ಮದ್ಯ ವ್ಯಸನಿಗಳ ಕಾಟ: ಬಾರ್ ಬಂದ್ ಮಾಡಿಸಿದ ಗ್ರಾಮಸ್ಥರು

ದಾವಣಗೆರೆ, ಮೇ 11: ಕೊರೊನಾ ವೈರಸ್ ಭೀತಿ ಮತ್ತು ಮದ್ಯಪ್ರಿಯರ ಕಾಟ ತಡೆಯಲಾಗದೇ ಬಾರ್ ಬಂದ್ ಮಾಡಿಸಿದ ಘಟನೆ ದಾವಣಗೆರೆ ತಾಲ್ಲೂಕಿನ ಜರೆಕಟ್ಟೆ ಗ್ರಾಮದಲ್ಲಿ ನಡೆದಿದೆ.

Recommended Video

      ದಾವಣಗೆರೆ ಜಿಲ್ಲೆಯವರೇ ದಾವಣಗೆರೆಗೆ ಹೋಗುವಂತಿಲ್ಲ,ಎಂಥಾ ಕಾಲ ಬಂತು ಈ ಜಿಲ್ಲೆಗೆ | Davangere | Oneindia Kannada

      ದಾವಣಗೆರೆ ನಗರದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜರೆಕಟ್ಟೆ ಗ್ರಾಮಸ್ಥರು ಭಯಗೊಂಡಿದ್ದಾರೆ. ದಾವಣಗೆರೆಯಲ್ಲಿ ಬಾರ್ ಗಳನ್ನು ಬಂದ್ ಮಾಡಿರುವುದರಿಂದ ಮದ್ಯ ವ್ಯಸನಿಗಳು ಗ್ರಾಮಕ್ಕೆ ಬರುತ್ತಿದ್ದಾರೆ.

      ನಗರ ವ್ಯಾಪ್ತಿಯಿಂದ 5 ಕಿ.ಮೀ ಸಮೀಪದಲ್ಲಿ ಜರೆಕಟ್ಟೆ ಗ್ರಾಮವಿದೆ. ನಗರದಿಂದ ಬಂದವರು ಗ್ರಾಮದಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಬೇಸತ್ತ ಗ್ರಾಮಸ್ಥರು ಬಾರ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

      The Jarekatte Villagers Who Made Liquor Shop Bandh

      ಮೇ 4 ರಿಂದ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ದಾವಣಗೆರೆಗೆ ಸುನಾಮಿಯಂತೆ ಅಪ್ಪಳಿಸಿದ ಕೊರೊನಾ ವೈರಸ್ ನಿಂದ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಲಾಯಿತು.

      ಗ್ರಾಮಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿರುವುದರಿಂದ ನಗರದ ಮದ್ಯಪ್ರಿಯರು ಪಕ್ಕದ ಜರೆಕಟ್ಟೆ ಗ್ರಾಮಕ್ಕೆ ತೆರಳುತ್ತಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವುದನ್ನು ಕಂಡು ಅಲ್ಲಿನ ಸ್ಥಳೀಯರು ಜರೆಕಟ್ಟೆ ಗ್ರಾಮವನ್ನು ಬಫರ್ ಝೋನ್ ಎಂದು ಘೋಷಿಸಲು ಜಿಲ್ಲಾಧಿಕಾರಿಗೆ ಆಗ್ರಹ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+