• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆಯಲ್ಲಿ ಕಾಲೇಜಿಗೆ ಬರಲು ವಿದ್ಯಾರ್ಥಿಗಳ ಹಿಂದೇಟು; ಕಾರಣವೇನು?

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ನವೆಂಬರ್ 24. ನ.17ರಿಂದಲೇ ರಾಜ್ಯಾದ್ಯಂತ ಪದವಿ ಕಾಲೇಜುಗಳನ್ನು ಆರಂಭಿಸಲಾಗಿದೆ. ಆದರೆ ಕಾಲೇಜುಗಳಲ್ಲಿ ಮಾತ್ರ ವಿದ್ಯಾರ್ಥಿಗಳು ವಿರಳವಾಗಿದ್ದಾರೆ.

ದಾವಣಗೆರೆಯಲ್ಲೂ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಕಾಲೇಜಿಗೆ ಪ್ರವೇಶ ಪಡೆಯಲು ಕೋವಿಡ್ ವರದಿ ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗುತ್ತಿಲ್ಲ. ವಿದ್ಯಾರ್ಥಿಗಳೇ ಕಾಲೇಜಿಗೆ ಬಾರದ ಹಿನ್ನೆಲೆ ಕೆಲ ಖಾಸಗಿ ಕಾಲೇಜಿನ ಆಡಳಿತ ಮಂಡಳಿ ಜಿಲ್ಲಾಡಳಿತದ ಸಹಾಯ ಪಡೆದು ತಮ್ಮ ತಮ್ಮ ಕಾಲೇಜುಗಳಲ್ಲಿ ಪರೀಕ್ಷೆ ಆರಂಭಿಸಿವೆ. ಮುಂದೆ ಓದಿ...

ಉಡುಪಿಯಲ್ಲಿ ಪದವಿ ತರಗತಿಗೆ ದಾಖಲಾತಿ 9072; ಹಾಜರಾತಿ 300

 9 ವಿದ್ಯಾರ್ಥಿಗಳಿಗೆ, 3 ಉಪನ್ಯಾಸಕರಿಗೆ ಸೋಂಕು

9 ವಿದ್ಯಾರ್ಥಿಗಳಿಗೆ, 3 ಉಪನ್ಯಾಸಕರಿಗೆ ಸೋಂಕು

ವಿದ್ಯಾರ್ಥಿಗಳ ವಾಟ್ಸಪ್ ಗ್ರೂಪ್ ಮಾಡಿ, ಮಾಹಿತಿ ಹಾಕಿ ಕಾಲೇಜಿಗೆ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಲಾಗುತ್ತಿದೆ. ಈವರೆಗೆ ಜಿಲ್ಲೆಯಲ್ಲಿ 6749 ವಿದ್ಯಾರ್ಥಿಗಳು, 2967 ಬೋಧಕರು ಹಾಗೂ 1963 ಬೋಧಕೇತರ ಸಿಬ್ಬಂದಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಇವರಲ್ಲಿ ಒಂಬತ್ತು ಜನ ವಿದ್ಯಾರ್ಥಿಗಳಿಗೆ ಮತ್ತು ಮೂರು ಜನ ಬೋಧಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

 ಆರು ಸಾವಿರ ವರದಿ ಬರುವುದು ಬಾಕಿ

ಆರು ಸಾವಿರ ವರದಿ ಬರುವುದು ಬಾಕಿ

ಈ ಪರೀಕ್ಷೆಗಳಲ್ಲಿ ಇನ್ನೂ ಆರು ಸಾವಿರ ವರದಿ ಬರುವುದು ಬಾಕಿ ಇದೆ. ಇನ್ನೊಂದೆಡೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಕೋವಿಡ್ ಪರೀಕ್ಷಾ ಕೇಂದ್ರದಲ್ಲಿ ನೂರಾರು ವಿದ್ಯಾರ್ಥಿಗಳು ಬೆಳಿಗ್ಗೆಯಿಂದ ಕಾದುಕೊಂಡು ನಿಲ್ಲುತ್ತಿದ್ದಾರೆ. ಮಂಗಳವಾರದಿಂದ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರರು ಎಂದು ಮೂರು ಗುಂಪುಗಳನ್ನಾಗಿ ಮಾಡಲಾಗಿದೆ. ಇದಕ್ಕಾಗಿಯೇ ಜಿಲ್ಲಾ ಸರ್ವೇಕ್ಷಣಾ ಇಲಾಖೆ ತಲಾ ಒಂದೊಂದು ತಂಡ ಮಾಡಿವೆ.

 ವರದಿ ಕೇಳಿದರೆ ಜಗಳ

ವರದಿ ಕೇಳಿದರೆ ಜಗಳ

ಇದೇ ವೇಳೆ ಕಾಲೇಜು ಪ್ರಾಧ್ಯಾಪಕರಿಗೆ ಕೊರೊನಾ ಪರೀಕ್ಷೆಯ ವರದಿ ಕೇಳಿದರೆ ಜಗಳಕ್ಕೆ ಬರುವುದು, ಪರೀಕ್ಷೆ ಮಾಡಿಸಿಕೊಳ್ಳದೇ ಕಾಲೇಜಿಗೆ ಬರುವಂತಹ ಸಂಗತಿಗಳೂ ಹೆಚ್ಚಾಗಿವೆ. ಈಚೆಗೆ ದಾವಣಗೆರೆ ಸರ್ಕಾರಿ ಪದವಿ ಕಾಲೇಜ್ ನಲ್ಲಿ ಪ್ರಾಧ್ಯಾಪಕರಿಗೆ ಕೋವಿಡ್ ಟೆಸ್ಟ್ ವರದಿ ಕೇಳಿದಕ್ಕೆ ಜಗಳಕ್ಕೆ ಬಂದ ವಿಡಿಯೋ ವೈರಲ್ ಆಗಿದೆ. ಜೊತೆಗೆ ವೈರಸ್ ಹರಡುವ ಭೀತಿಯೂ ವಿದ್ಯಾರ್ಥಿಗಳು ಕಾಲೇಜಿಗೆ ಬರುವುದಕ್ಕೆ ಹಿಂದೇಟು ಹಾಕಲು ಕಾರಣವಾಗಿದೆ.

  ಪಬ್ ಜಿ ಆಟಗಾರರಿಗೆ 6 ಕೋಟಿ ಬಹುಮಾನ!! | Oneindia Kannada
   ದಾವಣಗೆರೆಯಲ್ಲಿ ಪ್ರಸ್ತುತ ಕೊರೊನಾ ಪ್ರಕರಣಗಳು

  ದಾವಣಗೆರೆಯಲ್ಲಿ ಪ್ರಸ್ತುತ ಕೊರೊನಾ ಪ್ರಕರಣಗಳು

  ದಾವಣಗೆರೆ ಜಿಲ್ಲೆಯಲ್ಲಿ ನ.23ರ ವರದಿಯಂತೆ ಇದುವರೆಗೂ ಒಟ್ಟು 21442 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 20955 ಮಂದಿ ಗುಣಮುಖರಾಗಿದ್ದು, 224 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 263 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

  English summary
  Few students attending degree colleges in davanagere. Students not ready to undergo covid test,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X