• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವಣಗೆರೆ: ಆಶಾ ಕಾರ್ಯಕರ್ತೆಯರಿಂದ ಅಂಚೆಪತ್ರ ಚಳುವಳಿ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಜುಲೈ 15: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನ 12 ಸಾವಿರ ರೂ. ನಿಗದಿಗೊಳಿಸಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಧರಣಿ 6 ನೇ ದಿನವೂ ಮುಂದುವರೆದಿದೆ.

   IPL 2020 moving to Dubai | Oneindia Kannada

   ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಇಂದು ದಾವಣಗೆರೆ ನಗರದ ಮುಖ್ಯ ಅಂಚೆ ಕಚೇರಿ ಬಳಿ ಪೋಸ್ಟ್ ಕಾರ್ಡ್ ಚಳುವಳಿ ಹಮ್ಮಿಕೊಂಡಿದ್ದರು. ಅಂಚೆಪತ್ರದಲ್ಲಿ ತಮ್ಮ ಬೇಡಿಕೆಗಳ ಪಟ್ಟಿ ಮಾಡಿ ಮುಖ್ಯಮಂತ್ರಿಗಳಿಗೆ ರವಾನಿಸಿದರು.

   ದಾವಣಗೆರೆ: ಸೀಲ್ ಡೌನ್ ಪ್ರದೇಶದಲ್ಲೇ ಅದ್ಧೂರಿ ವಿವಾಹ

   ಮಾಸಿಕ ಗೌರವಧನ 12 ಸಾವಿರ ರೂ. ನಿಗದಿ ಮಾಡಬೇಕು, ಕೋವಿಡ್-19 ವಿರುದ್ಧ ಹೋರಾಟಕ್ಕೆ ಅಗತ್ಯವಿರುವಷ್ಟು ಸುರಕ್ಷಾ ಸಾಮಗ್ರಿಗಳನ್ನು ನೀಡಬೇಕು ಹಾಗೂ ಕೋವಿಡ್-19 ಸೋಂಕಿಗೆ ಒಳಗಾದ ಆಶಾ ಕಾರ್ಯಕರ್ತೆಯರಿಗೆ ಪರಿಹಾರ, ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ "ಕೆಲಸ ಬಂದ್ ಚಳುವಳಿ' ನಡೆಸುತ್ತಿದ್ದೇವೆ ಎಂದು ತಿಳಿಸಿದರು.

   ರಾಜ್ಯ ಸರ್ಕಾರವು ಕೂಡಲೇ ಸಂಘದ ಪದಾಧಿಕಾರಿಗಳನ್ನು ಮಾತುಕತೆಗೆ ಕರೆದು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು.

   ಲಾಕ್ ಡೌನ್ ಹಿನ್ನೆಲೆ: ಬೆಂಗಳೂರಿನಿಂದ ದಾವಣಗೆರೆಗೆ ಬಂದಿರುವ ಜನರೆಷ್ಟು?

   ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ದುಡಿಯುತ್ತಿದ್ದಾರೆ. ಬಾಣಂತಿ ಮತ್ತು ಮಕ್ಕಳ ಆರೈಕೆಯಲ್ಲಿ ಮುತುವರ್ಜಿ ವಹಿಸುತ್ತಿದ್ದಾರೆ. ಆಶಾಗಳ ಸೇವೆಯಿಂದಾಗಿ ತಾಯಿ ಮತ್ತು ಶಿಶುಮರಣ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗಿದೆ ಎಂದರು.

   ಅಲ್ಲದೆ ಕಳೆದ 4 ತಿಂಗಳಿಂದ ನಗರ, ಪಟ್ಟಣ, ಹಳ್ಳಿ-ಸ್ಲಂಗಳಲ್ಲಿ ಕೋವಿಡ್-19 ರ ಸರ್ವೆಯಲ್ಲಿ ಅವರು ತೊಡಗಿದ್ದಾರೆ. ಸೋಂಕು ತಗಲುವ ಭೀತಿ ಇದ್ದರೂ ತಮ್ಮ ಮಕ್ಕಳು, ಕುಟುಂಬವನ್ನು ಬದಿಗಿಟ್ಟು, ಹಗಲು ರಾತ್ರಿಯೆನ್ನದೆ ಇಲಾಖೆಯ ನಿರ್ದೇಶನಗಳನ್ನು ಅವರು ಪಾಲಿಸುತ್ತಿದ್ದಾರೆ. ಆದರೆ ಅವರಿಗೆ ಗೌರವಯುತ ಜೀವನ ನಡೆಸಲು ಬೇಕಾದ ಕನಿಷ್ಠ ಸಂಭಾವನೆಯನ್ನು ನೀಡದಿರುವುದು ಖಂಡನೀಯವಾಗಿದೆ ಎಂದು ಅಳಲು ತೋಡಿಕೊಂಡರು.

   ಆಶಾಗಳನ್ನು "ಕೊರೊನಾ ವಾರಿಯರ್ಸ್' ಎಂದು ಕರೆದಿರುವ ಸರ್ಕಾರ, ಅಗತ್ಯವಾಗಿಬೇಕಾದಷ್ಟು ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ನೀಡಿಲ್ಲ. ಮುಖಕ್ಕೆ ಕರವಸ್ತ್ರವನ್ನು ಕಟ್ಟಿಕೊಂಡು ಸೋಂಕಿತರ ನಡುವೆ ಕೆಲಸ ಅವರು ಮಾಡುತ್ತಿದ್ದಾರೆ. ಹಲವರು ಸೋಂಕು ತಗುಲಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

   ಆಶಾಗಳ ಆರೋಗ್ಯ ರಕ್ಷಣೆಯ ಬಗ್ಗೆ ಕಾಳಜಿ ವಹಿಸಿ ಸುರಕ್ಷಾ ಸಾಮಗ್ರಿಗಳನ್ನು ಒದಗಿಸಬೇಕಾದುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಪ್ರತಿಭಟನಾಕಾರರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಮನವಿ ಮಾಡಿದರು. ಈ ವೇಳೆ ಎ.ನಾಗರತ್ನ, ಶಕುಂತಲಾ, ರುಕ್ಕಮ್ಮ, ಮಹಾದೇವಿ, ರೆಖಾ, ಲಕ್ಷ್ಮೀಬಾಯಿ, ಭಾರತಿ, ಪುಷ್ಪ, ಶೀಲಾ, ಸರ್ಮಮಂಗಲಾ, ನಾಗವೇಣಿ, ತಿಪ್ಪೇಸ್ವಾಮಿ ಅಣಬೇರು ಇದ್ದರು.

   English summary
   The rally in Davanagere forcing Asha Activists to increase their monthly wages continues for the 6th day.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more