ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿವಿ ಧಾರಾವಾಹಿ ನೋಡಿ ಬೆಂಕಿ ಹಚ್ಚಿಕೊಂಡ ದಾವಣಗೆರೆ ಬಾಲಕಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 29 : ಮಕ್ಕಳ ಮನಸ್ಸಿನ ಮೇಲೆ ಪ್ರತಿಯೊಂದು ವಿಚಾರಗಳು ಕೂಡ ಬಹುಬೇಗ ಪ್ರಭಾವ ಬೀರುತ್ತದೆ. ಮಕ್ಕಳ ಜತೆಗೆ ಟಿವಿ ವೀಕ್ಷಿಸುವಾಗ ಪೋಷಕರು ಎಚ್ಚರವಾಗಿರಬೇಕು.
ಖಾಸಗಿ ವಾಹನಿಯೊಂದರಲ್ಲಿ ಪ್ರಸಾರವಾದ ಧಾರಾವಾಹಿ ನೋಡಿ ಬೆಂಕಿ ಹಚ್ಚಿಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣೆಗೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

'ನಂದಿನಿ' ಧಾರಾವಾಹಿ ನೋಡಿ ಪ್ರಾಣ ಕಳೆದುಕೊಂಡ ಪುಟ್ಟ ಬಾಲಕಿ

ದಾವಣಗೆರೆ ನಗರದ ನಿವಾಸಿಗಳಾದ ಚೈತ್ರಾ-ಮಂಜುನಾಥ್ ಪುತ್ರಿ, ಪ್ರಾರ್ಥನಾ (7) ಸೇಂಟ್ ಮೇರಿಸ್ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಳು. ಪ್ರಾರ್ಥನಾ ಪ್ರತಿದಿನ ಮಧ್ಯಾಹ್ನ ಮರುಪ್ರಸಾರ ಆಗುತ್ತಿದ್ದ ನಂದಿನಿ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದಳು. ನವೆಂಬರ್ 11 ಶನಿವಾರ ಮನೆಗೆ ಬಂದವಳೇ ಧಾರಾವಾಹಿ ವೀಕ್ಷಿಸಿದ್ದಾಳೆ. ಈ ಧಾರಾವಾಹಿ ನಾಯಕಿ ಪೇಪರ್ ಹಚ್ಚಿಕೊಂಡು ಕುಣಿಯುವುದನ್ನು ನೋಡಿದ್ದಾಳೆ. ನಾಯಕಿ ಕುಣಿಯುವುದನ್ನು ನೋಡಿ ಪ್ರಾರ್ಥನಾ ಬೆಂಕಿ ಹಂಚಿಕೊಂಡಿದ್ದಾಳೆ.

TV serial craze kills 7 year old girl

ನವೆಂಬರ್ 11ರಂದು ಈ ಘಟನೆ ನಡೆದಿದ್ದು, ಪ್ರಾರ್ಥನಾ ಬೆಂಕಿಯಿಂದ ಸುಡುತ್ತಿದ್ದನ್ನು, ತಂಗಿ ನೋಡಿ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾಳೆ. ತಕ್ಷಣ ಪ್ರಾರ್ಥನಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ನ ಮಗಳು ಧಾರವಾಹಿ ನೋಡಿ, ಮಗಳು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದ ತಕ್ಷಣ, ಮಕ್ಕಳ ಮನರಂಜನೆಗೆಂದು ಇರಿಸಿದ್ದ ಟಿವಿಯನ್ನೇ, ಒಡೆದು ಹಾಕಿದ್ದಾಗಿ ಸ್ವತಃ ತಾಯಿ ಚೈತ್ರಾ ಹೇಳಿದ್ದಾರೆ.

ಇನ್ನೂ ಕಡು ಬಡತನದಿಂದ ಜೀವನ ನಡೆಸುತ್ತಿದ್ದ ಕುಟುಂಬ ಚೈತ್ರಾ-ಮಂಜುನಾಥ್ ಕುಟುಂಬದ್ದು. ನಾಲ್ಕೈದು ಮನೆಗಳ ಮನೆ ಕೆಲಸ ಮಾಡಿ, ಚೈತ್ರಾ ಮಕ್ಕಳನ್ನು ಓದಿಸುತ್ತಿದ್ದರು. ಪ್ರಾರ್ಥನಾ ಪೋಷಕರು ಕೆಲಸಕ್ಕೆ ಹೋಗುತ್ತಿದ್ದು, ಅಜ್ಜಿ ಪ್ರಾರ್ಥನಾಳನ್ನು ಪ್ರತಿದಿನ ಶಾಲೆಯಿಂದ ಮನೆಗೆ ಕರೆತರುತ್ತಿದ್ದರು. ಆಕೆಯನ್ನು ಮನೆಗೆ ತಂದು ಬಿಟ್ಟು ಟಿವಿ ಆನ್ ಮಾಡಿ ಹೊರಗಡೆ ಹೋಗಿದ್ದಾರೆ. ಈ ವೇಳೆ ಪ್ರಾರ್ಥನಾ ಬೆಂಕಿ ಹಚ್ಚಿಕೊಂಡಿದ್ದಾಳೆ.

ಈ ಘಟನೆಯಿಂದ, ತಂದೆ-ತಾಯಿಗಳಿಗೆ ತೀವ್ರ ತರದ ನೋವಾಗಿದ್ದು, ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ. ಹಾಗಾಗಿ ಪೋಷಕರು ಮಕ್ಕಳೊಂದಿಗೆ ಟಿವಿ ನೋಡುವಾಗ ಮಕ್ಕಳಿಗೆ ಅನುಕೂಲವಾಗುವಂತಹ ಅಥವಾ ಮನರಂಜನೆ ನೀಡುವಂತಹ ಚಾನೆಲ್ ಗಳನ್ನು ಮಾತ್ರ ನೋಡಿ, ಇಂತಹ ದಾರಾವಾಹಿಗಳಿಂದ ಮಕ್ಕಳನ್ನು ದೂರವಿಡಿ.ರಿಮೋಟ್ ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಿ.

English summary
A seven year old girl Prarthana, blazed herself influenced by Kannada serial in Davanagere district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X