ತೋರಣಗಟ್ಟೆ: ಮಳೆ ಬಂದ್ರೆ ಕೆಸರು ಗದ್ದೆ, ಚಳಿ ಹಾಗೂ ಬೇಸಿಗೆಯಲ್ಲಿ ಕೆಂಧೂಳಿನ ರಸ್ತೆ: ನಾಚಿಕೆಯಾಗ್ಬೇಕು ಜಗಳೂರು ಕ್ಷೇತ್ರದ MLAಗೆ
ಜಗಳೂರು ತಾಲ್ಲೂಕಿನ ಅತೀ ದೊಡ್ಡ ಹಾಗೂ ಶ್ರೀಮಂತ ಗ್ರಾಮಗಳಲ್ಲಿ ತೋರಣಗಟ್ಟೆ ಕೂಡ ಒಂದಾಗಿದೆ. ಆದರೂ, ಇಲ್ಲಿ ಮಲಭೂತಸೌಕರ್ಯಗಳ ಕೊರತೆಗಳು ಅಷ್ಟೇ ಪ್ರಮಾಣದಲ್ಲಿವೆ. ಪ್ರಮುಖವಾಗಿ ಪ್ರತಿದಿನ ವಿದ್ಯಾರ್ಥಿಗಳು ಶಾಲೆಗೆ ತೆರಳುವ ರಸ್ತೆ ಮಳೆಗಾಲದಲ್ಲಿ ಕೆಸರು ಗದ್ದೆ, ಚಳಿ ಹಾಗೂ ಬೇಸಿಗೆಯಲ್ಲಿ ಕೆಂದೂಳಿನಿಂದ ಕೂಡಿರುತ್ತದೆ. ಸುಮಾರು 10ಕ್ಕೂ ವರ್ಷಗಳಿಂದಲೂ ಇದೇ ಪರಿಸ್ಥಿತಿ ಇದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕ್ಯಾರೆ ಇತ್ತ ತಲೆ ಹಾಕುತ್ತಿಲ್ಲ ಎಂದು ವಿದ್ಯಾರ್ಥಿಗಳು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಶು ಆಸ್ಪತ್ರೆಯಿಂದ ಶಾಲೆ ಸುಮಾರು 900 ಮೀಟರ್ ಆಗುತ್ತದೆ. ಈಗಾಗಲೇ ಮಳೆಗಾಲದಲ್ಲಿ ರಸ್ತೆ ಕೆಸರುಗದ್ದೆಯಿಂದ ಕೂಡಿದ್ದು, ತುಂಬಾ ವಿದ್ಯಾರ್ಥಿಗಳು, ವೃದ್ಧರು ಬಿದ್ದು ಕಾಲು, ಕೈ ನೋವು ಮಾಡಿಕೊಂಡಿದ್ದಾರೆ. ಇದೀಗ ಚಳಿಗಾಲದಲ್ಲಿ ಈ ಮಣ್ಣಿನ ರಸ್ತೆ ಧೂಳಿನಿಂದ ಕೂಡಿರುವ ಹಿನ್ನೆಲೆ ಆರೋಗ್ಯ ಹದಗೆಡುತ್ತಿದೆ. ಕೆಲವು ದಿನಗಳು ಕಳೆದರೆ ಬೇಸಿಗೆ ಆರಂಭವಾಗಲಿದ್ದು, ಆಗ ಧೂಳು ಮತ್ತಷ್ಟು ಹೆಚ್ಚಾಗಲಿದೆ. ಈ ಬಗ್ಗೆ ತುಂಬಾ ಬಾರಿ ಗ್ರಾ.ಪಂ., ಎಂಎಲ್‌ಎ ಗನಮಕ್ಕೂ ತಂದಿದ್ದೇವೆ. ಆದರೂ ಯಾರೂ ಇತ್ತ ತಲೆ ಹಾಕುತ್ತಿಲ್ಲವೆಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ವಿದ್ಯಾರ್ಥಿಗಳು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಈ ರಸ್ತೆ ಮಳೆಗಾಲದಲ್ಲಿ ಕೆಸರು ಗದ್ದೆಯಿಂದ ಕೂಡಿದ್ದು, ಇದರಿಂದ ಪ್ರತಿದಿನ ಜಾರಿ ಬಿದ್ದು ಕೈ, ಕಾಲು ನೋವು ಮಾಡಿಕೊಂಡಿದ್ದೇವೆ. ಇದೀಗ ಚಳಿಗಾಲದಲ್ಲಿ ಧೂಳಿನ ಪ್ರಮಾಣ ಹೆಚ್ಚಾಗುತ್ತಿದ್ದು, ಆರೋಗ್ಯ ಹದಗೆಡುತ್ತಿದೆ. ಆದರೆ ಯಾವುದೇ ಪರ್ಯಾಯ ದಾರಿಯಿಲ್ಲದೆ ಪ್ರತಿದಿನ ಇದೇ ಕೆಂಧೂಳಿನ ರಸ್ತೆಯಲ್ಲಿ ಶಾಲೆಗೆ ಹೋಗಬೇಕಿದೆ ಎಂದು ಹೇಳಿದರು.
ಅಲ್ಲದೆ, ಇದೀಗ ಬೇಸಿಗೆಗೂ ಮುನ್ನವೇ ತಾಪಮಾನ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಈ ರಸ್ತೆಯ ಧೂಳಿನಿಂದ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸದೇ ಜಾಣಕುರುಡು ಎಂಬಂತೆ ಮೌನವಹಿಸಿಬಿಟ್ಟಿದ್ದಾರೆ. ನಮ್ಮ ಜಗಳೂರು ಕ್ಷೇತ್ರದ ಎಂಎಲ್‌ಎ ದೇವೇಂದ್ರಪ್ಪ ಅವರು ಕೂಡ ಇತ್ತ ಕಾಲಿಟ್ಟಿಲ್ಲ. ನಾಚಿಗೆಯಾಗಬೇಕು ಅವರಿಗೆ ಎಂದು ಕೆಂಡಕಾರುತ್ತಿದ್ದಾರೆ.
ಮುಂದುವರೆದು ಪ್ರತಿಕ್ರಿಯಿಸಿದ ಸ್ಥಳೀಯರು, ಇದು ಒಂದು ಎರಡು ವರ್ಷದ ಕಥೆಯಲ್ಲ. 10ಕ್ಕೂ ವರ್ಷಗಳ ಹಿಂದಿನಿಂದಲೂ ಇದೇ ಗೋಳಾಗಿದೆ. ಯಾವೊಬ್ಬ ಎಂಎಲ್‌ಎನೂ ಕೂಡ ಇತ್ತ ಗಮನಹರಿಸಿಲ್ಲ. 10 ವರ್ಷಗಳ ಹಿಂದೆ ಒಂದು ಬಾರಿ ಮಾತ್ರ ಕಾಟಚಾರಕ್ಕೆ ಡಾಂಬಾರ್ ಹಾಕಿಸಿದ್ದರು. ಅದು ಸಿಂಗಲ್ ಲೇಯರ್‌ನಲ್ಲಿ. ಅದು ಒಂದು ವರ್ಷವೂ ಸಹ ಇರದೇ ಮತ್ತೆ ಮಣ್ಣಿನ ರಸ್ತೆಯಾಗಿ ಮಾರ್ಪಾಡಾಯಿತು. ಈಗಲೂ ಅದೇ ಗುಂಡಿಬಿದ್ದ ರಸ್ತೆಯೇ ಇದ್ದು, ನಾವು ಕೂಡ ಯಾವುದೇ ಪರ್ಯಾಯ ದಾರಿಯಿಲ್ಲದೆ. ಇದರಲ್ಲಿಯೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾಡಿದ್ದಾರೆ.
ಬರೀ ಚುನಾವಣೆ ಬಂದಾಗ ನಮ್ಮ ಹತ್ತಿರ ಬಂದು ಕಾಲು, ಕೈ ಹಿಡಿದು ವೋಟ್ ಬೇಡೋದಲ್ಲ ಸ್ವಾಮಿ. ಗೆದ್ದಾಗ ಜನರ ಸಮಸ್ಯೆಯನ್ನೂ ಕೂಡ ಅಷ್ಟೇ ಅಚ್ಚುಕಟ್ಟಾಗಿ ಮಾಡಬೇಕು. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಗಮನಹರಿಸಿ ಡಾಂಬರೀಕರಣ ಇಲ್ಲವೇ ಸಿಮೆಂಟ್ ರಸ್ತೆಯನ್ನಾದರೂ ಮಾಡಿಸಿ ಎಂಎಲ್‌ಎ ಸಾಹೆಬ್ರೇ ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆಯಾಗಿ ಹೇಳೋದಾದ್ರೆ ಗ್ರಾಮದಲ್ಲಿ ಇದು ಪ್ರಮುಖ ರಸ್ತೆಯಾಗಿದೆ. ಅದರಲ್ಲೂ, ಶಾಲೆ ಹಾಗೂ ಮೆಲ್ಲೇಶ್ವರ ದೇವಸ್ಥಾನಕ್ಕೆ ತೆರಳಲು ಇದೊಂದೇ ಮಾರ್ಗ ಇರುವುದು. ಆದ್ದರಿಂದ ಆದಷ್ಟು ಬೇಗ ಈ ರಸ್ತೆ ದುರಸ್ತಿ ಮಾಡಿಸಿ ಎನ್ನುವುದು ಗ್ರಾಮಸ್ಥರ ಮನವಿಯಾಗಿದೆ.












Click it and Unblock the Notifications