ನಗರದ ಸರಕಾರಿ ಪ್ರಾಥಮಿಕ ಶಾಲೆ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಮೃತ ಬಾಲಕಿ ಸ್ನೇಹಾಳ ತಂದೆ ಆಟೋ ಚಾಲಕರಾಗಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಲಾರಿಗೆ ಬೆಂಕಿ ಹಚ್ಚಿದ ಮತ್ತು ಅಪಘಾತ ಕುರಿತು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A school child Sneha Honnappa Jambaladinni (8) died on the spot in road accident in Bankapur Chouk, National highway, Hubballi on Wednesday evening, January 20th. Hubballi people take protest againt lorry driver and fired his lorry
Please Wait while comments are loading...