• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಧಾರವಾಡ : ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ಇನ್ನೂ ನಿಗದಿಯಾಗಿಲ್ಲ

|

ಧಾರವಾಡ, ನವೆಂಬರ್ 14 : 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಾಂಕ ನಿಗದಿಯಾಗಿದೆ. ಆದರೆ, ಜಿಲ್ಲಾಡಳಿತ ಎಲ್ಲಿ ಸಮ್ಮೇಳನ ನಡೆಸಬೇಕು? ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ.

ಧಾರವಾಡದಲ್ಲಿ 2019ರ ಜನವರಿ 4 ರಿಂದ ಮೂರು ದಿನಗಳ ಕಾಲ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಜಿಲ್ಲಾಡಳಿತ ಮೂರು ಸ್ಥಳಗಳನ್ನು ಸಮ್ಮೇಳನಕ್ಕಾಗಿ ಗುರುತಿಸಿದೆ. ಆದರೆ, ಧಾರವಾಡ ನಗರದಲ್ಲಿ ಸಮ್ಮೇಳನ ನಡೆಯಬೇಕೋ?, ಹೊರವಲಯದಲ್ಲಿ ನಡೆಯಬೇಕೋ? ಎಂಬ ಬಗ್ಗೆ ಇನ್ನೂ ಗೊಂದಲವಿದೆ.

84ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ಅಂತಿಮ

ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆಗೆ 15 ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ.

ಕನ್ನಡ ಭಾಷೆಯ ಗುಣಮಟ್ಟವನ್ನು ಹೆಚ್ಚಿಸುವುದೇ ಕನ್ನಡದ ಅಭಿವೃದ್ಧಿ

ಈಗಾಗಲೇ ಸಮ್ಮೇಳನದ ಸಿದ್ಧತೆಗಾಗಿ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಉಪ ಸಮಿತಿಗಳು ತಮ್ಮ ಸದಸ್ಯರನ್ನು ಒಳಗೊಂಡ ವಾಟ್ಸಪ್ ಗ್ರೂಪ್‌ಗಳನ್ನು ರಚಿಸಿಕೊಂಡು ನಿರಂತರವಾಗಿ ಸಂಪರ್ಕದಲ್ಲಿರಬೇಕು. ಯಾವುದೇ ಸಂದೇಹ ಅಥವಾ ಮಾರ್ಗದರ್ಶನ ಬೇಕಿದ್ದರೆ ತ್ವರಿತವಾಗಿ ಮುಖ್ಯ ಸಮಿತಿ ಅಥವಾ ಸ್ವಾಗತ ಸಮಿತಿಗೆ ಸಂಪರ್ಕಿಸಬೇಕು ಎಂದು ಸೂಚನೆ ನೀಡಲಾಗಿದೆ.

ಕನ್ನಡ ಆಡಳಿತ ಭಾಷೆಯಾಗಲು ಕುಮಾರಣ್ಣನ ದಿಟ್ಟ ಹೆಜ್ಜೆ

ಎಲ್ಲಿ ನಡೆಯಲಿದೆ ಸಮ್ಮೇಳನ?

ಎಲ್ಲಿ ನಡೆಯಲಿದೆ ಸಮ್ಮೇಳನ?

ಕರ್ನಾಟಕ ಕಾಲೇಜ್ ಧಾರವಾಡ (ಕೆಸಿಡಿ) ಮೈದಾನ ಅಥವ ನಗರದ ಹೊರವಲಯದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸಮ್ಮೇಳನ ನಡೆಸಬೇಕೆ? ಎಂದು ಜಿಲ್ಲಾಡಳಿತ ಪರಿಶೀಲನೆ ನಡೆಸುತ್ತಿದೆ. ಕೆಸಿಡಿ ಮೈದಾನದಲ್ಲಿ ಆಯೋಜನೆ ಮಾಡಿದರೆ ಊಟದ ವ್ಯವಸ್ಥೆ ಮಾಡುವುದು ಸವಾಲಾಗುತ್ತದೆ. ಕೃಷಿ ವಿವಿ ಆವರಣದಲ್ಲಿ ಆಯೋಜನೆ ಮಾಡಿದರೆ ಜನರಿಗೆ ಬಂದು ಹೋಗಲು ದೂರವಾಗಲಿದೆ ಎಂಬ ಅಭಿಪ್ರಾಯವಿದೆ. ಆದ್ದರಿಂದ, ಸ್ಥಳ ಅಂತಿಮಗೊಂಡಿಲ್ಲ.

ಹಲವು ಸ್ಥಳಗಳ ಪರಿಶೀಲನೆ

ಹಲವು ಸ್ಥಳಗಳ ಪರಿಶೀಲನೆ

ಡಿಐಇಟಿ ಮೈದಾನ, ರೈಲ್ವೆ ಗ್ರೌಂಡ್, ಕೆಸಿಡಿ ಮೈದಾನ, ಕೃಷಿ ವಿವಿ ಆವರಣವನ್ನು ಧಾರವಾಡ ಜಿಲ್ಲಾಡಳಿತ ಈಗಾಗಲೇ ಪರಿಶೀಲನೆ ಮಾಡಿದೆ. ಆದರೆ, ಈ ಸ್ಥಳಗಳ ಪೈಕಿ ಎಲ್ಲಿ ಸಮ್ಮೇಳನ ನಡೆಸಬೇಕು? ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ. 2019ರ ಜನವರಿ 4 ರಿಂದ ಮೂರು ದಿನಗಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಸಮಿತಿಗಳ ರಚನೆ

ಸಮಿತಿಗಳ ರಚನೆ

ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ. ಸ್ವಾಗತ ಸಮಿತಿಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಗೌರವಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ. ದೇಶಪಾಂಡೆ ಅಧ್ಯಕ್ಷರಾಗಿದ್ದಾರೆ. ಜಿಲ್ಲಾಧಿಕಾರಿ ದೀಪಾ ಚೋಳನ್ ಕಾರ್ಯಧ್ಯಕ್ಷರಾಗಿದ್ದಾರೆ.

ವಸತಿ ಮತ್ತು ಸಾರಿಗೆ ಸಮಿತಿಗೆ ಅಪರ ಜಿಲ್ಲಾಧಿಕಾರಿಗಳು ಕಾರ್ಯಾಧ್ಯಕ್ಷರಾಗಿದ್ದಾರೆ. ಆಹಾರ ಸಮಿತಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಕಾರ್ಯಾಧ್ಯಕ್ಷರು. ಸ್ವಚ್ಛತಾ ಮತ್ತು ನೈರ್ಮಲ್ಯತೆ ಸಮಿತಿಗೆ ಕಂದಾಯ ವಿಭಾಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಉಪ ಆಯುಕ್ತರು ಕಾರ್ಯಾಧ್ಯಕ್ಷರು.

ವಿವಿಧ ಸಮಿತಿಗಳ ಪಟ್ಟಿ

ವಿವಿಧ ಸಮಿತಿಗಳ ಪಟ್ಟಿ

* ಮೆರವಣಿಗೆ ಸಮಿತಿ : ಕಾರ್ಯಾಧ್ಯಕ್ಷರು, ಉಪ ಪೊಲೀಸ್ ಆಯುಕ್ತರು, ಅಪರಾಧ ಮತ್ತು ಸಾರಿಗೆ, ಹುಬ್ಬಳ್ಳಿ-ಧಾರವಾಡ ಮಹಾನಗರ. ಸಾಂಸ್ಕೃತಿಕ ಕಾರ್ಯಕ್ರಮ ಕಾರ್ಯಕಾರಿ ಸಮಿತಿ : ಕಾರ್ಯಾಧ್ಯಕ್ಷರು- ಅಬಕಾರಿ ಅಧೀಕ್ಷಕರು, ಧಾರವಾಡ.

* ವೇದಿಕೆಯ ಕಾರ್ಯಕಾರಿ ಸಮಿತಿ : ಕಾರ್ಯಾಧ್ಯಕ್ಷರು - ಅಧೀಕ್ಷಕ ಅಭಿಯಂತರರು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ. ಆರೋಗ್ಯ ಸಮಿತಿ : ಕಾರ್ಯಾಧ್ಯಕ್ಷರು- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು.

* ಪ್ರಚಾರ ಸಮಿತಿ : ಕಾರ್ಯಾಧ್ಯಕ್ಷರು - ಹಿರಿಯು ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ. ನೋಂದಣಿ ಸಮಿತಿ : ಕಾರ್ಯಾಧ್ಯಕ್ಷರು - ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ. ವಾಣಿಜ್ಯ ಮಳಿಗೆ ಸಮಿತಿ : ಕಾರ್ಯಾಧ್ಯಕ್ಷರು - ಮುಖ್ಯ ಆಡಳಿತಾಧಿಕಾರಿಗಳು, ಕಿಮ್ಸ್, ಹುಬ್ಬಳ್ಳಿ.

ಪುಸ್ತಕ ಪ್ರದರ್ಶನ ಸಮಿತಿ

ಪುಸ್ತಕ ಪ್ರದರ್ಶನ ಸಮಿತಿ

* ಅಲಂಕಾರ ಸಮಿತಿ : ಕಾರ್ಯಾಧ್ಯಕ್ಷರು - ಅಧೀಕ್ಷಕ ಅಭಿಯಂತರರು, ಹೆಸ್ಕಾಂ, ಹುಬ್ಬಳ್ಳಿ. ಮಹಿಳಾ ಸಮಿತಿ : ಕಾರ್ಯಾಧ್ಯಕ್ಷರು - ಉಪ ನಿಬಂಧಕರು, ಸಹಕಾರ ಸಂಘಗಳು, ಧಾರವಾಡ. ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆ ಸಮಿತಿ : ಕಾರ್ಯಾಧ್ಯಕ್ಷರು-ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ರಾಯಾಪುರ, ಧಾರವಾಡ. ಸ್ವಯಂ ಸೇವಕರ ಉಸ್ತುವಾರಿ ಸಮಿತಿ : ಕಾರ್ಯಾಧ್ಯಕ್ಷರು-ಕುಲಸಚಿವರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

English summary
Dharwad Deputy Commissioner M. Deepa said that, district administration is yet to final the venue of the 84th All India Kannada Sahitya Sammelan to be held in January 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X