ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಕಬಡ್ಡಿ ತರಬೇತುದಾರ ಆತ್ಮಹತ್ಯೆ
ಬೆಂಗಳೂರು, ಅಕ್ಟೋಬರ್ 16: ಬೆಂಗಳೂರಲ್ಲಿ ಕಬಡ್ಡಿ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರುದ್ರಪ್ಪ ಹೊಸಮನಿ ಎಂಬುವರು ನೇಣುಬಿಗಿಸುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ರುದ್ರಪ್ಪ ಹೊಸಮನಿ ಅವರ ವಿರುದ್ಧ ಅತ್ಯಾಚಾರ ಪ್ರಕರಣ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು, ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ್ದ ಎಂದು ದೂರು ನೀಡಲಾಗಿತ್ತು. ಈ ಪ್ರಕರಣದ ಹಿನ್ನೆಲೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇನ್ನೂ ವಿಚಾರಣೆ ಪೂರ್ಣಗೊಂಡಿಲ್ಲ ಅಷ್ಟರೊಳಗೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಡೆತ್‌ನೋಟ್‌ನಲ್ಲಿ ನನ್ನನ್ನು ಕ್ಷಮಿಸಿ ನಿಮಗೆ ತುಂಬಾ ತೊಂದರೆ ಮಾಡಿದ್ದೇನೆ, ನಿಮ್ಮಿಬ್ಬರನ್ನು ನೋಡಬೇಕೆ ಎಂದು ಅನ್ನಿಸ್ತಿದೆ, ಮೊಬೈಲ್ ಇಲ್ಲ, ನಿಮ್ಮಿಬ್ಬರ ಫೋಟೊ ಕೂಡ ಇಲ್ಲ, ನಿಮಗೆ ತೊಂದರೆಯಾಗಿದೆ, ನನ್ನನ್ನು ಕ್ಷಮಿಸಿ, ನನ್ನ ದೇಹವನ್ನು ಯಾವುದಾದರೂ ಆಸ್ಪತ್ರೆಗೆ ದಾನ ಮಾಡಿ ಎಂದು ರುದ್ರಪ್ಪ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.












Click it and Unblock the Notifications