• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆಯಲ್ಲಿ ಕೋವಿಡ್ ವಾರ್ಡ್‌ನಿಂದ ಪ್ರತಿಭಟನೆ

|

ದಾವಣಗೆರೆ, ಮೇ 8: ದಾವಣಗೆರೆಯ ಕೋವಿಡ್ ವಾರ್ಡ್‌ಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ನಿವಾಸಿ ವೈದ್ಯರು (ರೆಸಿಡೆಂಟ್‌ ಡಾಕ್ಟರ್ಸ್) ವಿದ್ಯಾರ್ಥಿ ಭತ್ಯೆ ಪರಿಷ್ಕರಣೆಗಾಗಿ ಪ್ರತಿಭಟನೆ ಮಾಡುವ ಮೂಲಕ ಆಗ್ರಹಿಸಿದ್ದಾರೆ.

ಕೋವಿಡ್ ವಾರ್ಡಗಳಲ್ಲಿ ನಿವಾಸಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುತ್ತಿದ್ದಾರೆ. ಈ ರೀತಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಅವರ ವಿನೂತನ ಪ್ರತಿಭಟನೆ ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಲ್ಲಿ ''ನಾವು ವೈದ್ಯರು... ನಿಮ್ಮ ಗುಲಾಮರಲ್ಲ..'' ಎಂಬ ಘೋಷಣೆ ಕೂಗಲಾಗುತ್ತಿದೆ.

ದಾವಣಗೆರೆ: ಮತ್ತೆ ಮೂವರಲ್ಲಿ ಸೋಂಕು, ಓರ್ವ ಮಹಿಳೆ ಸಾವು

ರಾಜ್ಯದ 20 ಮೆಡಿಕಲ್ ಕಾಲೇಜುಗಳ ನಿವಾಸಿ ವೈದ್ಯರಿಂದ ಆಯಾ ಜಿಲ್ಲಾ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಆವರಣದಲ್ಲಿ ಕ್ಯಾಂಡಲ್ ಮಾರ್ಚ್‌ ನಡೆಸಲಾಗಿದೆ. 2015 ರಿಂದ ನಿವಾಸಿ ವೈದ್ಯರಿಗೆ ಒಂದೇ ರೀತಿಯ ವಿದ್ಯಾರ್ಥಿ ಭತ್ಯೆಯನ್ನೆ ನೀಡಲಾಗುತ್ತಿದೆ. ಹೀಗಾಗಿ, 5 ವರ್ಷಗಳಿಂದ ವಿದ್ಯಾರ್ಥಿ ಭತ್ಯೆ ಪರಿಷ್ಕರಣೆ ಮಾಡಿಲ್ಲ ಎಂದು ನಿವಾಸಿ ವೈದ್ಯರು ಆರೋಪ ಮಾಡಿದ್ದಾರೆ.

ಎಂಸಿಐ (Medical Council of India) ನಿಯಮಾನುಸಾರ ವಿದ್ಯಾರ್ಥಿ ಭತ್ಯೆ ಪರಿಷ್ಕರಣೆ ಮಾಡಿಬೇಕು. ವಿದ್ಯಾರ್ಥಿ ಭತ್ಯೆದಲ್ಲಿ ಹೆಚ್ಚಳ ತರಬೇಕು ಎಂದು ನಿವಾಸಿ ವೈದ್ಯರು ಒತ್ತಾಯ ಮಾಡಿದ್ದಾರೆ.

English summary
Resident doctor protest in davanagere from covid ward. The doing their work by wearing black tape.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X