ನಿಮ್ಮ ಅಣ್ಣ, ತಮ್ಮ ಅಂದ್ಕೊಂಡು ನನಗೆ ಅಧಿಕಾರ ಕೊಡಿ: ಎಚ್ ಡಿಕೆ ಮನವಿ
ನಿಮ್ಮ ಅಣ್ಣ ಅಥವಾ ತಮ್ಮ ಎಂದುಕೊಂಡು ನನಗೆ ಅಧಿಕಾರ ಕೊಡಿ. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಮನವಿ. ದಾವಣಗೆರೆಯಲ್ಲಿ ಶನಿವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಮನವಿ.
ದಾವಣಗೆರೆ, ಜುಲೈ 1: ''ನಿಮ್ಮ ಅಣ್ಣನೋ, ತಮ್ಮನೋ ಎಂದು ತಿಳಿದು ನನಗೆ ಅಧಿಕಾರ ಕೊಡಿ'' - ಇದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಅವರು ಜನತೆಯನ್ನು ಕೇಳಿಕೊಂಡ ಪರಿಯಿದು.
ದಾವಣಗೆರೆ ಹೈಸ್ಕೂಲು ಮೈದಾನದಲ್ಲಿ ಶನಿವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ''ಈಗಾಗಲೇ ಬಿಜೆಪಿಗೆ ಐದು ವರ್ಷ ಅಧಿಕಾರ ನೀಡಿದ್ದೀರಿ. ಈಗ ಕಾಂಗ್ರೆಸ್ಸಿಗೂ ಐದು ವರ್ಷ ಅಧಿಕಾರ ನೀಡಿದ್ದೀರಿ. ಈ ಬಾರಿ ನಮಗೆ ಅಧಿಕಾರ ನೀಡಿ'' ಎಂದು ಅವರು ಮನವಿ ಮಾಡಿದರು.

ಇದೇ ಸಮಾವೇಶದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನೂ ಜತೆಯಲ್ಲೇ ಆಚರಿಸಲಾಯಿತು. ''ಮಾಜಿ ಮುಖ್ಯಮಂತ್ರಿ ಎಚ್ .ಡಿ. ದೇವೇಗೌಡರು, ವಾಲ್ಮೀಕಿ ಜನಾಂಗವು ಸಬಲರಾಗಲು ಹೆಚ್ಚಾಗಿ ಶ್ರಮಿಸಿದ್ದಾರೆ. ಆದರೆ, ವಾಲ್ಮೀಕಿ ಜನಾಂಗ ಅದನ್ನು ಮರೆತಿದೆ. ಆದರೆ, 120ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ವಾಲ್ಮೀಕಿ ಮತದಾರರು ಹೆಚ್ಚು ಸಬಲರಾಗಿದ್ದಾರೆ'' ಎಂದು ಅವರು ತಿಳಿಸಿದರು.












Click it and Unblock the Notifications