ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ "ಕಲ್ಕಿ'' ಟಗರು, ಇಲ್ಲಿದೆ ವಿಶೇಷತೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್‌, 29: ಕೆಲವರು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಇನ್ನು ಕೆಲವು ಶ್ರೀಮಂತರು ಹುಟ್ಟುಹಬ್ಬಕ್ಕಾಗಿ ದೊಡ್ಡ ದೊಡ್ಡ ಹೊಟೇಲ್, ರೆಸಾರ್ಟ್‌ಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ದಾವಣಗೆರೆಯಲ್ಲಿ ತಳ್ಳುವ ಗಾಡಿಯಲ್ಲಿ ಸೊಪ್ಪು ಮಾರಾಟ ಮಾಡುವ ಯುವಕ ವಿನಯ್‌ ಎಂಬಾತ ತನ್ನ ನೆಚ್ಚಿನ "ಕಲ್ಕಿ'' ಎಂಬ ಟಗರಿನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

ನಗರದ ಪ್ರಮುಖ ರಸ್ತೆಗಳಲ್ಲಿ ತಳ್ಳುವ ಗಾಡಿ ಮೂಲಕ ವಿವಿಧ ಬಗೆಯ ಸೊಪ್ಪು ಮಾರಾಟ ಮಾಡುವುದು ವಿನಯ್‌ನ ಪ್ರಮುಖ ಕಾಯಕವಾಗಿದೆ. ಈತನಿಗೆ ಟಗರು ಅಂದರೆ ತುಂಬಾನೇ ಪ್ರೀತಿ. ತನಗೆ ಕಷ್ಟವಿದ್ದರೂ ಅದನ್ನೆಲ್ಲಾ ಬದಿಗೊತ್ತಿ ಸಾವಿರಾರು ರೂಪಾಯಿ ಖರ್ಚು ಮಾಡಿ "ಕಲ್ಕಿ'' ಎಂಬ ಟಗರಿನ ಜನ್ಮದಿನ ವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ದಾವಣಗೆರೆ ನಗರದ ಶ್ರೀರಾಮ ಬಡಾವಣೆಯಲ್ಲಿ ಟಗರಿನ ಕೂದಲನ್ನು ಅಲಂಕರಿಸಿ ಕೇಕ್ ಕಟ್ ಮಾಡಿದ್ದಾನೆ. ಅಲ್ಲದೇ ಪಲಾವ್, ಕೇಸರಿ ಬಾತ್ ಉಪಾಹಾರ ತಯಾರಿಸಿ ಬಡಾವಣೆಯ ಜನರಿಗೆ ವಿತರಿಸುವ ಮೂಲಕ ಸಂಭ್ರಮಿಸಿದ್ದಾನೆ‌.

ಮಾಜಿ ಶಾಸಕ ತಿಪ್ಪೇಸ್ವಾಮಿ ಸಮಾಧಿ ಧ್ವಂಸ ವಿರೋಧಿಸಿ ಪ್ರತಿಭಟನೆಮಾಜಿ ಶಾಸಕ ತಿಪ್ಪೇಸ್ವಾಮಿ ಸಮಾಧಿ ಧ್ವಂಸ ವಿರೋಧಿಸಿ ಪ್ರತಿಭಟನೆ

ಕದರಮಂಡಲಗಿಯಿಂದ ತಂದಿದ್ದ ಟಗರು

ಕದರಮಂಡಲಗಿಯಿಂದ ತಂದಿದ್ದ ಟಗರು

ಕಳೆದ ಒಂದು ವರ್ಷದ ಹಿಂದೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ 35 ಸಾವಿರ ರೂಪಾಯಿ ಕೊಟ್ಟು ಈ ಟಗರನ್ನು ಖರೀದಿಸಿದ್ದ. ಬಳಿಕ ದಾವಣಗೆರೆಗೆ ಬಂದ ಟಗರಿಗೆ "ಕಲ್ಕಿ'' ಎಂಬ ಹೆಸರಿಟ್ಟು, ಮನೆ ಸದಸ್ಯನಂತೆ ಸಾಕಲು ಶುರು ಮಾಡಿದ್ದ. ದಿನಕಳೆದಂತೆ ಬಡಾವಣೆಯ ಯುವಕರು, ಮಹಿಳೆಯರು, ಮಕ್ಕಳು, ಯುವತಿಯರು ಸೇರಿದಂತೆ ಎಲ್ಲರ ಅಚ್ಚುಮೆಚ್ಚಿಗೆ ಈ ಟಗರು ಪಾತ್ರವಾಗಿದೆ.

ಕಾಳಗ ಸ್ಪರ್ಧೆಯಲ್ಲಿ ಟಗರು ಭಾಗಿ

ಕಾಳಗ ಸ್ಪರ್ಧೆಯಲ್ಲಿ ಟಗರು ಭಾಗಿ

ಇನ್ನು ಕಳೆದ ಒಂದು ವರ್ಷದಲ್ಲಿ ಹಲವು ಟಗರು ಕಾಳಗ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನವನ್ನು ಸಹ ಗೆದ್ದಿದೆ. ಕೆಲ ಪಂದ್ಯಗಳಲ್ಲಿ ಕೂದಲೆಳೆ ಅಂತರದಲ್ಲಿ ಸೋತರೂ, ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಸ್ಪರ್ಧೆಯಲ್ಲಿ ಪೊಗರು ತೋರಿಸಿದ ಕೀರ್ತಿ ಈ ಟಗರಿಗೆ ಸಲ್ಲುತ್ತದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.

ಕಲ್ಕಿಯನ್ನು ಮಾರುವುದಿಲ್ಲ, ಮಾಲೀಕ

ಕಲ್ಕಿಯನ್ನು ಮಾರುವುದಿಲ್ಲ, ಮಾಲೀಕ

"ಕಲ್ಕಿ'' ಟಗರು ಪ್ರದರ್ಶನ ತೋರಿದ್ದನ್ನು ನೋಡಿದ ಕೆಲವರು ಒಂದೂವರೆ ಲಕ್ಷ ರೂಪಾಯಿ ನೀಡುತ್ತೇವೆ, ಇದನ್ನು ನೀಡುವಂತೆ ಕೇಳಿದ್ದಾರೆ. ದಿನ ಕಳೆದಂತೆ ಈ ಟಗರಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಬಡಾವಣೆಯ ಜನರ ಪ್ರೀತಿ, ವಿಶ್ವಾಸ, ಬೆಸೆದಿರುವ ಇದರ ಬಾಂಧವ್ಯ ಕಂಡವರು ಪುಳಕಿತರಾಗುತ್ತಿದ್ದಾರೆ. ಹಾಗೆಯೇ ಅಲ್ಲಿನ ಸುತ್ತಮುತ್ತಲಿನ ಜನತೆ ಇದರ ಜೊತೆಗೆ ಸ್ವಲ್ಪ ಹೊತ್ತು ಆಟವಾಡುವ ಮೂಲಕ ರಿಲ್ಯಾಕ್ಸ್ ಪಡೆದುಕೊಳ್ಳುತ್ತಿದ್ದಾರೆ. ಟಗರು ಮಾಲೀಕ ವಿನಯ್‌ ಮಾತ್ರ ಯಾವುದೇ ಕಾರಣಕ್ಕೂ ತನ್ನ ನೆಚ್ಚಿನ "ಕಲ್ಕಿ''ಯನ್ನು ಮಾರಾಟ ಮಾಡುವುದಿಲ್ಲ. ಇದು ನಮ್ಮ ಕುಟುಂಬ, ನೆರೆಹೊರೆಯವರು, ಅಕ್ಕಪಕ್ಕದವರ ಪ್ರೀತಿ ಸಂಪಾದನೆ ಮಾಡಿದೆ. ದಿನಕ್ಕೆ ಒಮ್ಮೆಯಾದರೂ ಟಗರಿನ ಮುಖ ನೋಡದಿದ್ದರೆ ಸಮಾಧಾನ ಇರಲ್ಲ ಎಂದು ಹೇಳುತ್ತಿದ್ದಾರೆ.

ಕಲ್ಕಿ ಟಗರಿನ ಆಹಾರ ಪದ್ಧತಿ ಹೇಗಿದೆ?

ಕಲ್ಕಿ ಟಗರಿನ ಆಹಾರ ಪದ್ಧತಿ ಹೇಗಿದೆ?

ಆಡಂಬರದ ಆಚರಣೆ ಕೇವಲ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳಿಗೂ ಮಾಡಬೇಕು. ಆಗ ಅವು ನಮ್ಮೊಟ್ಟಿಗೆ ನಿಷ್ಕಲ್ಮಷ ಪ್ರೀತಿ ತೋರುತ್ತವೆ‌. ನಮ್ಮ ಒತ್ತಡದ ಜೀವನಕ್ಕೆ ರಿಲ್ಯಾಕ್ಸ್ ಕೊಡುತ್ತವೆ. ಹಾಗಾಗಿ ನಮಗೆ ಇದು ಬರಿ ಟಗರು ಅಲ್ಲ‌. ನಮ್ಮ ಕುಟುಂಬದ ಸದಸ್ಯ ಎಂದು ಖುಷಿಯಿಂದಲೇ ಹೇಳುತ್ತಿದ್ದಾರೆ.
ಇನ್ನು ಕಲ್ಕಿಯ ಸಂಪೂರ್ಣ ಜವಾಬ್ದಾರಿಯನ್ನು ವಿನಯ್‌ನ ಆಪ್ತ ಸ್ನೇಹಿತ ವರುಣ್‌ ನೋಡಿಕೊಳ್ಳುತ್ತಿದ್ದಾನೆ. ಟಗರಿಗೆ ಪ್ರತಿದಿನ ಬೆಳಗ್ಗೆ 1 ಕೆಜಿ ಹುರುಳಿ ಕಾಳು, 2ಲೀಟರ್ ಹಾಲು, ದಿನಕ್ಕೆ ಆರು ಮೊಟ್ಟೆ, 100 ಗ್ರಾಂ ಪಿಸ್ತಾ, ಬಾದಾಮಿ, ಉತ್ತತ್ತಿ, ನಾಲ್ಕು ಪೆಂಡಿ ಹುಲ್ಲು ಕೊಡಲಾಗುತ್ತದೆ.‌ ಇದರ ಪೋಷಣೆ ಜವಾಬ್ದಾರಿ ವರುಣ್ ಅವರದ್ದೇ ಆಗಿದ್ದು, ಅವರೇ ಇದನ್ನು ಕಾಳಗಕ್ಕೆ ಸಜ್ಜುಗೊಳಿಸುತ್ತಿದ್ದಾರೆ. ಒಟ್ಟಿನಲ್ಲಿ ತಾನೇ ಕಷ್ಟಪಟ್ಟು ದುಡಿದು ಜೀವನ ಸಾಗಿಸುತ್ತಿರುವ ವಿನಯ್, ಸಾವಿರಾರು ರೂಪಾಯಿ ಖರ್ಚು ಮಾಡಿ ಟಗರು ಹುಟ್ಟುಹಬ್ಬ ಆಚರಣೆ ಮಾಡಿದ್ದು, ಎಲ್ಲರ ಪ್ರಶಂಸೆಗೆ ಪಾತ್ರವಾಗುವ ಜೊತೆಗೆ ಮಾದರಿಯೂ ಆಗಿದ್ದಾನೆ.

English summary
Kalki Tagaru grand birthday celebration in Davanagere, here see special of Fighter Kalki Tagaru, Tagaru Owner Vinay caught attention, Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X