ಬೆಣ್ಣೆನಗರಿ ದಾವಣಗೆರೆಯಲ್ಲಿ ಬಣ್ಣದೋಕುಳಿಯ ಸಡಗರ ಹೀಗಿತ್ತು, ಇಲ್ಲಿದೆ ವಿವರ
ದಾವಣಗೆರೆ, ಮಾರ್ಚ್, 08: ಜಿಲ್ಲೆಯಾದ್ಯಂತ ಬಣ್ಣದೋಕುಳಿ ಸಂಭ್ರಮ, ಸಡಗರ ಮನೆ ಮಾಡಿತ್ತು. ಇಂದು ಬೆಣ್ಣೆನಗರಿಯ ಜನ ಬಣ್ಣದ ಲೋಕದಲ್ಲಿ ಮಿಂದೆದಿದ್ದರು. ರಾಮ್ ಅಂಡ್ ಕೋ ಸರ್ಕಲ್‌ನಲ್ಲಿ ಯುವಕ, ಯುವತಿಯರು, ಮಹಿಳೆಯರ ನೃತ್ಯವಂತೂ ನೋಡುಗರ ಗಮನ ಸೆಳೆಯಿತು. ಪರಸ್ಪರ ಬಣ್ಣ ಎರಚಿಕೊಳ್ಳುತ್ತಾ ಡಿಜೆ ಸೌಂಡ್‌ಗೆ ಸಖತ್ತಾಗಿಯೇ ಸ್ಟೆಪ್ ಹಾಕಿ ಸಂಭ್ರಮಿಸಿದರು.
ಸಖತ್ ಹೆಜ್ಜೆ ಹಾಕಿದ ಯುವಸಮೂಹ
ಕಣ್ಣಿಗೆ ಮುದನೀಡುವ ವಸ್ತ್ರಾಲಂಕಾರವನ್ನು ಹಾಕಿ ಡಿಜೆ ಹಾಡುಗಳಿಗೆ ನೃತ್ಯ ಮಾಡಿ ಗಮನಸೆಳೆದರು. ಬಣ್ಣ ಬಣ್ಣದ ವೇಷ ತೊಟ್ಟವರ ಬಟ್ಟೆಗಳೆಲ್ಲವೂ ಬಣ್ಣಗಳಿಂದ ಕಂಗೊಳಿಸುತ್ತಿದ್ದವು. ಇನ್ನು ಬಣ್ಣದಲ್ಲಿ ಮಿಂದೆದ್ದ ಯುವಸಮೂಹ ಡಿಜೆ ಸೌಂಡ್‌ಗೆ ಸಖತ್ ಸ್ಟೆಪ್ ಹಾಕಿದ್ದು, ಚಿಣ್ಣರ ಸಂಭ್ರಮವೂ ಕೂಡ ಮುಗಿಲು ಮುಟ್ಟಿತ್ತು.

ಹೋಳಿಯಲ್ಲಿ ಮಿಂದೆದ್ದ ದೇವನಗರಿ
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ರಾಮ್ ಅಂಡ್ ಕೋ ಸರ್ಕಲ್‌ನಲ್ಲಿ ಕಾಲೇಜು ಯುವಕ, ಯುವತಿಯರ ಡ್ಯಾನ್ಸ್ ಮತ್ತಷ್ಟು ಕಳೆಗಟ್ಟುವಂತೆ ಮಾಡಿತ್ತು. ನಗರದಾದ್ಯಂತ ಯುವಕರು ಬಣ್ಣ ಹಚ್ಚಿಕೊಂಡು ಸಂಭ್ರಮಿಸುತ್ತಿದ್ದರೆ, ಬಡಾವಣೆಗಳಲ್ಲಿ ತಾವೇನೂ ಕಡಿಮೆ ಇಲ್ಲ ಎನ್ನುವಂತೆ ಜನರು ಮನೆಯಿಂದ ಹೊರ ಬಂದು ಬಣ್ಣದೋಕುಳಿ ಆಡಿ ಸಂಭ್ರಮಿಸಿದರು.
ವಿವಿಧ ಬಡಾವಣೆಗಳಲ್ಲಿ ಹೋಳಿ ಆಚರಣೆ
ವಿವಿಧ ಬಡಾವಣೆಗಳಲ್ಲಿ ಮಕ್ಕಳು, ಹಿರಿಯರೆನ್ನದೆ ಎಲ್ಲರೂ ಹಬ್ಬದ ಸಡಗರದಲ್ಲಿ ಮುಳುಗಿದ್ದರು. ಕುಟುಂಬದವರು, ಸ್ನೇಹಿತರು ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು. ಪ್ರತಿ ಬಾರಿಯೂ ರಾಮ್ ಅಂಡ್ ಕೋ ವೃತ್ತ ಸೇರಿದಂತೆ ಹಲವೆಡೆ ವಿವಿಧ ಸಮಿತಿ ವತಿಯಿಂದ ಹೋಳಿ ಹಬ್ಬ ಆಚರಿಸಲಾಗುತ್ತದೆ. ಬಣ್ಣ ಹಚ್ಚಿಕೊಂಡು, ತಮಟೆ ಮತ್ತು ಹಾಡಿಗೆ ಯುವ ಸಮೂಹ ಸಖತ್ ಡಾನ್ಸ್ ಮಾಡಿ ಸಂಭ್ರಮಿಸುವುದು ಇಲ್ಲಿನ ಪದ್ಧತಿಯಾಗಿದೆ.

ಬಣ್ಣದ ಓಕುಳಿಯಲ್ಲಿ ಮಿಂದೆದ್ದ ಯುವಕರು ದಾವಣಗೆರೆ ನಗರದ ವಿವಿಧೆಡೆ ಬೈಕ್‌ನಲ್ಲಿ ಸುತ್ತಾಡಿದರು. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಮದ್ಯ ನಿಷೇಧಿಸಲಾಗಿತ್ತು.












Click it and Unblock the Notifications