ಬೇಸಿಗೆ 2017: ದಾವಣಗೆರೆ 'ಜಲ ಸಿರಿ' ಕಾಣದ ಶ್ರೀಮಂತ ಜಿಲ್ಲೆ

Posted By:
Subscribe to Oneindia Kannada

ರಾಜ್ಯದ ಹೃದಯಭಾಗದಲ್ಲಿರುವ ದಾವಣಗೆರೆಗೆ 'ಕಾಟನ್ ಸಿಟಿ', 'ವಿದ್ಯಾನಗರಿ', ಮ್ಯಾಂಚೆಸ್ಟರ್ ಆಫ್ ಈಸ್ಟ್ ಎಂಬ ಹೆಗ್ಗಳಿಕೆ ಇದೆ. ಆರ್ಥಿಕ, ಸಾಮಾಜಿಕ, ನೈಸರ್ಗಿಕ ವೈವಿಧ್ಯತೆಯಿಂದ ಕೂಡಿ ಶ್ರೀಮಂತವಾಗಿರುವ ದಾವಣಗೆರೆ ಜಿಲ್ಲೆಗೆ ಬರ ಈ ಬೇಸಿಗೆಯಲ್ಲೂ ಕಾಡುತ್ತಿದೆ.

ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲ್ ಅವರು 1997ರಲ್ಲಿ ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಯಿಂದ ಕೆಲವು ತಾಲೂಕುಗಳನ್ನು ಸೇರಿಸಿಕೊಂಡು ದಾವಣಗೆರೆ ಜಿಲ್ಲೆಯಾಗಿ ಪರಿವರ್ತಿಸಿದ್ದು ನೆನಪಿರಬಹುದು.[ಬರ ಪರಿಸ್ಥಿತಿ ನಿರ್ಧಾರ ಹೇಗೆ?]

ನೀರಿನ ಆಸರೆ: ದಾವಣಗೆರೆ ಜಿಲ್ಲೆಯ ಜಗಳೂರು ಮತ್ತು ಹರಪನಹಳ್ಳಿ ತಾಲೂಕುಗಳನ್ನು ಹೊರತು ಪಡಿಸಿ ಜಿಲ್ಲೆಯ ಉಳಿದ ತಾಲೂಕುಗಳಿಗೆ ಕುಡಿಯಲು ಮತ್ತು ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುತ್ತಿರುವುದು ತುಂಗ-ಭದ್ರಾ ನದಿ.[ದಾವಣಗೆರೆ ನಗರದಲ್ಲಿ ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆ!]

ಹರಿಹರ, ಹೊನ್ನಾಳಿ, ಚನ್ನಗಿರಿ, ದಾವಣಗೆರೆ ಉತ್ತರ ಮತ್ತು ದಕ್ಷಿಣ ತಾಲೂಕುಗಳಲ್ಲಿ ಚಾನೆಲ್ ಮೂಲಕ ಹರಿದು ಬರುವ ಭದ್ರಾ ನದಿ ನೀರು ಉಪಯೋಗಿಸಿಕೊಂಡು ವ್ಯವಸಾಯ ಮಾಡಲಾಗುತ್ತದೆ. ಚಿಕ್ಕ ಹಗರಿ ನದಿ, ಶಾಂತಿಸಾಗರದ ಹರಿದ್ರಾ ಕೂಡಾ ನೀರಿನ ಸೆಲೆಯಾಗಿದೆ. ಬರ, ಬೇಸಿಗೆ, ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಜಿಲ್ಲಾಡಳಿತ, ನಗರ ಪಾಲಿಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ಮುಂದೆ ಓದಿ...

ದಾವಣಗೆರೆ ಜಲ ಸಿರಿ ಯೋಜನೆ

ದಾವಣಗೆರೆ ಜಲ ಸಿರಿ ಯೋಜನೆ

ದಾವಣಗೆರೆ ನಗರಕ್ಕೆ 24 x 7 ನೀರು ಒದಗಿಸುವ ಮಹತ್ವಾಕಾಂಕ್ಷೆಯ ಜಲ ಸಿರಿ ಯೋಜನೆಯ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ. ಈ ಯೋಜನೆಗೆ ಒಟ್ಟು 428 ಕೋಟಿ ರೂ. ವೆಚ್ಚವಾಗಲಿದೆ. ತುಂಗಭದ್ರಾ ನದಿಯಿಂದ ಬಾತಿ ಗುಡ್ಡದ ಹತ್ತಿರವಿರುವ ನೀರು ಶುದ್ಧೀಕರಣ ಘಟಕಕ್ಕೆ ನೀರು ಸರಬರಾಜು ಮಾಡಲು ಯೋಜನೆ ಸಿದ್ದಪಡಿಸಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ.

ನಗರಕ್ಕೆ 24X 7 ಮಾದರಿಯಲ್ಲಿ ನಿರಂತರವಾಗಿ ನೀರು ಸರಬರಾಜು ಮಾಡಲು ವಿವಿಧ ಬಡಾವಣೆಯ 19 ಸ್ಥಳಗಳಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ, ಪೈಪ್ಲೈನ್ ಅಳವಡಿಸಲು ಅಂದಾಜು ಪಟ್ಟಿ ತಯಾರಿಸಿ, ಶೀಘ್ರ ಟೆಂಡರ್ ಕರೆಯುವಂತೆ ಸೂಚನೆ ನೀಡಲಾಗಿದೆ.[ದಾವಣಗೆರೆ ಜಿಲ್ಲೆ ವಿಧಾನಸಭಾ ಕ್ಷೇತ್ರಗಳ ಪರಿಚಯ]

ತುಂಗಭದ್ರಾ ನದಿಯಿಂದ ನೀರು

ತುಂಗಭದ್ರಾ ನದಿಯಿಂದ ನೀರು

ತುಂಗಭದ್ರಾ ನದಿಯಿಂದ ನೀರನ್ನು ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಮೊದಲ ಹಂತವಾಗಿ 25.06 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ವಾಣಿಜ್ಯ ಪ್ರದೇಶವಾದ ಮಂಡಿಪೇಟೆ, ಎಂ.ಜಿ.ರಸ್ತೆ, ಚೌಕೀಪೇಟೆ, ಚಾಮರಾಜಪೇಟೆ ರಸ್ತೆಗಳಲ್ಲಿ ಒಳಚರಂಡಿ, ಮಳೆ ನೀರು ಚರಂಡಿ, ಕುಡಿಯುವ ನೀರು ಸರಬರಾಜು ವ್ಯವಸ್ಥೆ, ಅಂಡರ್ ಗ್ರೌಂಡ್ ಕೇಬಲ್ ಒಳಗೊಂಡ ಕಾಂಕ್ರಿಟ್ ರಸ್ತೆ ಕಾಮಗಾರಿಗಳಿಗೆ ಟೆಂಡರ್ ಕರೆಯಲು ಸೂಚಿಸಲಾಗಿದೆ

5 ಕೆರೆಗಳಿಗೆ ಕಾಯಕಲ್ಪ

5 ಕೆರೆಗಳಿಗೆ ಕಾಯಕಲ್ಪ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬೆಳವನೂರು, ತುರ್ಚಘಟ್ಟ ಸೇರಿದಂತೆ, 5 ಕೆರೆಗಳಿಗೆ ಕಾಯಕಲ್ಪ ನೀಡುವ ಬಗ್ಗೆ ಚಿಂತಿಸಲಾಗಿದ್ದು, ಬೆಳವನೂರು ಕೆರೆಯ ಹೂಳನ್ನು ತೆಗೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ತಿಳಿಸಿದ್ದಾರೆ.

ಕೆರೆ ಸಂಜೀವಿನಿ ಯೋಜನೆಯಡಿಯಲ್ಲಿ ಬೆಳವನೂರು ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಕೆರೆಗಳಿಗೆ ಕಾಯಕಲ್ಪ ನೀಡುವುದರಿಂದ ಅಂತರ್ಜಲ ಹೆಚ್ಚಾಗಿ ರೈತರಿಗೆ ಅನು ಕೂಲವಾಗಲಿದೆ

ತಾಲ್ಲೂಕುಗಳ 60 ಗ್ರಾಮ

ತಾಲ್ಲೂಕುಗಳ 60 ಗ್ರಾಮ

ದಾವಣಗೆರೆ ಜಿಲ್ಲೆಯ 6 ತಾಲ್ಲೂಕುಗಳ 60 ಗ್ರಾಮಗಳಲ್ಲಿ 40 ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರು ಒದಗಿಸಲು ಖಾಸಗಿ ಕೊಳವೆ ಬಾವಿ ಪ್ರತಿ ತಿಂಗಳಿಗೆ 18 ರಿಂದ 20 ಸಾವಿರ ರೂ.ಗಳ ಬಾಡಿಗೆ ಆಧಾರದ ಮೇಲೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಉಳಿದ 20 ಗ್ರಾಮಗಳಲ್ಲಿ ಕುಡಿಯುವ ನೀರು ಒದಗಿಸಲು ಟ್ಯಾಂಕರ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರತಿ ಟ್ಯಾಂಕರ್ ಗೆ 800 ರೂ. ನಿಗದಿ ಪಡಿಸಲಾಗಿದೆ.ದಾವಣಗೆರೆ ನಗರದಲ್ಲೂ ಸಹ 1.35 ಕೋಟಿ ರೂ. ವೆಚ್ಚದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ, ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮೇವು ಬ್ಯಾಂಕ್ ಸ್ಥಾಪನೆ

ಮೇವು ಬ್ಯಾಂಕ್ ಸ್ಥಾಪನೆ

ಜಾನುವಾರುಗಳಿಗೆ ಮೇವು ಒದಗಿಸುವ ಉದ್ದೇಶದಿಂದ ದಾವಣಗೆರೆ ಜಿಲ್ಲಾ ಕೇಂದ್ರ ಸೇರಿದಂತೆ ಹರಪನಹಳ್ಳಿ, ಹರಿಹರ ಎಪಿಎಂಸಿಗಳಲ್ಲಿ ಮತ್ತು ಜಗಳೂರು ತಾಲ್ಲೂಕಿನ ಮಡ್ರಳ್ಳಿಯಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲಾಗಿದ್ದು, ಇದುವರೆಗೂ 80 ಟನ್ ಮೇವು ಸಂಗ್ರಹಿಸಲಾಗಿದೆ. ಮೇವು ಬೆಳೆಯಲು ಈಗಾಗಲೇ 3500 ಮೇವಿನ ಬೀಜದ ಪಾಕೆಟ್ ಗಳನ್ನು ವಿತರಿಸಲಾಗಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Summer 2017 : Drought situation in Davanagere district is worse. Here is an explainer article on the current situation of the district.
Please Wait while comments are loading...