ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಳಿಕಾ ದೇವಿಗೆ ಅಪಮಾನ: 40ಕ್ಕೂ ಹೆಚ್ಚು ಸ್ವಾಮೀಜಿಗಳ ಆಕ್ರೋಶ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜುಲೈ 11: ವಿಶ್ವಕರ್ಮ ಸಮಾಜದ ಆರಾಧ್ಯ ದೈವ ಕಾಳಿಕಾದೇವಿಗೆ ಅಪಚಾರ ಮಾಡಲಾಗಿದೆ. ಈ ಕೃತ್ಯದಿಂದ ಜಗತ್ತಿನಾದ್ಯಂತ ಕಾಳಿಕಾದೇವಿ ಆರಾಧಕರಿಗೆ ನೋವಾಗಿದೆ. ಈ ನಿಟ್ಟಿನಲ್ಲಿ ಇಂದು ಕಾಳಿಕಾದೇವಿ ವಿಕೃತ ರೂಪ ನೀಡಿದವರಿಗೆ ಧಿಕ್ಕಾರ ಹಾಕುತ್ತೇವೆ ಎಂದು ಸ್ವಾಮೀಜಿ ಹೇಳಿದರು.

ವಿಶ್ವಕರ್ಮ ಮಠಾಧೀಶರಷ್ಟೇ ಅಲ್ಲ ಸನಾತನ ಧರ್ಮದ ಮಠಾಧಿಪತಿಗಳು ಹಾಗೂ ಗುರುಹಿರಿಯರು ಖಂಡಿಸುತ್ತೇವೆ. ಮುಂದಿನ ಹೋರಾಟದ ಬಗ್ಗೆ ಯೋಜನೆ ರೂಪಿಸಿದ್ದೇವೆ ಎಂದು ಹಾಸನ ಜಿಲ್ಲೆ ಅರೆಮಾದನಹಳ್ಳಿ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ ತಿಳಿಸಿದರು.

ವಿಶ್ವ ಕರ್ಮ ಸಮಾಜದ ಸಮಾವೇಶದ ಪ್ರಯುಕ್ತ ಸುಮಾರು 40ಕ್ಕೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳು ದಾವಣಗೆರೆ ಜಯದೇವ ವೃತ್ತದಲ್ಲಿ ಏರ್ಪಡಿಸಿದ್ದ ಪಾದಯಾತ್ರೆಯ ಉದ್ಘಾಟನೆ ವೇಳೆ ಅವರು ಮಾತನಾಡಿದರು.

ಕಾಳಿ ಬಾಯಲ್ಲಿ ಸಿಗರೇಟು: ನಿರ್ಮಾಪಕಿ ಲೀನಾ ಮಣಿಮೇಕಲೈಗೆ ಕೋರ್ಟ್ ಸಮನ್ಸ್!ಕಾಳಿ ಬಾಯಲ್ಲಿ ಸಿಗರೇಟು: ನಿರ್ಮಾಪಕಿ ಲೀನಾ ಮಣಿಮೇಕಲೈಗೆ ಕೋರ್ಟ್ ಸಮನ್ಸ್!

Vishwakarma Swamiji

ಕಾಳಿಕಾ ಮಾತೆಗೆ ಅವಮಾನ ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ದೇಶದ ಸನಾನತನ ಪರಂಪರೆಯಲ್ಲಿ ಆದಿಶಕ್ತಿಯಾದ ಕಾಳಿಕಾದೇವಿಗೆ ಹಿರಿದಾದ ಮಹತ್ವವಿದೆ. ಗುರು ಹಿರಿಯರು, ಋಷಿಮುನಿಗಳು ಸಾಧು ಸಂತರು ದೇವಿಗೆ ಅಪಾರ ಮಹತ್ವ ನೀಡಿದ್ದಾರೆ. ಅಂತಹ ದೇವಿಯನ್ನು ಇಂದು ಪ್ರತ್ಯೇಕವಾಗಿ ವಿಕೃತ ರೂಪದಲ್ಲಿ ಪ್ರದರ್ಶನ ನೀಡಿರುವುದು ಖಂಡನೀಯ ಎಂದರು.

ಕಾಳಿ ಸಿಗರೇಟ್ ವಿವಾದ: ನಿರ್ದೇಶಕಿಯ ಟ್ವೀಟ್ ಹಿಂಪಡೆದ ಟ್ವಿಟ್ಟರ್ಕಾಳಿ ಸಿಗರೇಟ್ ವಿವಾದ: ನಿರ್ದೇಶಕಿಯ ಟ್ವೀಟ್ ಹಿಂಪಡೆದ ಟ್ವಿಟ್ಟರ್

ದಾವಣಗೆರೆಯಲ್ಲಿ ನಡೆಯುವ ಸಮಾವೇಶದಲ್ಲಿ ವಿಶ್ವಕರ್ಮ ಸಮಾಜದ ಮಠಾಧಿಪತಿಗಳ ಒಕ್ಕೂಟದಿಂದ ಇದನ್ನು ಖಂಡಿಸಿ, ಮುಂದಿನ ನಿರ್ಣಯ ಕೈಗೊಳ್ಳಲಾಗುವುದು. ಹಿಂದೂ ದೇವರಿಗೆ ಅಪಚಾರ ಮಾಡದರೆ ಸಹಿಸಲಾಗದು. ಕಾಳಿಕಾ ದೇವಿಗೆ ಅಪಮಾನ ಮಾಡಿದವರು ಈ ಕೂಡಲೇ ಕ್ಷಮಾಪಣೆ ಕೇಳಬೇಕು.‌ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಮ್ಮ ಸಮಾಜದ ಎಲ್ಲಾ ಮಠಾಧೀಶರು ಒಟ್ಟಾಗಿದ್ದೇವೆ. ಪ್ರತ್ಯೇಕ ಮಠದ ಅವಶ್ಯಕತೆ ಇಲ್ಲ. ಪರಂಪರೆಯಿಂದ ಬಂದ ಮಠ ನಮ್ಮದು. ಆದ್ದರಿಂದ ಪ್ರತ್ಯೇಕತೆಯ ಪ್ರಶ್ನೆಯೇ ಇಲ್ಲ ಎಂದರು.

swamiji

ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುಪತ್ತಾರ್ ಮಾತನಾಡಿ ದಾವಣಗೆರೆಯ ಸಮಾವೇಶದಲ್ಲಿ ಸುಮಾರು 67 ಮಠಾಧೀಶರು ಸೇರಿದ್ದೇವೆ. ಸಾಧುಸಂತರ ಸಮಾವೇಶ ಹಮ್ಮಿಕೊಂಡಿದ್ದೇವೆ. ಜಗತ್ತಿನಲ್ಲೇ ಕಾಳಿಕಾದೇವಿ ಆರಾಧಕರಿದ್ದಾರೆ. ಸಾಮಾಜಿಕ‌ ಜಾಲತಾಣದಲ್ಲಿ ಕಾಳಿಕಾದೇವಿಗೆ ಅಪಮಾನ ಮಾಡಲಾಗಿದೆ. ಇದು ಖಂಡನೀಯ ಎಂದರು.

ಕೊರೊನಾ ಹೋಗಿಸಲು ಕಾಳಿಕಾದೇವಿಯ ಆರಾಧನೆ ಮಾಡಿದ ಸಮಾಜ ನಮ್ಮದು. ಅಂತಹ‌ ಮಾತೆಗೆ ಅಪಮಾನ ಮಾಡಿರುವುದು ಸರಿಯಲ್ಲ. ಹಿಂದೂ ದೇವಿಗಳಿಗೆ ಅಪಮಾನ ಮಾಡುವುದು ಖಂಡನೀಯ. ನಿರ್ದೇಶಕಿ ಲೀನಾ ಅವರ ಚಿತ್ರ ತಡೆಯುವಂತೆ ಸಂಬಂಧಪಟ್ಟವರಿಗೆ ಒತ್ತಾಯಿಸಿದ್ದೇವೆ.

Recommended Video

Basavaraj Bommai ಇಂದಿನಿಂದ ಎರೆಡು ದಿನ ಕರಾವಳಿ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ | *Karnataka | OneIndia

ಈ ಬಗ್ಗೆ ದೇಶಾದ್ಯಂತ ಸಮಾಜ ಬಾಂಧವರು ಕಾರ್ಯಪ್ರವೃತ್ತರಾಗಿದ್ದಾರೆ. ಕ್ರಮಕ್ಕೆ ಒತ್ತಾಯಿಸಿ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಬೆಂಗಳೂರಿನಲ್ಲಿಯೂ ಹೋರಾಟ ಮಾಡಲಾಗುವುದು ಎಂದರು.

English summary
Davanagere: Vishwakarma Swamiji upset against director Leena for insult to goddess Kalika Devi, they were urge to punishment those who insulted the goddess.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X