• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕನಕದಾಸರು ಕರ್ನಾಟಕದ ರಾಜ್ಯದ ಅಶ್ವಿನಿ ದೇವತೆ: ದಾವಣಗೆರೆ ಮೇಯರ್

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಡಿಸೆಂಬರ್ 3: ಕನಕದಾಸರನ್ನು ಕರ್ನಾಟಕ ರಾಜ್ಯದ ಅಶ್ವಿನಿ ದೇವತೆ ಎಂದು ಕರೆಯಲಾಗುತ್ತಿತ್ತು. ಈಗಲೂ ಅವರನ್ನು ದೈವ ಸ್ವರೂಪವಾಗಿ ಪೂಜಿಸುತ್ತಿದ್ದೇವೆ ಎಂದು ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್ ಹೇಳಿದರು.

ಕನಕದಾಸರು 16ನೇ ಶತಮಾನದಲ್ಲಿ ಕೀರ್ತನೆ ಮತ್ತು ಸಾಹಿತ್ಯದ ಮೂಲಕ ಜಾತಿ, ಕುಲದ ವ್ಯವಸ್ಥೆಯ ವಿರುದ್ಧ ದನಿ ಎತ್ತುವ ಮೂಲಕ, ಜಾತಿ ವ್ಯವಸ್ಥೆ ಬಿಟ್ಟು ಬದುಕಬೇಕೆಂದು ಅರಿವು ಮೂಡಿಸಿದ್ದರು. ಹೀಗಾಗಿ ಕನಕದಾಸರು ಸೇರಿದಂತೆ ಇತರೆ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಎಲ್ಲರೂ ಒಗ್ಗಟ್ಟಿನಿಂದ ಬಾಳಬೇಕೆಂದು ಮೇಯರ್ ಕರೆ ನೀಡಿದರು.

ದೆಹಲಿಯಲ್ಲಿನ ಹೋರಾಟ ಬೆಂಬಲಿಸಿ ದಾವಣಗೆರೆಯಲ್ಲಿ ರೈತರ ಐಕ್ಯತಾ ದಿನಾಚರಣೆ

ದಾವಣಗೆರೆ ನಗರದ ಶ್ರೀಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿಂದು ದಾಸಶ್ರೇಷ್ಠ ಕನಕದಾಸರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಿಲ್ಲಾ ಹೋರಾಟ ಸಮಿತಿಯಿಂದ ಏರ್ಪಡಿಸಿದ್ದ ಕನಕದಾಸರ 533ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಶಾಸಕ ಕೆ.ಮಲ್ಲಪ್ಪನವರು ಸಮಾಜ ಕಟ್ಟುವುದರ ಜೊತೆಗೆ ಯಾವುದೇ ಜಾತಿ, ಜನಾಂಗದವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಕಷ್ಟದ ದಿನಗಳಲ್ಲಿ ನನ್ನನ್ನು ಸಹ ಕೈಹಿಡಿದು ಬೆಳೆಸುವ ಕೆಲಸ ಮಾಡಿದ್ದಾರೆ. ಇವರು ಮಾಡಿದ ಕೆಲಸವನ್ನು ನಾವು ಸದಾ ಸ್ಮರಿಸಬೇಕೆಂದು ಹೇಳಿದರು.

ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಹಾಲುಮತ ಎಂದರೆ ಹಾಲಿನಂತಹ ಮನಸ್ಸು ಉಳ್ಳವರಾಗಿದ್ದಾರೆ. ಕನಕದಾಸರು ಸಹ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಸಮಾಜದ ಏಳಿಗೆಗೆ ಪ್ರಯತ್ನಿಸಿದವರಾಗಿದ್ದಾರೆ. ಕೇವಲ ಜಯಂತಿಗೆ ಅಷ್ಟೇ ಅವರನ್ನು ಸ್ಮರಿಸದೇ ಅವರ ಆದರ್ಶವನ್ನು ನಾವು ಜೀವನದಲ್ಲಿ ಪಾಲಿಸಿದಾಗ ಇಂತಹ ಮಹನೀಯರಿಗೆ ಗೌರವ ನೀಡಿದಂತಾಗುವುದಲ್ಲದೆ, ನಾವು ಸಹ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯವಾಗಲಿದೆ ಎಂದರು.

ದೂಡಾ ಕಚೇರಿಯ ಎದುರಿನ ರೈಲ್ವೆ ಮೇಲ್ಸೇತುವೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಹೆಸರಿಡಲು ಈಗಾಗಲೇ ನಾವು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಮಾಡಿದ್ದು, ಪಾಲಿಕೆಯ ಮಹಾಪೌರರು ಸಮ್ಮತಿ ನೀಡಿದ್ದು, ಅಧಿಕೃತ ಆದೇಶ ಹೊರಬಿದ್ದ ತಕ್ಷಣವೇ ಈ ಮೇಲ್ಸೇತುವೆ ಬಳಿ ರಾಯಣ್ಣರ ಹೆಸರಿನಲ್ಲಿ ಕಮಾನು ನಿರ್ಮಿಸಲು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

   ಹೊಸ ವರ್ಷದ ಆಸೆಗೆ ಬ್ರೇಕ್ ಹಾಕಿದ್ದು ಯಾರು ಗೊತ್ತಾ?? | Oneindia Kannada

   ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಸದಸ್ಯರಾದ ಜೆ.ಡಿ.ಪ್ರಕಾಶ್, ಆಶಾ ಉಮೇಶ್, ಶ್ವೇತಾ, ಸುಧಾ ಮಂಜುನಾಥ್, ಗೀತಾ ದಿಳ್ಯಪ್ಪ, ಹೆಚ್.ಸಿ.ಜಯಮ್ಮ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ಅಣಬೇರು ಶಿವಮೂರ್ತಿ, ಯೋಧ ಎಚ್.ಆರ್.ಪರಶುರಾಮ್, ಕರವೇ ಜಿಲ್ಲಾಧ್ಯಕ್ಷ ಜಮ್ಮನಹಳ್ಳಿ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಹೋರಾಟ ಸಮಿತಿ ಅಧ್ಯಕ್ಷ ಪಿ.ಜೆ.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಪೊಲೀಸ್ ಅಧಿಕಾರಿ ದೇವೇಂದ್ರಪ್ಪ ಕುಣೆಬೆಳೆಕೆರೆ, ಗೌಡ್ರಚನ್ನಬಸಪ್ಪ, ವೆಂಕಟೇಶ್ ಮಾಯಕೊಂಡ, ಹೇಮಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

   English summary
   B.G Ajay kumar, The mayor of Davanagere spoke on the occasion of the inauguration of the 533th Jayanti of the Kanakadasa.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X