ಈಗಲೂ ನಾನೇ ರೈತ ಸಂಘದ ರಾಜ್ಯಾಧ್ಯಕ್ಷ: ಕೋಡಿಹಳ್ಳಿ ಚಂದ್ರಶೇಖರ್
ದಾವಣಗೆರೆ,ಜುಲೈ 21: "ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ನಾನೇ. ಸಂಘದಿಂದ ಹೊರ ಹಾಕಿದವರು ಕುತಂತ್ರ ಮಾಡಿ ನನ್ನನ್ನು ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ. ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ನಮ್ಮ ಜೊತೆಗಿದ್ದಾರೆ. ಜಿಲ್ಲಾಧ್ಯಕ್ಷರು ಅವರ ಬೆಂಬಲಕ್ಕಿಲ್ಲ" ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಆಳಿಗೊಂದು ಕಲ್ಲು ಎಂಬಂತೆ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಕೆಲವರು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಪ್ರಾಮಾಣಿಕ ವ್ಯಕ್ತಿ ಮೇಲೆ ದಾಳಿ ಮಾಡಿದರೆ ಉಳಿಯೋದಿಲ್ಲ" ಎಂದು ಕೋಡಿಹಳ್ಳಿ ಚಂದ್ರಶೇಖರ್ ಗುಡುಗಿದರು.
"ರೈತ ಸಂಘದ ಮುಖಂಡರು ಪಕ್ಷಗಳು ಹಾಗೂ ಸರ್ಕಾರದ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ. 25ಕ್ಕೂ ಹೆಚ್ಚು ರೈತ ಸಂಘಟನೆಗಳು ಹಾಗೂ ಇದರ ಹೆಸರಿನಲ್ಲಿ 25 ಎನ್‌ಜಿಒಗಳಿವೆ. ವಿದ್ಯಾರ್ಥಿ ದಿಸೆಯಿಂದಲೇ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಯಾರೋ ನಾಲ್ಕು ಮಂದಿ ಹೇಳಿದ ಮಾತ್ರಕ್ಕೆ ಅದು ಆಗುವುದಿಲ್ಲ. ಮಗನ, ಮಗಳ ಮದುವೆಗೆಂದು ರಜೆ ಹಾಕಿ ಹೋಗಿ ಮತ್ತೆ ಬಂದು ತೊಡಗಿಸಿಕೊಂಡಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ಎಷ್ಟು ಕ್ರಿಯಾಶೀಲನಾಗಿದ್ದೇನೋ ಈಗಲೂ ಅಷ್ಟೇ ಸಕ್ರಿಯವಾಗಿದ್ದೇನೆ . ನಮಗೂ ಜವಾಬ್ದಾರಿ ಇದೆ. ಸಂಘವನ್ನು ಮುನ್ನೆಡೆಸಿಕೊಂಡು ಹೋಗುವ ಶಕ್ತಿ ಇದೆ" ಎಂದು ಹೇಳಿದರು.
"ಹೆಚ್. ಆರ್. ಬಸವರಾಜಪ್ಪ ಸೇರಿದಂತೆ ಕೆಲವರನ್ನು 1998ರಲ್ಲಿಯೇ ಪ್ರೊ. ನಂಜುಂಡಸ್ವಾಮಿ ಬಣದಿಂದ ಕಿತ್ತು ಹಾಕಲಾಗಿದೆ. ನಂಜುಂಡಸ್ವಾಮಿ ಬಣದ ಅಧ್ಯಕ್ಷನಾಗಿ ಅಂದಿನಿಂದಲೂ ಮುಂದುವರಿದಿದ್ದೇನೆ. ಈಗಲೂ ನಾನೇ ಅಧ್ಯಕ್ಷ. ನಾವು ಹೊರಹಾಕಿದವರು ಈಗ ಅಧ್ಯಕ್ಷ ಎನ್ನಲು ಅವರ ಜೊತೆ ಜಿಲ್ಲಾಧ್ಯಕ್ಷರು ಇದ್ದಾರೆಯೇ?" ಎಂದು ಹೇಳಿದರು.

ನನ್ನನ್ನು ಸಂಘದಿಂದ ಕಿತ್ತು ಹಾಕುವ ಪ್ರಶ್ನೆಯೇ ಉದ್ಭವಿಸದು
"ನಾನು ಐದು ವರ್ಷ ಇಲ್ಲವೇ ಹತ್ತು ವರ್ಷ ಚಳವಳಿಯಿಂದ ದೂರ ಇದ್ದು, ವೈಯಕ್ತಿಕ ಕೆಲಸ ಮುಗಿಸಿಕೊಂಡು ಮತ್ತೆ ಬಂದವನಲ್ಲ. ನಾಲ್ಕು ದಶಕಗಳಿಂದಲೂ ರೈತ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಕಾರ್ಯಕಾರಿ ಸಮಿತಿ ನಮ್ಮದಿರುವಾಗ ನನ್ನನ್ನು ಕಿತ್ತು ಹಾಕುವ ಪ್ರಶ್ನೆಯೇ ಉದ್ಭವಿಸದು. ರೈತ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳು ಅಧ್ಯಕ್ಷರು, ಕಾರ್ಯಕಾರಿ ಸಮಿತಿಗಳು ಯಾರ ಜೊತೆ ಇರುತ್ತವೆಯೋ ಅವರೇ ಅಧ್ಯಕ್ಷರು. ಈಗ ಇವುಗಳು ನನ್ನ ಜೊತೆ ಇರುವುದರಿಂದ ನಾನೇ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ" ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಸ್ಪಷ್ಟಪಡಿಸಿದರು.

ನನ್ನ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದ್ದೇನೆ
"ನಾನು ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡಲ್ಲ. ನನ್ನ ಮೇಲೆ ಆರೋಪ ಕೇಳಿ ಬಂದಾಗ ಸ್ಪಷ್ಟನೆ ನೀಡಿದ್ದೇನೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇನೆ. ದೆಹಲಿಯಲ್ಲಿನ ರೈತ ಹೋರಾಟ ಸಂಬಂಧ ಮೂರು ಸಾವಿರ ಕೋಟಿ ರೂಪಾಯಿ ಯಾರಿಗೆ ಕೊಡಬೇಕು? ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗಾ? ಸಾರಿಗೆ ನೌಕರರ ಹೋರಾಟ ಕುರಿತಂತೆ 35 ಕೋಟಿ ರೂಪಾಯಿ ಯಡಿಯೂರಪ್ಪ, ಲಕ್ಷ್ಮಣ ಸವದಿ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ನೀಡಬೇಕಿತ್ತಾ?. ಅಧಿಕಾರಿಗಳಿಗೆ ಕೊಡಬೇಕಿತ್ತಾ?. ಸಾರಿಗೆ ನೌಕರರ ಕಷ್ಟದ ಅರಿವು ನನಗಿದೆ. ಸರಕಾರದ ಶೇಕಡಾ 40ರಷ್ಟು ಪರ್ಸಂಟೇಜ್ ಬಗ್ಗೆ ನಾನೇ ಧ್ವನಿ ಎತ್ತಿದ್ದೆ. ಈಗ ಹಣ ಪಡೆದಿದ್ದೇ ಆದಲ್ಲಿ ಮಾತನಾಡಲು ನೈತಿಕತೆ ಇರುತಿತ್ತಾ?" ಎಂದು ಪ್ರಶ್ನಿಸಿದರು.

ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ ಬಳಿಯಬಾರದಿತ್ತು
"ನಾನು ಭ್ರಷ್ಟನಾಗಿಲ್ಲ. ರಾಜಕೀಯ ಪಕ್ಷಗಳು ನಮ್ಮ ಹೋರಾಟ ಹಾಗೂ ರಾಜ್ಯದಲ್ಲಿ ರಾಜಕೀಯ ಧೃವೀಕರಣ ಆಗುತ್ತದೆ ಎಂಬ ಭಯದಿಂದ ಪಿತೂರಿ ನಡೆಸಿವೆ. ರಾಜಕಾರಣವನ್ನು ಬದಲಾಯಿಸುವ ಪ್ರಬಲ ಶಕ್ತಿ ರೈತ ಸಂಘಕ್ಕಿದೆ. ಹಾಗಾಗಿ ರಾಜಕೀಯ ವಲಯದಲ್ಲಿ ತಲ್ಲಣ ಶುರುವಾಗಿದೆ. ಆದ್ದರಿಂದ ಯಾವುದೋ ರಾಜಕೀಯ ಪಕ್ಷಗಳು ರೈತ ಸಂಘವನ್ನು ಒಡೆಯಲು ಪ್ರಯತ್ನಿಸುತ್ತಿವೆ. ಆದರೆ ಇದು ನಡೆಯುವುದಿಲ್ಲ" ಎಂದರು.
"ನನ್ನ ಮೇಲೆ ಭ್ರಷ್ಟ, ದುಷ್ಟ ಅಂತೆಲ್ಲಾ ಆರೋಪ ಮಾಡಿದ್ದಾರೆ. ಇದೆಲ್ಲವೂ ಸುಳ್ಳು. ಭಾರತೀಯ ಕಿಸಾನ್ ಸಂಘದ ರಾಕೇಶ್ ಟಿಕಾಯತ್ ಕರೆಯಿಸಿ ನನ್ನ ವಿರುದ್ಧ ಹೇಳಿಕೆ ನೀಡಿಸಲು ಪ್ರಯತ್ನಿಸಿದರು. ಅವರ ಮುಖಕ್ಕೆ ಮಸಿ ಬಳಿದ ಘಟನೆ ನಡೆಯಬಾರದಿತ್ತು. ಇದು ನನಗೂ ಬೇಸರ ತರಿಸಿದೆ" ಎಂದು ಹೇಳಿದರು.

ಆಡಳಿತ-ವಿರೋಧ ಪಕ್ಷಗಳಲ್ಲಿ ವ್ಯತ್ಯಾಸವಿಲ್ಲ
"ಅಗತ್ಯ ವಸ್ತುಗಳಿಗೆ ಜಿಎಸ್‌ಟಿ ಏರಲಾಗಿದೆ, ಜನ ಸಾಮಾನ್ಯ ತಾವೂ ಕಷ್ಟ ಪಟ್ಟು ದುಡಿದ ಹಣವನ್ನು ಸಂಪೂರ್ಣವಾಗಿ ಸರಕಾರಕ್ಕೆ ತೆರಿಗೆ ರೂಪದಲ್ಲಿ ತೆರಬೇಕಾಗಿರುವುದು ಖಂಡನೀಯ. ಖರೀದಿ ಹಾಗೂ ಮಾರಾಟ ಮಾಡುವಾಗಲೂ ತೆರಿಗೆ ನೀಡಬೇಕಾಗಿದೆ. ಇದೆಲ್ಲವನ್ನು ಖಂಡಿಸಬೇಕಾಗಿರುವ ವಿರೋಧ ಪಕ್ಷಗಳು ಜನರ ಪರ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಕಂಡುಬರುತ್ತಿಲ್ಲ. ಇದರಿಂದಾಗಿ ಜನರು ಬೀದಿಗೆ ಬಂದು ಹೋರಾಟ ಮಾಡಬೇಕು" ಎಂದು ತಿಳಿಸಿದರು.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications