ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು; ದಾವಣಗೆರೆಯಲ್ಲಿ ವರುಣನ ಆರ್ಭಟಕ್ಕೆ ನಲುಗಿದ ಜನರು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜುಲೈ 23; ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರಿದಿದೆ. ಕಳೆದ ಒಂದು ವಾರದಿಂದ ಮಳೆಯ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಎಲ್ಲಾ ತಾಲೂಕುಗಳಲ್ಲಿಯೂ ಉತ್ತಮ ಮಳೆಯಾಗಿದೆ. ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ.

ಜಿಲ್ಲೆಯ ಹಲವು ಪ್ರದೇಶಗಳಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಸೇತುವೆಗಳ ಮೇಲೆಯೂ ನೀರು ಬರುತ್ತಿದೆ. ಸಾವಿರಾರು ಎಕರೆ ಜಮೀನು ಜಲಾವೃತಗೊಂಡಿದೆ. ಮಳೆಯ ಅಬ್ಬರದಿಂದಾಗಿ ರೈತರು ಸಹ ಅಪಾರ ನಷ್ಟವನ್ನು ಅನುಭವಿಸಿದ್ದಾರೆ.

ಮುಂದಿನ ಮೂರ್ನಾಲ್ಕು ದಿನಗಳವರೆಗೂ ಈ ರಾಜ್ಯಗಳಲ್ಲಿ ಜೋರು ಮಳೆಮುಂದಿನ ಮೂರ್ನಾಲ್ಕು ದಿನಗಳವರೆಗೂ ಈ ರಾಜ್ಯಗಳಲ್ಲಿ ಜೋರು ಮಳೆ

ಜಿಲ್ಲೆಯಲ್ಲಿ ಇದುವರೆಗೆ ನೂರಾರು ಮನೆಗಳು ಮಳೆಯಿಂದಾಗಿ ಕುಸಿದಿವೆ. ಬೆಳೆದು ನಿಂತಿದ್ದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ನಾಟಿ ಮಾಡಲು ಸಂಗ್ರಹಿಸಿಟ್ಟಿದ್ದ ಸಸಿಗಳು ನೀರುಪಾಲಾಗಿವೆ. ಹರಿಹರ ತಾಲೂಕಿನ ದೊಡ್ಡಹಳ್ಳದ ಕೊಂಡಜ್ಜಿ ಹಾಗೂ ಗಂಗನರಸಿ ಸಂಪರ್ಕ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು ಸಂಪರ್ಕ ಕಡಿತಗೊಂಡಿದೆ.

ಕರಾವಳಿ, ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ: 3 ಜಿಲ್ಲೆಗಳಿಗೆ ರೆಡ್ ಅಲರ್ಟ್ಕರಾವಳಿ, ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ: 3 ಜಿಲ್ಲೆಗಳಿಗೆ ರೆಡ್ ಅಲರ್ಟ್

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ಎಸ್ಪಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆ ಕಡಿಮೆಯಾದ ಬಳಿಕ ಸೇತುವೆಗೆ ತಾತ್ಕಾಲಿಕ ವ್ಯವಸ್ಥೆ ಹಾಗೂ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

 ಮಹಾರಾಷ್ಟ್ರದಲ್ಲಿ ಭಾರೀ ಮಳೆ; ಭೂಕುಸಿತದಲ್ಲಿ 36 ಮಂದಿ ಸಾವು ಮಹಾರಾಷ್ಟ್ರದಲ್ಲಿ ಭಾರೀ ಮಳೆ; ಭೂಕುಸಿತದಲ್ಲಿ 36 ಮಂದಿ ಸಾವು

ಭರ್ತಿಯಾದ ಹಳ್ಳಕೊಳ್ಳಗಳು

ಭರ್ತಿಯಾದ ಹಳ್ಳಕೊಳ್ಳಗಳು

ಚಿತ್ರದುರ್ಗ ಜಿಲ್ಲೆಯ ಭರಮಸಾಗರ ತಾಲೂಕು, ಜಗಳೂರು. ದಾವಣಗೆರೆ ನಗರದಲ್ಲಿಯೂ ಧಾರಾಕಾರ ಮಳೆಯಾಗಿದ್ದು, ಇಲ್ಲಿಂದ ಹಳ್ಳ ಕೊಳ್ಳಗಳ ಮೂಲಕ ಯಥೇಚ್ಛ ನೀರು ಬಂದ ಕಾರಣ ಸೇತುವೆ ಕೊಚ್ಚಿ ಹೋಗಿದೆ.

ಚಿಕ್ಕಬಿದರೆಗೆ ಜಲದಿಗ್ಬಂಧನ

ಚಿಕ್ಕಬಿದರೆಗೆ ಜಲದಿಗ್ಬಂಧನ

ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದ ಜನರು ಭಾರೀ ಮಳೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ‌.‌ ಸುಮಾರು ಮೂರು ಸಾವಿರಕ್ಕೂ ಅಧಿಕ ಜನಸಂಖ್ಯೆಯುಳ್ಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಚಿಕ್ಕಬಿದರೆ - ಸಾರಥಿ ನಡುವಿನ ರಸ್ತೆ ಜಲಾವೃತಗೊಂಡಿದೆ. ವಾರದಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಕಳೆದ ಎರಡು ದಿನಗಳಿಂದ ವರುಣನ ಆರ್ಭಟ ಜಿಲ್ಲೆಯಲ್ಲಿ ತೀವ್ರಗೊಂಡಿದೆ.

ಯಾವ ವಾಹನಗಳು ಸಹ ಬರಲು ಆಗಲ್ಲ

ಯಾವ ವಾಹನಗಳು ಸಹ ಬರಲು ಆಗಲ್ಲ

ಚಿಕ್ಕಬಿದರಿ ಗ್ರಾಮ‌ ಹಾಗೂ ಸಾರಥಿ ಮಧ್ಯದ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಚಿಕ್ಕಬಿದರಿ ಗ್ರಾಮ ಸಂಪೂರ್ಣವಾಗಿ ದ್ವೀಪವಾದಂತಾಗಿದೆ. ಯಾವುದೇ ವಾಹನ ಬರೋಕೆ ಸಣ್ಣ ರಸ್ತೆಯೂ ಇಲ್ಲದಂತಾಗಿದೆ. ಸದ್ಯ ಚಿಕ್ಕಬಿದರಿ ಸಾರಥಿ ಗ್ರಾಮಗಳ ಮಧ್ಯೆ 7 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಸೇತುವೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತಿದ್ದು, ಇದರಿಂದ ಸೇತುವೆ ಕಾಮಾಗಾರಿಗೆ ನಿರ್ಮಿಸಿದ್ದು ಕಾಲಂಗಳು ಕೂಡ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿವೆ.

ಉಕ್ಕಿಹರಿಯುತ್ತಿದೆ ತುಂಗಭದ್ರಾ

ಉಕ್ಕಿಹರಿಯುತ್ತಿದೆ ತುಂಗಭದ್ರಾ

ಚಿಕ್ಕಬಿದರಿ ಗ್ರಾಮದಿಂದ ದಾವಣಗೆರೆ, ಹರಿಹರಕ್ಕೆ ಹೋಗಲು ದುಗ್ಗಾವತಿಯ ರಸ್ತೆಯಿದ್ದು, ಈ ರಸ್ತೆಯೂ ಸಂಪೂರ್ಣವಾಗಿ ಮಳೆಯಿಂದ ಜಲಾವೃತವಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಈ ಗ್ರಾಮಕ್ಕೆ ಸೇತುವೆ ನಿರ್ಮಿಸಿ ಕೊಡಬೇಕೆಂಬುದು ಗ್ರಾಮಸ್ಥರ ಬೇಡಿಕೆ. ಆ ಬಳಿಕ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರದ ಬಳಿ ಮನವಿ ಮಾಡಿಕೊಂಡರೂ ಈ ಗ್ರಾಮದಲ್ಲಿ ಸೇತುವೆ ಕಾಮಗಾರಿ ಆಗಲೇ ಇಲ್ಲ. ಚನ್ನಗಿರಿ ತಾಲೂಕಿನಲ್ಲಿ 9 ಮನೆಗಳಿಗೆ ಹಾನಿಯಾಗಿದ್ದರೆ, ದಿನವಿಡೀ‌ ಮಳೆ ಸುರಿಯುತ್ತಿರುವುದು ಹಾಗೂ ತುಂಗಾಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಸುಮಾರು 30ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ.

English summary
Heavy rain lashed the Davanagere district. Deputy Commissioner Mahanthesh Bilagi visited the rain hit areas and inspected the damages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X