ದಾವಣಗೆರೆ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಹೊಸ ನಿಯಮ ಜಾರಿ: ಮಾಹಿತಿ ಇಲ್ಲಿದೆ ತಿಳಿಯಿರಿ
ಹೆದ್ದಾರಿಯಲ್ಲಿ ವಾಹನ ಸಚಾರಕ್ಕೆ ಹೊಸ ನಿಯಮ ಹೊರಡಿಸಲಾಗಿದೆ. ದಾವಣಗೆರೆಯಲ್ಲಿ ಮೊದಲ ಬಾರಿಗೆ ಈ ನಿಯಮವನ್ನು ಜಾರಿಗೆ ತರಲಾಗಿದೆ. ಹಾಗಾದರೆ ಈ ನಿಯಮದಲ್ಲಿ ಯಾವೆಲ್ಲ ಅಂಶಗಳು ಇವೆ ಎನ್ನುವುದನ್ನು ಗಮನಿಸಿ.
ದಾವಣಗೆರೆ, ಫೆಬ್ರವರಿ, 21: ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಪುಂಡರು ಅಟ್ಟಹಾಸ ಮೆರೆದಿರುವ ದೃಶ್ಯಗಳು ಬೆಳಕಿಗೆ ಬಂದಿವೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ಪ್ರತಿನಿತ್ಯ ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ಇಂತಹ ಪುಂಡರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ದಾವಣಗೆರೆಯಲ್ಲಿ ಮೊದಲ ಬಾರಿಗೆ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ.
ಹೆದ್ದಾರಿಯಲ್ಲಿ ಪಥ ಶಿಸ್ತು ಉಲ್ಲಂಘಿಸಿದವರಿಗೆ 500 ರೂ. ದಂಡ ಹಾಕಾಲಾಗುತ್ತದೆ. ಈ ಹೊಸ ನಿಯಮ ಸೋಮವಾರ (ಫೆಬ್ರವರಿ 20)ರ ಸಂಜೆಯಿಂದಲೇ ಜಾರಿಯಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ತಿಳಿಸಿದ್ದಾರೆ.
ನಗರದಲ್ಲಿ ಸಂಚಾರ ನಿಯಮಗಳ ಜಾಗೃತಿಗಾಗಿ ಬೈಕ್ ಜಾಥಾಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಜಿಲ್ಲೆಯ ವ್ಯಾಪ್ತಿಯಲ್ಲಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-48 ಹಾದು ಹೋಗಿದೆ. ದಾವಣಗೆರೆ ಜಿಲ್ಲೆಯ ವ್ಯಾಪ್ತಿಯ ಹೆದ್ದಾರಿಯಲ್ಲಿ ಸರ್ಕಾರ ನಿನ್ನೆ ಸಂಜೆಯಿಂದ ಪೈಲೆಟ್ ಪ್ರಾಜೆಕ್ಟ್ ಅನ್ನು ಆರಂಭಿಸಿದೆ. ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ದುರಂತಕ್ಕೆ ಕಡಿವಾಣ ಹಾಕುವುದು ಈ ಯೋಜನೆಯ ಉದ್ದೇಶವಾಗಿದೆ ಎಂದರು.

ಪಥ ಶಿಸ್ತು ಯೋಜನೆಯ ಉದ್ದೇಶ ಏನು?
ಪಥ ಶಿಸ್ತು ಅಂತಾ ಅನ್ನುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಜಿಲ್ಲೆಯಲ್ಲಿ ಆರು ಲೈನ್ ಹೆದ್ದಾರಿ ಇದೆ. ಹೊಸ ನಿಯಮದ ಪ್ರಕಾರ ಹೆಚ್ಚು ವೇಗವಾಗಿ ಹೋಗುವ ಕಾರು ಸೇರಿದಂತೆ ನಾಲ್ಕು ಚಕ್ರದ ವಾಹನಗಳಿಗೆ ಒಳ ಪಥವನ್ನು ನಿಗದಿ ಮಾಡಲಾಗಿದೆ. ಈ ಲೈಲ್‌ನಲ್ಲಿ ಭಾರಿ ವಾಹನಗಳು ಸಂಚರಿಸುವಂತಿಲ್ಲ. ಲಾರಿ, ಬಸ್ಸು ಸೇರಿದಂತೆ ಭಾರಿ ವಾಹನಗಳು ಎರಡನೇ ಲೈನ್‌ನಲ್ಲಿ ಚಲಿಸಬೇಕು. ಈ ನಿಯಮವನ್ನು ಉಲ್ಲಂಘಿಸಿದವರಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ.

ಭಾರಿ ವಾಹನಗಳು ಚಲಿಸಬೇಕಾದ ಪಥದ ವಿವರ
ಹೆದ್ದಾರಿಯಲ್ಲಿ ನಿಯಮ ಉಲ್ಲಂಘನೆಯಿಂದ ಎಷ್ಟೋ ದುರಂತಗಳು ಸಂಭವಿಸುತ್ತಿರುತ್ತವೆ. ದುರಂತಗಳನ್ನು ತಪ್ಪಿಸಲು ಈ ನಿಯವನ್ನು ಜಾರಿಗೆ ತರಲಾಗಿದೆ. ವಾಹನಗಳು ವೇಗವಾಗಿ ಚಲಿಸುವುದರಿಂದ ದುರಂತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಆದ್ದರಿಂದ ಹೊಸ ನಿಯಮದ ಪ್ರಕಾರ ಎರಡನೇ ಲೈನ್‌ನಲ್ಲಿ ಮಾತ್ರ ಭಾರಿ ವಾಹನಗಳು ಚಲಿಸಬೇಕು. ಹಾಗೆಯೇ ವೇಗವಾಗಿ ಹೋಗುವ ನಾಲ್ಕು ಚಕ್ರದ ವಾಹನಗಳಿಗೆ ಇನ್ನರ್ ಲೈನ್ ಮೀಸಲು ಎಂದು ತಿಳಿಸಿದರು.

ಟೋಲ್‌ಗಳಲ್ಲಿಯೇ ದಂದ ವಸೂಲಿ
ದಾವಣಗೆರೆ ಜಿಲ್ಲೆಯಲ್ಲಿ ಇದು ಪೈಲೆಟ್ ಪ್ರಾಜೆಕ್ಟ್ ಆಗಿ ಶುರುವಾಗಿದೆ. ಈ ನಿಯಮ ಮುಂದಿನ ದಿನಗಳಲ್ಲಿ ಎಲ್ಲ ಕಡೆ ಪಾಲನೆ ಆಗಲಿದೆ. ದಾವಣಗೆರೆ ಜಿಲ್ಲೆಯ ಹೆಬ್ಬಾಳ್ ಬಳಿ, ಹಾವೇರಿ ಜಿಲ್ಲೆ ಆರಂಭದಲ್ಲಿ ಚಳಗೆರೆ ಬಳಿ ಟೋಲ್ ಗೇಟ್‌ಗಳು ಇದ್ದು, ಈ ಎರಡು ಟೋಲ್‌ಗಳ ನಡುವೆ 65 ಕಿ.ಮೀ. ಅಂತರವಿದೆ. ಇದರ ನಡುವೆ 9 ಕಡೆಗಳಲ್ಲಿ ಸ್ವಯಂ ಚಾಲಿತ ಕ್ಯಾಮರಾಗಳನ್ನು ಹಾಕಲಾಗಿದೆ. ಬೃಹತ್ ವಾಹನಗಳು ಪಥ ಶಿಸ್ತು ಉಲ್ಲಂಘಿಸಿದರೆ ಅಂತಹ ವಾಹನದ ನಂಬರ್, ಸ್ಥಳ ಹಾಗೂ ಜಿಪಿಎಸ್ ಲೋಕೇಷನ್ ಇರುವ ಚಿತ್ರಗಳನ್ನು ಸೆರೆಯಾಗುತ್ತದೆ. ಈ ಚಿತ್ರಗಳನ್ನು ಟೋಲ್ ಗೇಟ್‌ನಲ್ಲಿರುವ ಮಲ್ಟಿ ಫಂಕ್ಷನಲ್ ಡಿವೈಸ್‌ಗೆ ರವಾನಿಸುತ್ತದೆ.

ಒಂಬತ್ತು ಕಡೆಗಳಲ್ಲಿ ಕ್ಯಾಮೆರಾಗಳ ಅಳವಡಿಕೆ
ಒಂದು ವೇಳೆ ಪಥ ಶಿಸ್ತು ಉಲ್ಲಂಘಿಸಿದ ವಾಹನಗಳು ಟೋಲ್ ಗೇಟ್‌ಗೆ ಬಂದ ನಂತರ ದಂಡ ವಿಧಿಸಲಾಗುತ್ತದೆ. ಟೋಲ್ ತಪ್ಪಿಸಿಕೊಂಡು ಮತ್ತೊಂದು ಟೋಲ್‌ಗೆ ಹೋದರೂ ಸಹ ಅಲ್ಲಿಯೂ ದಂಡ ವಿಧಿಸಲಾಗುತ್ತದೆ. ಇದು ಮುಖ್ಯವಾಗಿ ಬೃಹತ್ ವಾಹನ ಸವಾರರಿಗೆ ನೀಡಿದ ಎಚ್ಚರಿಕೆ ಸಂದೇಶವಾಗಿದೆ. ಒಂಬತ್ತು ಕ್ಯಾಮೆರಾಗಳು ಇದ್ದು, ಇವುಗಳಿಂದ ಹೆದ್ದಾರಿಯಲ್ಲಿ ನಡೆಯುವ ದುರಂತಗಳನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ. ಹಾಗೆಯೇ ಹೆದ್ದಾರಿ ದರೋಡೆಯಂತಹ ಪ್ರಕರಣಗಳು ಸಹ ನಿಯಂತ್ರಣಕ್ಕೆ ಬರುತ್ತವೆ ಎಂದು ತಿಳಿಸಿದರು.












Click it and Unblock the Notifications