ಶಾಮನೂರು ಶಿವಶಂಕರಪ್ಪ ಪುತ್ರರ ಮನೆ ಮೇಲೆ ಐಟಿ ದಾಳಿ

Subscribe to Oneindia Kannada

ಬೆಂಗಳೂರು / ದಾವಣಗೆರೆ, ಜುಲೈ, 27: ಐಟಿ ಅಧಿಕಾರಿಗಳು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ ಶಾಕ್ ನೀಡಿದ್ದಾರೆ. ಶಿವಶಂಕರಪ್ಪ ಅವರ ಮೂವರು ಪುತ್ರರ ಬೆಂಗಳೂರು ಮತ್ತು ದಾವಣಗೆರೆ ನಿವಾಸದ ಮೇಲೆ ಐಟಿ ಅಧಿಕಾರಿಗಳು ಬುಧವಾರ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

ತೋಟಗಾರಿಕಾ ಸಚಿವ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಮತ್ತು ಸಹೋದರರಾದ ಎಸ್‌.ಎಸ್.ಗಣೇಶ್, ಎಸ್‌.ಎಸ್.ಬಕ್ಕೇಶ್ ನಿವಾಸದ ಮೇಲೂ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ.[ಶಾಮನೂರು - ಶೆಟ್ಟರ್ ಕುಟುಂಬದಲ್ಲಿ ಲಗ್ನದ ಸುದ್ದಿ]

 IT Raids minister SS Mallikarjun and bros SS Ganesh, SS Bakkesh,

ದಾಳಿ ವೇಳೆ ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ ಅವರು ನಿವಾಸದಲ್ಲಿ ಇರಲಿಲ್ಲವಾಗಿತ್ತು. ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.[ಆದಾಯ ತೆರಿಗೆ ಸಲ್ಲಿಕೆದಾರರ ಗಮನಕ್ಕೆ ಎರಡು ಸುದ್ದಿ]

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಲಿ ಸಚಿವರ ಮನೆ ಮೇಲೆಯೇ ದಾಳಿ ನಡೆಸಿರುವುದು ಅನೇಕ ಪ್ರಶ್ನೆಗಳನ್ನು ಎತ್ತಿದೆ. ಕರ್ನಾಟಕ ಕ್ಯಾಬಿನೆಟ್ ವಿಸ್ತರಣೆ ವೇಳೆ ಶಾಮನುರು ಶಿವಶಂಕರಪ್ಪ ಕೈಯಲ್ಲಿದ್ದ ತೋಟಗಾರಿಕೆ ಇಲಾಖೆಯನ್ನು ಮಗ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ನೀಡಲಾಗಿತ್ತು.

ಶಾಮನೂರು ಕುಟುಂಬ ಮೊದಲಿನಿಂದಲೂ ಉದ್ಯಮದಲ್ಲಿ ತೊಡಗಿಕೊಂಡೇ ಬಂದಿದೆ. ಕಬ್ಬು, ರಸಗೊಬ್ಬರ, ಸಕ್ಕರೆ ಕಾರ್ಖಾನೆ, ಜವಳಿ ಉದ್ಯಮದಲ್ಲಿ ಕುಟುಂಬ ತೊಡಗಿಸಿಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
IT raid on sons of former minister of Karnataka Shamanuru Shivashankarappa , S. S. Mallikarjun, S.S. Ganesh, S. S. Bakkesh.
Please Wait while comments are loading...