ಲೇಖಕ ಯೋಗೀಶ್ ಮಾಸ್ಟರ್ ಗೆ ಮಸಿ ಬಳಿದು, ಜೀವ ಬೆದರಿಕೆ

Posted By:
Subscribe to Oneindia Kannada

ದಾವಣಗೆರೆ, ಮಾರ್ಚ್ 13: ಪ್ರಗತಿಪರ ಲೇಖಕ ಯೋಗೇಶ್ ಮಾಸ್ಟರ್ ಅವರ ಮುಖಕ್ಕೆ ಕಪ್ಪು ಶಾಯಿ ಬಳಿದು ಅವಮಾನ ಮಾಡಿರುವ ಘಟನೆ ನಗರದಲ್ಲಿ ಭಾನುವಾರ ನಡೆದಿದ್ದು ಬೆಳಕಿಗೆ ಬಂದಿದೆ.

ದಿವಂಗತ ಪರ್ತಕರ್ತ ಪಿ. ಲಂಕೇಶ್ ಅವರ ಸ್ಮರಣೆಗಾಗಿ ಏರ್ಪಡಿಸಲಾಗಿದ್ದ 'ಲಂಕೇಶ್ ನೆನಪು' ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ, ತಮ್ಮ ಕೆಲವಾರು ಗೆಳೆಯರೊಂದಿಗೆ ಹೋಟೆಲೊಂದರಲ್ಲಿ ಚಹಾ ಸೇವಿಸುತ್ತಿದ್ದ ಯೋಗೇಶ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

Writer Yogesh Master attacked in Davanagere

ಬೈಕಿನಲ್ಲಿ ಆಗಮಿಸಿದ ಈ ದುಷ್ಕರ್ಮಿಗಳು ಅವರ ಮೇಲೆ ಕಪ್ಪು ಶಾಯಿಯನ್ನು ಎಸೆದು ಅಲ್ಲಿಂದ ಪರಾರಾಯಾಗಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆಯ ಬಗ್ಗೆ ವಿವರಣೆ ನೀಡಿರುವ ಯೋಗೇಶ್, ''ಲಂಕೇಶ್ ಕುರಿತ ಕಾರ್ಯಕ್ರಮ ನಿಮಿತ್ತ ಆಯೋಜಿಸಲಾಗಿದ್ದ ಪುಸ್ತಕ ಮಾರಾಟ ಮಳಿಗೆಗೆ ಹತ್ತಿರದಲ್ಲೇ ಇದ್ದ ಹೋಟೆಲೊಂದರಲ್ಲಿ ನಾನು ಸ್ನೇಹಿತರೊಂದಿಗೆ ಚಹಾ ಸೇವಿಸುತ್ತಿದ್ದಾಗ ನನ್ನ ಮೇಲೆ ಕಪ್ಪು ಶಾಯಿ ತೂರಲಾಗಿದೆ. ಶಾಯಿ ತೂರಿದವರು, ಹಿಂದೂಪರ ಘೋಷಣೆಗಳನ್ನು ಕೂಗುತ್ತಾ, ಹಿಂದೂ ದೇವರುಗಳನ್ನು ಅವಹೇಳನ ಮಾಡುವಂಥ ಲೇಖನಗಳನ್ನು ಬರೆದರೆ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಹೋಗಿದ್ದಾರೆ'' ಎಂದು ಹೇಳಿದರು.

Writer Yogesh Master attacked in Davanagere

ಅವರು ಬರೆದಿರುವ ದುಂಡಿ ಎಂಬ ಕೃತಿ ಸಾಕಷ್ಟು ವಿವಾದಕ್ಕೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Progressive writer Yogesh Master was on 12th March, 2017, attacked by unidentified persons who smeared his face with black oil on the sidelines of a fuction in Davanagere.
Please Wait while comments are loading...