• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಧಾರವಾಡ : ಭೀಕರ ಅಪಘಾತ, ಐವರು ಸ್ಥಳದಲ್ಲಿಯೇ ಸಾವು

|

ಧಾರವಾಡ, ಮೇ 26 : ನವಲಗುಂದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ನವಲಗುಂದದ ಅಮರಗೊಳ ಕ್ರಾಸ್‌ ಬಳಿ ಭಾನುವಾರ ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಾರಿನಲ್ಲಿದ್ದ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನ ಟೈರ್‌ ಸ್ಫೋಟಗೊಂಡು ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿಯಾಗಿದೆ.

ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ 15 ಜನರ ದುರ್ಮರಣ

ಮೃತಪಟ್ಟವರನ್ನು ರವಿ ಜಂಬುಲಿಂಗಪ್ಪ ಹಂಡಿ (48), ಲೇಖಶ್ರೀ ಹಂಡಿ (19), ನವೀನ್ ಖನ್ನಾ (16), ಬಾಗಲಕೋಟೆಯ ಶರಣ ಜಿಗಜಿನ್ನಿ (10), ವರ್ಷಾ ಜಿಗಜಿನ್ನಿ (12) ಎಂದು ಗುರುತಿಸಲಾಗಿದೆ.

ಯಶವಂತಪುರ ಫ್ಲೈ ಓವರ್‌ ಮೇಲಿಂದ ಬಿದ್ದ ಲಾರಿ, ಕ್ಲೀನರ್ ಸಾವು

ದಾವಣಗೆರೆಯಿಂದ ಬಾಗಲಕೋಟೆ ಕಡೆಗೆ ಹೋಗುತ್ತಿದ್ದ ಫೋರ್ಡ್‌ ಕಾರಿನ ಮುಂಭಾಗದ ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಎಲ್ಲರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಶಿರಾಡಿ ಘಾಟ್‌ನಲ್ಲಿ ಅಪಘಾತ : ಕಾರಿನಲ್ಲಿದ್ದ ನಾಲ್ವರ ದುರ್ಮರಣ

ಕೆಎ 63, ಎಂ 700 ನಂಬರ್ ಕೆಂಪು ಕಣ್ಣದ ಫೋರ್ಡ್ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ನವಲಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

English summary
5 killed after truck collide with car at Navalgund, Dharwad on May 26, 2019. Navalgund police visited the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X