ಅತ್ಯಾಚಾರ; ಅಪರಾಧಿಗೆ 15 ವರ್ಷ ಶಿಕ್ಷೆ, 25 ಸಾವಿರ ದಂಡ

ದಾವಣಗೆರೆ, ಜನವರಿ 25 : ಯುವತಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆರೋಪಿಗೆ 15 ವರ್ಷ ಸಜೆ ಹಾಗೂ 25 ಸಾವಿರ ದಂಡ ವಿಧಿಸಲಾಗಿದೆ. ದಾವಣಗೆರೆಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಕುರಿತು ಆದೇಶ ನೀಡಿದೆ.

ಸೋಮವಾರ ನ್ಯಾಯಾಧೀಶರಾದ ಕೆಂಗಬಾಲಯ್ಯ ಈ ಕುರಿತು ತೀರ್ಪು ನೀಡಿದ್ದಾರೆ. ದಾವಣಗೆರೆ ತಾಲೂಕು ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ನರಗನಹಳ್ಳಿ ಗ್ರಾಮದ ವೀರೇಶ್ ಎಂಬಾತ ಯುವತಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾಗಿದೆ.

ಪೋಷಕರು ಕೆಲಸದ ನಿಮಿತ್ತ ಮನೆಯಿಂದ ಹೊರ ಹೋಗಿದ್ದಾಗ ಆರೋಪಿ ವೀರೇಶ್ ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ಹೇಳಿ ಅತ್ಯಾಚಾರ ಮಾಡಿದ್ದ. ಇದರಿಂದಾಗಿ ಆಕೆ ಗರ್ಭಿಣಿಯಾಗಿದ್ದಳು. ಮದುವೆಯಾಗುವಂತೆ ಕೇಳಿದಾಗ ಆರೋಪಿ ಆಕೆಗೆ ಜೀವ ಬೆದರಿಕೆ ಹಾಕಿದ್ದ.

Rape Case 15 Year Imprisonment For Man

ಈ ಕುರಿತು ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಗ್ರಾಮಾಂತರ ವೃತ್ತದಲ್ಲಿ ಪ್ರಕರಣ ದಾಖಲಾಗಿತ್ತು. ನಿರೀಕ್ಷಕರಾದ ಮಂಜುನಾಥ ಆರೋಪಿತರ ವಿರುದ್ದ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಇಂದು ಪ್ರಕರಣದ ತೀರ್ಪು ಹೊರಬಿದ್ದಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಅಪರಾಧಿಗೆ ಕಲಂ 376, 420, 506 ರಡಿ ಒಟ್ಟು 15 ವರ್ಷ ಸಜೆ ಹಾಗೂ 26 ಸಾವಿರ ದಂಡ ಪಾವತಿಸುವಂತೆ ಆದೇಶಿಸಿದ್ದಾರೆ. ದಂಡ ಕೊಡಲು ತಪ್ಪಿದ್ದಲ್ಲಿ ಒಟ್ಟಾರೆ 1 ವರ್ಷ 7 ತಿಂಗಳು ಹೆಚ್ಚುವರಿಯಾಗಿ ಸೆರೆವಾಸ ಅನುಭವಿಸಬೇಕು.

ದಂಡದ ಮೊತ್ತದಲ್ಲಿ 20 ಸಾವಿರಗಳನ್ನು ದೂರುದಾರರಿಗೆ ಪರಿಹಾರವಾಗಿ ಕೊಡಬೇಕು, ಉಳಿದ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಮತ್ತು ನ್ಯಾಯಾಂಗ ಬಂಧನದಲ್ಲಿರುವ ಅವಧಿಯನ್ನು ಸೆಟ್ ಆಫ್ ಮಾಡಬೇಕೆಂದು ಆದೇಶಿಸಿರುತ್ತಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ. ಕೆಂಚಪ್ಪ ವಾದ ಮಂಡನೆ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+