ದಾವಣಗೆರೆಯಲ್ಲಿ ಮದ್ಯಪ್ರಿಯರಿಗೆ ಶಾಕ್ ಕೊಟ್ಟ ಜಿಲ್ಲಾಡಳಿತ

ದಾವಣಗೆರೆ, ಮೇ 04: ದಾವಣಗೆರೆಯಲ್ಲಿ ಇಂದು 9 ಗಂಟೆಗೆ ಮದ್ಯದ ಅಂಗಡಿಗಳು ತೆರೆಯುತ್ತವೆ ಎಂದು ಕಾದು ಕುಳಿತಿದ್ದ ಮದ್ಯಪ್ರಿಯರಿಗೆ ಆಘಾತವಾಗಿದೆ. ದಾವಣಗೆರೆಯ ಮಹಾನಗರ ಪಾಲಿಕೆ ವ್ಯಾಪ್ತಿಯ ಯಾವುದೇ ಮದ್ಯದ ಅಂಗಡಿಗಳನ್ನು ತೆರೆಯುವ ಹಾಗೇ ಇಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಇದರಿಂದ ಮದ್ಯಪ್ರಿಯರ ಆಸೆಗೆ ತಣ್ಣೀರು ಎರಚಿದಂತಾಗಿದೆ.

ಬೆಳಿಗ್ಗೆಯಿಂದ ಇಲ್ಲಿನ ಎಂಆರ್ ಪಿ ಬಾರ್ ಗಳ ಮುಂದೆ ಜನರು ಮದ್ಯಕ್ಕಾಗಿ ಕಾದು ಕುಳಿತಿದ್ದಾರೆ. ಮದ್ಯದಂಗಡಿ ತೆರೆಯುವುದಿಲ್ಲ ಎಂದು ಹೇಳಿದ್ದರೂ, ಗೊಂದಲದಲ್ಲಿ ಕಾದು ಕುಳಿತಿದ್ದಾರೆ.

ಗ್ರಾಮಾಂತರ ಸೇರಿದಂತೆ ಉಳಿದ ತಾಲ್ಲೂಕುಗಳಲ್ಲಿ ಮದ್ಯ ಮಾರಾಟ ಇದೆ. 21 ಪಾಸಿಟಿವ್ ಕೇಸ್ ಹಿನ್ನೆಲೆಯಲ್ಲಿ ದಾವಣಗೆರೆ ನಗರದಲ್ಲಿ ಮಾತ್ರ ಮದ್ಯ ಮಾರಾಟ ಇಲ್ಲ. ಸೋಂಕಿನ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಈ ಕ್ರಮ ವಹಿಸಿದ್ದು, ದಾವಣಗೆರೆ ನಗರದಲ್ಲಿರುವ 100ಕ್ಕೂ ಹೆಚ್ಚು ಮದ್ಯದಂಗಡಿಗಳಲ್ಲಿ ಇಂದು ಎಣ್ಣೆ ಸಿಗುವುದಿಲ್ಲ ಎಂದು ತಿಳಿಸಿದೆ.

No Permission To Open Liquor Shops In Davanagere City

ಬಾರ್ ಗಳ ಮುಂದೆ ಬ್ಯಾರಿಕೇಡ್: ಗ್ರಾಮಾಂತರ ಭಾಗದಲ್ಲಿ ಬಾರ್ ಗಳ ಮಾಲೀಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಮದ್ಯಪ್ರಿಯರು ಈ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಮದ್ಯ ಖರೀದಿಸುವ ಜವಾಬ್ದಾರಿ ಅವರದಾಗಿದೆ. ದಿನಕ್ಕೆ ಒಬ್ಬ ವ್ಯಕ್ತಿಗೆ ಎರಡುವರೆ ಲೀಟರ್ ಲಿಕ್ಕರ್, 9 ಲೀಟರ್ ಬಿಯರ್ ಖರೀದಿಸಲು ಸರ್ಕಾರ ಅವಕಾಶ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+