ಮೊಣಕಾಲುದ್ದ ನೀರಲ್ಲಿ ತೆಪ್ಪ ನಡೆಸಿದ ರೇಣುಕಾಚಾರ್ಯ!
Recommended Video
ದಾವಣಗೆರೆ, ಆಗಸ್ಟ್ 10: ತುಂಗಾಭದ್ರ ಹೊಳೆ ನೀರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದಾವಣಗೆರೆಯ ಹೊನ್ನಾಳಿಯ ಕೆಲ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿವೆ. ಹೀಗಾಗಿ ಪರಿಸ್ಥಿತಿಯನ್ನು ಅವಲೋಕಿಸಲು ಮುಳುಗಡೆಯಾದ ಪ್ರದೇಶಕ್ಕೆ ಶಾಸಕ ರೇಣುಕಾಚಾರ್ಯ ಭೇಟಿ ನೀಡಿದ್ದರು. ಆದರೆ ಅವರು ಅಲ್ಲಿಗೆ ತೆರಳಿದ ರೀತಿ ಈಗ ಭಾರೀ ಸುದ್ದಿಯಾಗಿದೆ. ಮೊಣಕಾಲುದ್ದ ನೀರಿನಲ್ಲಿ ತೆಪ್ಪ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅಷ್ಟೇ ನೀರಿನಲ್ಲಿ ತೆಪ್ಪ ನಡೆಸಿ ಶೋ ಕೊಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ, ಜೋಕ್ ಗಳು ಹರಿದಾಡುತ್ತಿವೆ. ಪಕ್ಕದಲ್ಲೇ ಜನರು ನೀರಿನಲ್ಲಿ ಆರಾಮಾಗಿ ನಡೆದಾಡುತ್ತಿದ್ದಾರೆ. ಆದರೆ ಇವರು ತೆಪ್ಪವನ್ನು ಭಾರೀ ಕಷ್ಟದಲ್ಲಿ ನಡೆಸುತ್ತಿದ್ದಾರೆ. ಇದೀಗ ಸುದ್ದಿಯಾಗಿದೆ.
ಹೊನ್ನಾಳಿಯ ಬಂಬೂ ಬಜಾರ್, ಬಾಲ್ ರಾಜ್ ಘಾಟ್ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಮನೆಗಳನ್ನು ಖಾಲಿ ಮಾಡಿ ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಶಾಸಕ ರೇಣುಕಾಚಾರ್ಯ ನೆರೆ ಹಾವಳಿಯಾದ ಪ್ರದೇಶದಲ್ಲಿ ಜನರನ್ನು ಬೇಗ ಮನೆಗಳನ್ನು ಖಾಲಿ ಮಾಡುವಂತೆ ಮನವಿ ಮಾಡಿಕೊಂಡರು.
ತುಂಗಾಭದ್ರ ಹೊಳೆಯ ಪಕ್ಕದಲ್ಲೇ ಇರುವ ಬೇಲಿ ಮಲ್ಲೂರು, ಕೋಟೆ ಮಲ್ಲೂರು ಗ್ರಾಮಗಳಲ್ಲಿ ನೂರಾರು ಎಕರೆ ಬೆಳೆ ಮುಳುಗಡೆಯಾಗಿದ್ದು. ಅಲ್ಲಿಗೂ ಭೇಟಿ ನೀಡಿದರು.

"ಸರ್ಕಾರದಿಂದ ಆದಷ್ಟು ಬೇಗ ಪರಿಹಾರ ನೀಡಲಾಗುತ್ತಿದೆ. ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು. ಮಾಜಿ ಸಿಎಂ ಸಿದ್ದರಾಮಯ್ಯನವರ ಕ್ಷೇತ್ರ ಬದಾಮಿಯಲ್ಲಿ ಪ್ರವಾಹ ಭೀತಿ ಎದುರಾದರೂ ಒಮ್ಮೆಯೂ ಭೇಟಿ ನೀಡಿಲ್ಲ. ಡೆಲ್ಲಿಗೆ ಹೋಗಿ ಸಭೆ ಮಾಡ್ತಾರೆ. ಕ್ಷೇತ್ರದ ಜನರ ಕಷ್ಟ ನೋಡಲು ಅವರಿಗೆ ಆಗಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಶಾಸಕರು ಕೇವಲ ವಿಧಾನಸೌಧಕ್ಕೆ ಶಾಸಕರಾಗಿದ್ದರೆ ವಿನಃ ಜನರಿಗಲ್ಲ" ಎಂದು ಕಿಡಿಕಾರಿದರು.












Click it and Unblock the Notifications