ವಿಡಿಯೋ; ಬೈಕ್‌ನಲ್ಲಿ ಸಿಲಿಂಡರ್ ತಲುಪಿಸಿದ ವಾಲಿಬಾಲ್ ಆಟಗಾರ್ತಿ
ದಾವಣಗೆರೆ, ಮೇ 23; ಅಗತ್ಯ ಇರುವವರಿಗೆ ಆಕ್ಸಿಜನ್ ಸಿಗದಿದ್ದಾಗ ಸಹೋದರನ ಜೊತೆಗೆ ಆಕ್ಸಿಜನ್ ಸಿಲಿಂಡರ್ ಬೈಕ್‌ನಲ್ಲಿ ತಲುಪಿಸಿದ ಯುವತಿ ಜನರ ಮೆಚ್ಚುಗೆಗಳಿಸಿದ್ದಾಳೆ. ದಾವಣಗೆರೆಯ ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಹಬೀಬಾ ಉನ್ನೀಸಾ ಜನಪರ ಕಾಳಜಿ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ.
ಕಾಡಜ್ಜಿ ಗ್ರಾಮದ ಮಹಿಳೆಯೊಬ್ಬರಿಗೆ ತುರ್ತಾಗಿ ಆಕ್ಸಿಜನ್ ಅವಶ್ಯಕತೆ ಇತ್ತು. ಎಲ್ಲಿ ಹುಡುಕಾಡಿದರೂ ಸಿಗಲಿಲ್ಲ. ಆಗ ಐಐಟಿ ವಿದ್ಯಾರ್ಥಿನಿಯೂ ಆದ ಹಬೀಬಾ ಉನ್ನೀಸಾ ತನ್ನ ಸಹೋದರ ಬೈಕ್‌ನಲ್ಲಿ ಹೋಗಿ ಸಿಲಿಂಡರ್ ಎಲ್ಲಿ ಸಿಗುತ್ತೆ ಎಂದು ಕೇಳಿ ಅಲ್ಲಿಗೆ ಹೋಗಿ ತೆಗೆದುಕೊಂಡು ಬಂದಿದ್ದಾರೆ.
ಬೈಕ್‌ನ ಹಿಂಬದಿ ಕುಳಿತು ಸಿಲಿಂಡರ್ ತೆಗೆದುಕೊಂಡು ಬಂದು ಮಹಿಳೆಯ ಪ್ರಾಣ ಉಳಿಸಲು ನೆರವಾಗಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಹೆಚ್ಚಾಗಿದ್ದು, ಸ್ವತಃ ಆಕೆ ತೆರಳಿ ಕೊರೊನಾ ಕಾಲದಲ್ಲಿ ಸಮಾಜ ಸೇವೆ ಮಾಡಿದ್ದಾರೆ.

ಹಬೀಬಾ ಉನ್ನೀಸಾ 2017ರಲ್ಲಿ ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ತಂಡ ಚಿನ್ನದ ಪದಕ ಗೆಲ್ಲುವಲ್ಲಿ ಪ್ರಮುಖರಲ್ಲಿ ಒಬ್ಬರಾಗಿದ್ದರು.
ಟೇಕ್ವಾಂಡೋ ಆಟಗಾರ್ತಿಯೂ ಆಗಿರುವ ಹಬೀಬಾ ಉನ್ನೀಸಾ ತಂದೆ ಮಹಮ್ಮದ್ ಜಾಬೀರ್ ಸಾಬ್ ವೃತ್ತಿಯಲ್ಲಿ ಆಟೋ ಚಾಲಕರು. ಹಬೀಬಾ ಉನ್ನೀಸಾ ಜನರ ಕಷ್ಟಕ್ಕೆ ಸ್ಪಂದಿಸುವ ಗುಣ ಹೊಂದಿದ್ದಾರೆ.
ತನ್ನ ಕೈಯಲ್ಲಾದಷ್ಟು ನೆರವು ನೀಡಬೇಕೆಂಬ ಹಂಬಲ ಇದೆ. ಆಕ್ಸಿಜನ್ ಸಿಗದ ಕಾರಣ ಕಷ್ಟಪಟ್ಟು ಜಂಬೋ ಸಿಲಿಂಡರ್ ತೆಗೆದುಕೊಂಡು ಬಂದ ಕೆಲಸ ಮೆಚ್ಚುವಂತದ್ದು ಎಂದು ಟಿ. ಟಿಪ್ಪು ಹೇಳಿದ್ದಾರೆ.












Click it and Unblock the Notifications