ಧಾರವಾಡ: 5 ಮಕ್ಕಳು, 16 ಮೊಮ್ಮಕ್ಕಳು, 27 ಮರಿಮೊಮ್ಮಕ್ಕಳು, 6 ಗಿರಿ ಮೊಮ್ಮಕ್ಕಳನ್ನ ಕಂಡ 106 ವರ್ಷದ ಅಜ್ಜಿ ನಿಧನ
ಧಾರವಾಡ, ಸೆಪ್ಟೆಂಬರ್, 14: ಸಾಮಾನ್ಯವಾಗಿ ಇತ್ತೀಚಿನ ಕಾಲಘಟ್ಟದಲ್ಲಿ 50 ವರ್ಷ ಬದುಕಿದರೆ ಅದೇ ಒಂದು ಸಾಧನೆ. ಆದರೆ 100 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬದುಕುಳಿದವರ ಸಂಖ್ಯೆ ತುಂಬಾ ಕಡಿಮೆ. ಹಾಗೆಯೇ ಅಜ್ಜಿಯೊಬ್ಬರು ಮಕ್ಕಳ್ಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳನ್ನು ಕಂಡು ಇದೀಗ ಅನಾರೋಗ್ಯ ಹಿನ್ನೆಲೆ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಧಾರವಾಡ ಹಾವೇರಿಪೇಟೆ ನಿವಾಸಿಯಾಗಿದ್ದ 106 ವರ್ಷದ ಅಜ್ಜಿ ಯಮನಮ್ಮ ಬಸಪ್ಪ ಮಂಗಳೂರು ಅನಾರೋಗ್ಯ ಹಿನ್ನೆಲೆ ನಿಧನರಾಗಿದ್ದಾರೆ. 1918ರಲ್ಲಿ ಜನಿಸಿದ ಅಜ್ಜಿ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಂಡಿದ್ದರು. ಇವರಿಗೆ 5 ಜನ ಮಕ್ಕಳು, 16 ಜನ ಮೊಮ್ಮಕ್ಕಳು, 27 ಮರಿಮೊಮ್ಮಕ್ಕಳು, 6 ಗಿರಿ ಮೊಮ್ಮಕ್ಕಳು ಇದ್ದು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಗುವಿನಿಂದ ಹಿಡಿದು ಹಿರಿಯರವರೆಗೂ ಖಾಯಿಲೆಗೆ ಒಳಗಾಗಿರುವವರನ್ನು ನೋಡಿದ್ದೇವೆ. ಆದರೆ ಹಿಂದಿನ ಕಾಲದ ಜನರಿಗೆ ಯಾವುದೇ, ಖಾಯಿಲೆಗಳು ಇರುತ್ತಿರಲಿಲ್ಲ. ಯಾಕೆಂದರೆ ಅವರ ಆಹಾರ ಪದ್ಧತಿ, ಜೀವನ ಶೈಲಿ ಆಗಿತ್ತು.
ಆದರೆ ಈಗಿನ ಕಾಲದಲ್ಲಿ ತಂತ್ರಜ್ಞಾನ ಬೆಳೆದಂತೆಲ್ಲ, ಮನುಷ್ಯರು ಕೂಡ ಅದಕ್ಕೆ ಹೊಂದಿಕೊಂಡುಬಿಡುತ್ತಾರೆ. ಇದನ್ನು ಬಿಟ್ಟರೆ, ಯಾವುದೇ ದಾರಿ ಇಲ್ಲ. ಮೂಲಗಳ ಪ್ರಕಾರ, ತಂತ್ರಜ್ಞಾನದಲ್ಲಿ ಎಷ್ಟು ದೊಡ್ಡ ಮಟ್ಟಿಗೆ ಬದಲಾವಣೆ ಆಗುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಮನುಷ್ಟನ ಮೇಲೆ ಪರಿಣಾಮಕಾರಿಯಾದ ಅಂಶಗಳು ಪ್ರಭಾವ ಭೀರುತ್ತವೆ. ಇಂತಹದರ ನಡುವೆಯೂ ಈ ಅಜ್ಜಿ 106 ವರ್ಷ ಯಾವುದೇ ಖಾಯಿಲೆಗಳಿಲ್ಲದೆ ಬದುಕಿದ್ದು, ಇದೀಗ ಅನಾರೋಗ್ಯ ಹಿನ್ನೆಲೆ ಕೊನೆಯುಸಿರೆಳೆದಿದ್ದಾರೆ.












Click it and Unblock the Notifications